ಕುಂದಾಪುರ: ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜು ಕುಂದಾಪುರ ಇದರ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಲ್ತೊಡನಲ್ಲಿ ನಡೆಯಿತು.
ದೀಪಕ್ ಕುಮಾರ್ ಶೆಟ್ಟಿ, ಅಧ್ಯಕ್ಷರು, ರೈತರ ಸಂಘ, ಬೈಂದೂರು ಇವರು ವಿದ್ಯಾರ್ಥಿಗಳಿಗೆ ಸಾಮಾಜಿಕ ಜವಾಬ್ದಾರಿ ಬಗ್ಗೆ ತಿಳಿಸಿ ಅವರ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದರು.
ಇನ್ನೊರ್ವ ಮುಖ್ಯ ಅತಿಥಿ ಕರುಣಾಕಾರ ಶೆಟ್ಟಿ, ಅಧ್ಯಾಪಕರು, ನಾವುಂದ ಇವರು ಏನ್ ಎಸ್ ಎಸ್ ಶಿಬಿರ ಜೀವನದಲ್ಲಿ ಯಾವ ರೀತಿ ಪ್ರಭಾವ ಬೀರುತ್ತದೆ ಎನ್ನುವುದನ್ನು ತಿಳಿಸಿದರು.ಸಮಾರೋಪ ಭಾಷಣ ಮಾಡಿದ ಕಾಲ್ತೊಡು ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಅಣ್ಣಪ್ಪ ಶೆಟ್ಟಿ, ಬಟ್ನಾಡಿ ಇವರು ಅತ್ತ್ಯುತ್ತಮವಾದ ಕಾರ್ಯಚಟುವಟಿಕೆ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಶ್ರಮದಾನವನ್ನು ನಡೆಸಿ ಕಾಲ್ತೊಡು ಪರಿಸರದಲ್ಲಿ ಹಬ್ಬದ ವಾತಾವರಣವನ್ನು ನಿರ್ಮಿಸಿದ್ದೀರಿ. ಇದೇ ಶಿಸ್ತು ಮನೆಗೆ ಹೋದ ಮೇಲೂ ಅನುಸರಿಸುವಂತೆ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶು ಪಾಲರಾದ ಡಾ. ಶುಭಕಾರಾಚಾರಿ ಯವರು ಊರಿನವರ ಸಹಕಾರವನ್ನು ಕೊಂಡಾಡಿ ಕೃತಜ್ಞತೆ ತಿಳಿಸಿದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ಸತ್ಯನಾರಾಯಣ ಹತ್ವಾರ್, ಮಂಜಯ್ಯ ಶೆಟ್ಟಿ, ಲಕ್ಷ್ಮೀ ಕ್ಯಾಶ್ಯ ಇಂಡಸ್ಟ್ರೀ ಸ್, ಸುಧಾಕರ ಶೆಟ್ಟಿ ನಿವೃತ್ತ ಬ್ಯಾಂಕ್ ಮ್ಯಾನೇಜರ್, ಪ್ರಕಾಶ್ ಶೆಟ್ಟಿ, ಅಧ್ಯಕ್ಷರು ಶ್ರೀ ಮಹಾಲಸಾ ಮಾರಿಕಾಂಬ ಯುವಕ ಮಂಡಲ ಕಾಲ್ತೊಡು, ಸುಳ್ಯಣ್ಣ ಶೆಟ್ಟಿ, ನಿವೃತ್ತ ಮುಖ್ಯ ಶಿಕ್ಷಕರು, ಕಾಲ್ತೊಡು, ವಿಜೇಂದ್ರ ಆಚಾರ್ಯ, ಅಧ್ಯಕ್ಷರು, ಶಾಲಾಭಿವೃದ್ಧಿ ಮಂಡಳಿ, ವಿನಾಯಕ ಮೇರ್ಟ, ಮುಖ್ಯ ಶಿಕ್ಷಕರು. ಶಿಬಿರಾರ್ಥಿಗಳ ಕಾರ್ಯಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಶಿಬಿರಾರ್ಥಿಗಳಾದ ಕುಮಾರಿ ಸುನಿಧಿ ಹಾಗೂ ಚಿನ್ಮಯಿ ಹೆಬ್ಬಾರ್ ಶಿಬಿರದ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು. ಊರವರ ಪರವಾಗಿ ಸಂಜೀವ ಶೆಟ್ಟಿ, ಕೃಷಿಕರು, ಕಾಲ್ತೊಡು ಇವರು ಶಿಬಿರಾರ್ಥಿಗಳು ತಮ್ಮ ಕಾರ್ಯವೈಖರಿಗಳಿಂದ ಊರ ಜನರ ಮೆಚ್ಚುಗೆ ಹಾಗೂ ಪ್ರೀತಿಗೆ ಪಾತ್ರರಾಗಿದ್ದಾರೆ ಎಂದು ತಮ್ಮ ಅನುಭವ ಹಂಚಿಕೊಂಡರು.
ಶಿಬಿರಾರ್ಥಿಗಳ ಪರವಾಗಿ ಶಾಲೆಗೆ ನೆನೆಪಿನ ಕಾಣಿಕೆಯನ್ನು ಪ್ರಾಂಶುಪಾಲರು ಮುಖ್ಯಶಿಕ್ಷರಿಗೆ ಹಸ್ತಾಂತರಿಸಿದರು. ಶಾಲೆಯ ಮುಖ್ಯಶಿಕ್ಷಕರು, ಶಾಲಾಭಿವೃದ್ಧಿ ಮಂಡಳಿಯ ಅಧ್ಯಕ್ಷರು ಹಾಗೂ ಸರ್ವಸದಸ್ಯರು ಕಾಲೇಜಿಗೆ ಶಿಬಿರದ ನೆನಪಿಗೆ ಸ್ಮರಣಿಕೆ ನೀಡಿದರು. ಎಲ್ಲಾ ಶಿಬಿರಾರ್ಥಿಗಳಿಗೆ ಶಿಬಿರದ ಸವಿನೆನಪಿಗಾಗಿ ಸ್ಮರಣಿಕೆಯನ್ನು ನೀಡಲಾಯಿತು. ಯೋಜಾನಾಧಿಕಾರಿಗಳಾದ ಅರುಣ್ ಎಂ. ಎಸ್. ಶಿಬಿರದ ಯಶಸ್ಸಿಗೆ ಸಹಕರಿಸಿದ ಎಲ್ಲರನ್ನೂ ವಂದಿಸಿದರು. ಶಿಬಿರಾರ್ಥಿ ಕುಮಾರಿ ಸುಶ್ಮಿತಾ ಸ್ವಾಗತಿಸಿದರು ಯೋಜನಾಧಿಕಾರಿಯಾದ ರಾಮಚಂದ್ರ ಆಚಾರ್ ಕಾರ್ಯಕ್ರಮ ನಿರ್ವಹಿಸಿದರು.