ಕುಂದಾಪುರ : ದೀಕ್ಷಾರಂಭ ೨೦೨೩ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ನಡೆಯುತ್ತಿರುವ ಕಾರ್ಯಕ್ರಮವಾದ ನಾಲ್ಕನೇ ದಿನದಂದು ಪ್ರಾಕ್ಟಿಕಲ್ ಅಕೌಂಟಿಂಗ್ ಅಂಡ್ ಟ್ಯಾಕ್ಸೇಶನ್ ಕುರಿತು ಕಾರ್ಯಗಾರ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಫಿನ್ ಕ್ಯೂರಿಯಸ್ ಸಂಸ್ಥೆ ಬೆಂಗಳೂರು ಇದರ ಸಂಸ್ಥಾಪಕರಾದ ಸಿ ಎ ಗಣೇಶ್ ಶೆಟ್ಟಿ ಆಗಮಿಸಿ ವಿಷಯದ ಕುರಿತು ಮಾತನಾಡಿದರು ಸ್ರ‍್ಧಾತ್ಮಕ ಜಗತ್ತಿನಲ್ಲಿ ಪ್ರಾಕ್ಟಿಕಲ್ ಅಕೌಂಟಿಂಗ್ ಅಂಡ್ ಟ್ಯಾಕ್ಸೇಶನ್ ವಿಷಯಕ್ಕೆ ಸಂಬಂಧಿಸಿದಂತೆ ಇರುವ ವಿಪ್ರಲ ಅವಕಾಶವನ್ನು ತೆರೆದಿಟ್ಟರು.ಪ್ರಾಕ್ಟಿಕಲ್ ಅಕೌಂಟಿಂಗ್ ಅಂಡ್ ಟಾಕ್ಸಿಶನ್ ಕರ‍್ಸ್ ವಾಣಿಜ್ಯ ಮತ್ತು ನರ‍್ವಹಣೆ ವಿಭಾಗದ ವಿದ್ಯಾರ್ಥಿಗಳಿಗೆ ಸೀಮಿತವಾಗಿರದೆ ಕಂಪ್ಯೂಟರ್ ಸೈನ್ಸ್ ಪದವೀಧರರು ತೆಗೆದುಕೊಳ್ಳಬಹುದು ಎನ್ನುವುದರ ಬಗ್ಗೆ ಸ್ಪಷ್ಟ ವಿವರಣೆ ನೀಡಿದರು ಇದಕ್ಕೆ ಸಂಬಂಧಿಸಿದಂತೆ ಟೆಕ್ನೋ ಫಂಕ್ಷನ್ ವಿಭಾಗದಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ವಾಣಿಜ್ಯ ಜೊತೆ ಜೊತೆಯಲ್ಲಿ ಹೇಗೆ ಕರ‍್ಯಚರಿಸುತ್ತದೆ ಎನ್ನುವುದರ ಕುರಿತು ವಿಸ್ತಾರವಾಗಿ ವಿವರಿಸಿದರು. ಐ ಎಂ ಜೆ ವಿದ್ಯಾಸಂಸ್ಥೆ ಮತ್ತು ಫಿನ್ ಕ್ಯೂರಿಯಸ್ ಸಂಸ್ಥೆಯ ನಡುವೆ ಶೈಕ್ಷಣಿಕ ಒಡಂಬಡಿಕೆ ಇದ್ದು ಕುಂದಾಪುರದಲ್ಲಿ ಪ್ರಾಕ್ಟಿಕಲ್ ಅಕೌಂಟಿಂಗ್ ಅಂಡ್ ಟ್ಯಾಕ್ಸೇಶನ್ ಕರ‍್ಸ್ ನೀಡುತ್ತಿರುವ ಏಕೈಕ ಪದವಿ ಕಾಲೇಜು ಆಗಿದೆ. ಈ ಕರ‍್ಸ್ ಪದವಿ ಮುಗಿಸಿದ ವಿದ್ಯರ‍್ಥಿಗಳಿಗೂ ಲಭ್ಯವಿದ್ದು ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ ಪ್ರತಿ ವಿದ್ಯರ‍್ಥಿಗಳು ಉದ್ಯೋಗ ಖಾತರಿ ನೆರವನ್ನು ಸಂಸ್ಥೆ ನೀಡುತಿದೆ ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಡಾ. ಪ್ರತಿಭಾ ಎಂ ಪಟೇಲ್, ಉಪ ಪ್ರಾಂಶುಪಾಲರಾದ ಪ್ರೊ. ಜಯಶೀಲ್ ಕುಮಾರ್ ಹಾಗೂ ಉಪನ್ಯಾಸಕರು ಉಪಸಿತರಿದ್ದರು ಪಾವನ ಎಂ ರವರು ಗಣ್ಯರನ್ನು ಪರಿಚಯಿಸಿದರು.