ಮೂಡ್ಲಕಟ್ಟೆ : ಎಂ ಐ ಟಿ ಕೆ ಮೂಡ್ಲಕಟ್ಟೆಯಲ್ಲಿ ವೈಬ್ರೇಶನ್ ವೀಕ್ ಮೂಡ್ಲಕಟ್ಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕುಂದಾಪುರ ಇದರ ಎಂ ಬಿ ಎ ವಿಭಾಗ ಒಂದು ವಾರಗಳ ಕಾಲ ಆಯೋಜಿಸಿರುವ ವೈಬ್ರೇಶನ್ ವೀಕ್ ಎಂಬ ವಿಭಿನ್ನ ಕಾರ್ಯಕ್ರಮವನ್ನು ಮೂಡ್ಲಕಟ್ಟೆ ಕಾಲೇಜಿನಲ್ಲಿ ಉದ್ಘಾಟಿಸಲಾಯಿತು.
ಈ ಸಂದರ್ಭದಲ್ಲಿ ಪ್ರೊಫೆಸರ್ ಮೇಲ್ವಿನ್ ಡಿಸೋಜಾ ಅವರು ಗೆಲುವು ಸೋಲು ಮುಖ್ಯವಲ್ಲ ವಿದ್ಯರ್ಥಿಗಳೆಲ್ಲರೂ ಕೂಡ ಸಕ್ರಿಯವಾಗಿ ಒಂದು ವಾರಗಳ ಕಾಲ ನಡೆಯುವಂತಹ ವಿಭಿನ್ನವಾದ ಕಾರ್ಯಕ್ರಮದಲ್ಲಿ ಕ್ರಿಯಾಶೀಲವಾಗಿ ಭಾಗವಹಿಸಬೇಕು ಅಂದರು. ಡಾಕ್ಟರ್ ರಾಮಕೃಷ್ಣ ಹೆಗಡೆಯವರು ಪ್ರತಿಯೊಬ್ಬ ವಿದ್ಯಾರ್ಥಿ ಭಾಗವಹಿಸಿ ಅವಕಾಶದ ಸದುಪಯೋಗ ಪಡೆಯಬೇಕು ಎಂದು ಹೇಳಿದರು.ಹಾಗೆಯೇ ಎಂ ಬಿ ಎ ವಿಭಾಗದ ಮುಖ್ಯಸ್ಥೆ ಡಾಕ್ಟರ್ ಸುಚಿತ್ರಾ ಅವರು ವಿದ್ಯಾರ್ಥಿಗಳು ತಮಗೆ ಸಿಕ್ಕಂತಹ ಅವಕಾಶಗಳನ್ನು ನಿಖರವಾಗಿ ಸದುಪಯೋಗ ಮಾಡಿಕೊಂಡು ನಡೆಯುವಂತಹ ಎಲ್ಲಾ ಕಾರ್ಯಕ್ರಮಗಳನ್ನು ಯಶಸ್ವಿ ಯಾಗಿಸುವರೆಂಬ ಆಶಾಭಾವನೆಯನ್ನು ವ್ಯಕ್ತಪಡಿಸಿ ಶುಭ ಹಾರೈಸಿದರು.
ರೆಟ್ರೋ ರೌಂಡ್, ಮ್ಯಾನೇಜ್ಮೆಂಟ್ ಕ್ವಿಜ್, ಮ್ಯಾಡ್ ಆಡ್, ಮಿಸ್ ಮ್ಯಾಚ್, ಪ್ರೆಸೆಂಟೇಶನ್ ಮತ್ತು ಗ್ರೂಪ್ ಡ್ಯಾನ್ಸ್ ನಂತಹ ಅನೇಕ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿಉಪನ್ಯಾಸಕರಾದ ಪ್ರೊ. ತಿಲಕ ಲಕ್ಷ್ಮಿ, ಪ್ರೊ.ಕಾವ್ಯ, ಪ್ರೊ. ಪರ್ಣಿಮಾ ಹಾಗೂ ಪ್ರೊ. ನೀಲ್ ಇವರು ಉಪಸ್ಥಿತರಿದ್ದರು. ಸುಶ್ಮಿತಾ ಶೇಖರ್ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು.