ಕುಂದಾಪುರ: ಸಮೀಪದ ಆನಗಳ್ಳಿಯಲ್ಲಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ವಿವೇಕ ತರಗತಿ ಕೋಣೆಗಳ ಉದ್ಘಾಟನಾ ಸಮಾರಂಭ ನೆರವೇರಿತು. ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಕಿರಣ್ ಕುಮಾರ್ ಕೊಡ್ಗಿಯವರು,, ಆನಗಳ್ಳಿ ಗ್ರಾಮದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡಬೇಕೆಂಬುದು ಈ ಭಾಗದ ಜನರ ಬೇಡಿಕೆಯಾಗಿತ್ತು. ಇದೀಗ ಅವರ ಕನಸಿನಂತೆ ಶಾಲೆಯ ನೂತನ ವಿವೇಕ ತರಗತಿ ಕೋಣೆಗಳ ಉದ್ಘಾಟನೆಗೊಂಡಿದೆ.
ಸಮಾಜದ ಭವಿಷ್ಯ ರೂಪಿಸುವ ಮಕ್ಕಳು ಶೈಕ್ಷಣಿಕವಾಗಿ ಬೆಳೆಯಬೇಕು.ಅದಕ್ಕೆ ಪೂರ್ಣ ಸಹಕಾರ ನೀಡಲಾಗುವುದು ಎಂದು ಮಾನ್ಯ ಶಾಸಕರು ಹೇಳಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಸುರೇಶ್ ಬಿಲ್ಲವ
ಶಾಲಾ ಮುಖ್ಯೋಪಾಧ್ಯರಾದ ರೇಷ್ಮೆ ಗಿರೀಶ್ ಗಾಣಿಗ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀಧರ್ ಶೆಟ್ಟಿ,
ಕುಂದಾಪುರ ವಲಯ ಶಾಲಾ ಸಂಪನ್ಮೂಲ ವ್ಯಕ್ತಿ ಸಂತೋಷ್ ಶೆಟ್ಟಿ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಲಿಂಗಪ್ಪ ಮೇಷ್ಟ್ರು ಹಾಗೂ ಶಂಕಯ್ಯ ಮೇಷ್ಟ್ರು, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಆನಗಳ್ಳಿ ಗ್ರಾಮ ಪಂಚಾಯಿತಿನ ಸದಸ್ಯರಾದ ಸುರೇಶ್ ಆರ್ ನಾಯ್ಕ್, ಶ್ರೀಮತಿ ನಿರ್ಮಲ ಹೇರಿಕುದ್ರು,, ಶ್ರೀಮತಿ ಮೂಕಾಂಬು ಆನಗಳ್ಳಿ ಪ್ರಮುಖರಾದ, ಭಾಸ್ಕರ್ ಬಿಲ್ಲವ ಹೆರಿಕುದ್ರು, ಸುನಿಲ್ ಶೆಟ್ಟಿ ಸುಧಿರ್ .ಕೆ ಎಸ್ ಗೋಪಾಲ ಕಳಂಜಿ, ಗೋಡ್ವಿನ್ ಆನಗಳ್ಳಿ ರಾಘವೇಂದ್ರ ಗಾಣಿಗ, ಶರತ್ ಆನಗಳ್ಳಿ, ಜೋಸೆಫ್ ರೆಬೆಲ್ಲು ಆನಗಳ್ಳಿ, ಹಾಗೂ ಶಾಲಾ ಶಿಕ್ಷಕ ವೃಂದದವರು, ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರು, ಹಳೆ ವಿದ್ಯಾರ್ಥಿ ಸಂಘದ ಸದಸ್ಯರು,ಮಕ್ಕಳ ಪೋಷಕರು,ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು,