Home » ಆರೋಗ್ಯಕ್ಕಾಗಿ ಯೋಗ
 

ಆರೋಗ್ಯಕ್ಕಾಗಿ ಯೋಗ

by Kundapur Xpress
Spread the love

ಕುಂದಾಪುರದ: ಎಂ.ಐ.ಟಿ.ಕೆ ಮೂಡ್ಲಕಟ್ಟೆಯ ಮೂಲ ವಿಜ್ಞಾನ ಮತ್ತು ಮಾನವಿಕ ವಿಭಾಗವು ಪ್ರಥಮ ವರ್ಷದ ಬಿಇ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಯೋಗಾಭ್ಯಾಸವನ್ನು ಆಯೋಜಿಸಿತ್ತು. ಶ್ರೀ ಗೋಪಾಲಕೃಷ್ಣ ದೀಕ್ಷಿತ್ ಮತ್ತು ಶ್ರೀಮತಿ. ಪ್ರಿಯಾಂಕಾ ದೀಕ್ಷಿತ್, ಬ್ರಹ್ಮಾವರ ಸಂಪನ್ಮೂಲ ವ್ಯಕ್ತಿಗಳಾಗಿದ್ದರು ಕಾರ್ಯಕ್ರಮದಲ್ಲಿ ಸುಮಾರು 200 ವಿದ್ಯಾರ್ಥಿಗಳು ಭಾಗವಹಿಸಿ ಸೂರ್ಯನಮಸ್ಕಾರ, ವಜ್ರಾಸನ, ತಾಡಾಸನ, ತ್ರಿಕೋನಾಸನ, ಭುಜಂಗಾಸನ, ಧನುರಾಸನ ಮುಂತಾದ ಯೋಗಾಸನಗಳನ್ನು, ಧ್ಯಾನ ಮತ್ತು ಪ್ರಾಣಾಯಾಮವನ್ನು ಕಲಿತರು. ಆರಂಭದಲ್ಲಿ ಶ್ರೀ ಗೋಪಾಲಕೃಷ್ಣ ಅವರು ಯೋಗದ ಮಹತ್ವ ಮತ್ತು ಶಕ್ತಿಯನ್ನು ವಿವರಿಸಿದರು ಮತ್ತು ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಸಿಗುವ ಖಚಿತವಾದ ಪ್ರಯೋಜನಗಳನ್ನು ತಿಳಿಸಿದರು.

ಸಂಸ್ಥೆಯ ಬ್ರ್ಯಾಂಡ್ ಬಿಲ್ಡಿಂಗ್ ನಿರ್ದೇಶಕ ಡಾ.ರಾಮಕೃಷ್ಣ ಹೆಗಡೆಯವರು ಸತತ ಯೋಗಾಭ್ಯಾಸ ಮಾಡುವುದರಿಂದ ನಮ್ಮ ಎಲ್ಲಾ ಪ್ರಯತ್ನಗಳಲ್ಲಿ ದಕ್ಷತೆ ಹೆಚ್ಚುತ್ತದೆ ಎಂದು ಹೇಳಿರಲದೇ ಈ ಕಾರ್ಯಕ್ರಮವನ್ನು *ಸೈಂಟಿಫಿಕ್ ಫೌಂಡೇಶನ್ ಆಫ್ ಹೆಲ್ತ್* ಕೋರ್ಸ್ ಅಡಿಯಲ್ಲಿ ಆಯೋಜಿಸಿದಕ್ಕಾಗಿ ಮೂಲ ವಿಜ್ಞಾನ ಮತ್ತು ಮಾನವಿಕ ವಿಭಾಗವನ್ನು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಬಿಎಸ್‌ಎಚ್ ವಿಭಾಗದ ಎಚ್‌ಒಡಿ ಪ್ರೊ.ದೀಪಕ್ ಶೆಟ್ಟಿ ಉಪಸ್ಥಿತರಿದ್ದರು. ಡಾ.ನಿಖಿಲಾ ಪೈ ಕಾರ್ಯಕ್ರಮವನ್ನು ಸಂಯೋಜಿಸಿದರು. ವಿದ್ಯಾರ್ಥಿ ಸ್ನೇಹ ಗೌಡ ವಂದಿಸಿದರು.

   

Related Articles

error: Content is protected !!