Home » ಮೂಡ್ಲಕಟ್ಟೆ ಐಎಮ್‌ಜೆ ಕೌಶಲ್ಯಾಭಿವೃದ್ಧಿ ಕೇಂದ್ರದಲ್ಲಿ ಹೊಸ ಕೋರ್ಸ್‌ಗಳ ಪ್ರಾರಂಭ
 

ಮೂಡ್ಲಕಟ್ಟೆ ಐಎಮ್‌ಜೆ ಕೌಶಲ್ಯಾಭಿವೃದ್ಧಿ ಕೇಂದ್ರದಲ್ಲಿ ಹೊಸ ಕೋರ್ಸ್‌ಗಳ ಪ್ರಾರಂಭ

by Kundapur Xpress
Spread the love

ಮೂಡ್ಲಕಟ್ಟೆ : ಮೂಡ್ಲಕಟ್ಟೆ ನಾಗರತ್ನ ಭುಜಂಗ ಶೆಟ್ಟಿ (ಎಂಎನ್‌ಬಿಎಸ್) ಟ್ರಸ್ಟ್ ಆಶ್ರಯದಲ್ಲಿ,ಐಎಮ್‌ಜೆ ಕೌಶಲ್ಯಾಭಿವೃದ್ಧಿ ಕೇಂದ್ರದಲ್ಲಿ ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ನಿಗಮ (NSDC) ಸಹಕಾರದೊಂದಿಗೆ ವಿಶೇಷ ಕೌಶಲ್ಯಾಭಿವೃದ್ಧಿ ಹೊಸ ಕೋರ್ಸ್‌ಗಳು ಆರಂಭವಾಗುತ್ತಿವೆ. ಇವು ಅತ್ಯುತ್ತಮ ಉದ್ಯೋಗಾವಕಾಶ ಒದಗಿಸುವ ವೃತ್ತಿಪರ ಕೌಶಲ್ಯಗಳನ್ನು ವಿದ್ಯಾರ್ಥಿಗಳಿಗೆ ಕಲಿಸುವಂತೆ ವಿನ್ಯಾಸಗೊಳಿಸಲಾಗಿದೆ. ಈ ಕೋರ್ಸ್‌ಗಳು ವಿದ್ಯಾರ್ಥಿಗಳಿಗೆ ಸುಲಭ ಹಾಗೂ ಲಾಭದಾಯಕ ಶುಲ್ಕದಲ್ಲಿ ಲಭ್ಯವಿವೆ.

ಈ ಕೆಳಗಿನ ಕೋರ್ಸ್‌ಗಳು ಲಭ್ಯವಿರುತ್ತವೆ:
ಡಾಕ್ಯುಮೆಂಟೇಶನ್ ಎಕ್ಸಿಕ್ಯುಟಿವ್ (8 ತಿಂಗಳು) ಈ ಪಠ್ಯಕ್ರಮವು ವಿದ್ಯಾರ್ಥಿಗಳಿಗೆ  ಬಿಜ್ನೆಸ್ ಡಾಕ್ಯುಮೆಂಟ್‌ಗಳನ್ನು ತಯಾರಿಸಲು ಮತ್ತು ಸಮರ್ಥವಾಗಿ ನಿರ್ವಹಿಸಲು ಅಗತ್ಯವಿರುವ ಕೌಶಲ್ಯಗಳನ್ನು ನೀಡುತ್ತದೆ,ಜತೆಗೆ ಯಾವುದೇ ಕ್ಷೇತ್ರದಲ್ಲಿ ಉದ್ಯಮಿಕವಾಗಿ ಅಭಿವೃತ್ತಿ ಹೊಂದಲು ಅನುಕೂಲ ಮಾಡುತ್ತದೆ.

ಎಐ ಮತ್ತು ಮಷೀನ್ ಲರ್ನಿಂಗ್ (6 ತಿಂಗಳು)
ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಮತ್ತು ಮಷೀನ್ ಲರ್ನಿಂಗ್ ಅಲ್ಗೊರಿದಮ್‌ಗಳಲ್ಲಿ ತಜ್ಞರಾಗಿ ಪರಿಣತಿ ಪಡೆಯಲು ಈ ಪಠ್ಯಕ್ರಮವು ಸಹಾಯ ಮಾಡುತ್ತದೆ. ಈ ಕ್ಷೇತ್ರವು ವಿಫುಲ ಉದ್ಯೋಗಾವಕಾಶಗಳನ್ನು ಹೊಂದಿದೆ.

ಕಸ್ಟಮರ್ ಸರ್ವೀಸ್ ಎಕ್ಸಿಕ್ಯುಟಿವ್ (8 ತಿಂಗಳು)
ಸೇವಾ ಕ್ಷೇತ್ರಗಳಲ್ಲಿ, ವಿಶೇಷವಾಗಿ ರಿಟೇಲ್, ಹಾಸ್ಪಿಟಾಲಿಟಿ, ಮತ್ತು ಬಿಪಿಓ ಕ್ಷೇತ್ರಗಳಲ್ಲಿ, ವೃತ್ತಿಪರ ಸೇವೆಗಳನ್ನು ನೀಡಲು ಅಗತ್ಯವಿರುವ ಉತ್ತಮ ಕಮ್ಯುನಿಕೇಶನ್ ಸ್ಕಿಲ್  ಇದರ ಉದ್ದೇಶವಾಗಿದೆ.
ಜನೆರಲ್ ಡ್ಯೂಟಿ ಅಸಿಸ್ಟೆಂಟ್ (3 ತಿಂಗಳು)

ಈ ಪಠ್ಯಕ್ರಮವು ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡಲು, ರೋಗಿಗಳ ಆರೈಕೆ ಮತ್ತು ಆಸ್ಪತ್ರೆಯ ದೈನಂದಿನ ಕಾರ್ಯಾಚರಣೆಗಳಲ್ಲಿ ಸಹಾಯ ಮಾಡಲು ವಿದ್ಯಾರ್ಥಿಗಳನ್ನು ತರಬೇತುಗೊಳಿಸುತ್ತದೆ. ಇದು ವಿಕಾಸಗೊಳ್ಳುತ್ತಿರುವ ಆರೋಗ್ಯ ಕ್ಷೇತ್ರವಾಗಿದೆ.

ಹೋಂ ಹೆಲ್ತ್ ಎಯ್ಡ್ (3 ತಿಂಗಳು)
ಮನೆಯಲ್ಲಿಯೇ ಹೋಂ ಕೇರ್ ಮತ್ತು ಹಿರಿಯರ ಆರೈಕೆ ನೀಡುವ ಬೇಡಿಕೆಯನ್ನು ಪೂರೈಸಲು ಈ ಕೋರ್ಸ್‌ ವಿದ್ಯಾರ್ಥಿಗಳನ್ನು ತಯಾರಿಸುತ್ತದೆ. ಇದು ಆರೋಗ್ಯ ಸೇವೆಯಲ್ಲಿ ನಿತ್ಯ ಹೆಚ್ಚುತ್ತಿರುವ ಕ್ಷೇತ್ರವಾಗಿದೆ.

ಕೋರ್ಸ್‌ಗಳ ವ್ಯಾಪ್ತಿ ಮತ್ತು ಅವಕಾಶಗಳು:
ಈ ಕೋರ್ಸ್‌ಗಳು ಮಾಹಿತಿ ತಂತ್ರಜ್ಞಾನ, ಆರೋಗ್ಯ, ಆಡಳಿತ, ಮತ್ತು ಗ್ರಾಹಕ ಸೇವೆಗಳನ್ನು ಒಳಗೊಂಡ ವಿವಿಧ ಉದ್ಯೋಗ ಮಾರುಕಟ್ಟೆಗಳಿಗೆ ಪ್ರವೇಶವನ್ನು ಕಲ್ಪಿಸುತ್ತವೆ. ವಿದ್ಯಾರ್ಥಿಗಳಿಗೆ ನೈಜವಾಗಿ ಉದ್ಯೋಗಸಿದ್ಧತೆಯನ್ನು ಕಲಿಸುವುದರ ಜೊತೆಗೆ, ಸ್ಥಳೀಯ ಮತ್ತು ರಾಷ್ಟ್ರೀಯ ಮಟ್ಟದ ಉದ್ಯೋಗಾವಕಾಶಗಳನ್ನು ಉತ್ತೇಜಿಸುತ್ತವೆ. NSDC ಪ್ರಮಾಣಿತ ಈ ಪಠ್ಯಕ್ರಮಗಳು ಥಿಯರಿ ಪ್ರಾಯೋಗಿಕ ತರಬೇತಿಗೂ ಸಮಾನ ಮಹತ್ವ ನೀಡುತ್ತವೆ.

ಪ್ರವೇಶ ಆರಂಭದ ದಿನಾಂಕ:
ಈ ಕೋರ್ಸ್‌ಗಳ ಪ್ರವೇಶ 2024 ಅಕ್ಟೋಬರ್ 10 ರಿಂದ ಆರಂಭವಾಗುತ್ತದೆ. ಆಸಕ್ತ ವಿದ್ಯಾರ್ಥಿಗಳು ಶೀಘ್ರವಾಗಿ ನೋಂದಾಯಿಸಿಕೊಳ್ಳುವುದು ಅವಶ್ಯಕ.

ಉದ್ಯೋಗಾವಕಾಶಗಳು:
ಕೋರ್ಸ್‌ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಮಾಹಿತಿ ತಂತ್ರಜ್ಞಾನ, ಆರೋಗ್ಯ ಮತ್ತು ಗ್ರಾಹಕ ಸೇವೆಗಳಲ್ಲಿ ಮುನ್ನಡೆಯುವ ಉದ್ಯೋಗಾವಕಾಶಗಳಿವೆ. ಈ ಕ್ಷೇತ್ರಗಳು ಸತತ ಬೆಳವಣಿಗೆ ಹೊಂದುತ್ತಿದಿರುವುದರಿಂದ ಭವಿಷ್ಯದಲ್ಲೂಉದ್ಯೋಗಾವಕಾಶ ಸಾಧ್ಯತೆ ಹೆಚ್ಚಿದೆ.

   

Related Articles

error: Content is protected !!