ಶ್ರೀ ಕಾಳಾವರ ವರದರಾಜ ಎಂ ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಕುಂದಾಪುರ ಕೋಟೇಶ್ವರ ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ ೧ ಹಾಗು ೨ ರ 2025- 26ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರ ಬ್ರಹ್ಮಾವರ ವಲಯದ ಶ್ರೀ ವಾಣಿ ಅನುದಾನಿತ ಪ್ರೌಢಶಾಲೆಯಲ್ಲಿ ನಡೆಯುತ್ತಿದ್ದು ಇದರ ಉದ್ಘಾಟನಾ ಸಮಾರಂಭ ದಿನಾಂಕ 3 ಮಾರ್ಚ್ 2026 ರಂದು ನಡೆಯಿತು.
ಶಿಬಿರವನ್ನು ಉದ್ಘಾಟಿಸಿದ ಶ್ರೀ ವಾಣಿ ವಿದ್ಯಾಭಿವೃದ್ಧಿ ಸಂಘ ರಿಜಿಸ್ಟರ್ಡ್ ರಜತಾದ್ರಿ, ನಡೂರು ಇದರ ಅಧ್ಯಕ್ಷರಾದ ಶ್ರೀ ಬಿ ಭೋಜ ಹೆಗ್ಡೆ ಇವರು ಅನುಭವದ ಮೂಲಕ ಕಲಿತ ಪಾಠ ಜೀವನದುದ್ದಕ್ಕೂ ನಮ್ಮನ್ನು ಕಾಪಾಡುತ್ತದೆ ಎಂದು ನುಡಿದು ಶುಭಾಶಂಸನೆಗೈದರು. ಶಾಲಾ ಆಡಳಿತ ಮಂಡಳಿಯ ನಿರ್ದೇಶಕರಾದ ಶ್ರೀ ರಾಜಾರಾಮ್ ಶೆಟ್ಟಿ ಇವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು….ಶ್ರೀವಾಣಿ ವಿದ್ಯಾ ಅಭಿವೃದ್ಧಿ ಸಂಘದ ಕಾರ್ಯದರ್ಶಿಗಳು ಹಾಗು ವಿನಯ ಆಸ್ಪತ್ರೆ ಕುಂದಾಪುರ ಇದರ ಆಡಳಿತ ನಿರ್ದೇಶಕರು ಆದ ಡಾಕ್ಟರ್ ಎನ್ ವಿಶ್ವನಾಥ ಶೆಟ್ಟಿ ಇವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಸಂಸ್ಥೆಯ ಆಡಳಿತ ಅಧಿಕಾರಿಯಾದ ಶ್ರೀ ಎಂ ವಿಶ್ವನಾಥ್ ಶೆಟ್ಟಿ ಇವರು ವಿದ್ಯಾರ್ಥಿಗಳಿಗೆ ಕರ್ತವ್ಯ ನಿಷ್ಠೆ ಮತ್ತು ಬದ್ಧತೆ ಒಬ್ಬ ವ್ಯಕ್ತಿಯನ್ನು ಸಾಧನೆಯತ್ತ ಕೊಂಡೊಯ್ಯುತ್ತದೆ. ಮಾಡುವ ಕೆಲಸದಲ್ಲಿನ ಶ್ರದ್ಧೆ ನಮ್ಮ ವ್ಯಕ್ತಿತ್ವಕ್ಕೆ ಮೆರಗು ನೀಡುತ್ತದೆ. ಅಂತಹ ವ್ಯಕ್ತಿತ್ವ ನಿರ್ಮಾಣ ಈ ಶಿಬಿರದ ಮೂಲಕ ಆಗಲಿ ಎಂದು ಹಾರೈಸಿದರು… ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಅಶೋಕ್ ಶೆಟ್ಟಿ, ಕಾಲೇಜಿನ ಪ್ರಾಧ್ಯಾಪಕರಾದ ಶ್ರೀ ನಾಗರಾಜ್ ವೈದ್ಯ ಹಾಗೂ ನಾಗರಾಜ್ ಯು ಉಪಸ್ಥಿತರಿದ್ದರು, ಕಾಲೇಜಿನ ಪ್ರಾಂಶುಪಾಲರಾದ ಶ್ರೀ ರಾಮರಾಯ ಆಚಾರ್ಯ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ಶಿಬಿರ ಅಧಿಕಾರಿಗಳಾದ ಶ್ರೀ ನಿರಂಜನ ಶರ್ಮ ಅವರು ಕಾರ್ಯಕ್ರಮವನ್ನು ನಿರೂಪಿಸಿದರು ಸಂಯೋಜನಾಧಿಕಾರಿಗಳಾದ ಶ್ರೀಮತಿ ಶ್ರುತಿ ಆಚಾರ್ಯ ಇವರು ಸ್ವಾಗತಿಸಿದರು ವಿದ್ಯಾರ್ಥಿ ನಾಯಕಿಯಾದ ವನಿಷಾ ಇವರು ವಂದನಾರ್ಪಣೆ ನೀಡಿದರು

