ಕೋಟ:ಮಕ್ಕಳ ಭವಿಷ್ಯದ ಭದ್ರ ಬುನಾದಿಗೆ ಸರಕಾರಿ ಶಾಲೆಗಳ ಪಾತ್ರ ಗಣನೀಯವಾದದ್ದು ಎಂದು ಕೋಟದ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಹೇಳಿದರು.
ಶನಿವಾರ ಕೋಟ ಮಣೂರು ಪಡುಕರೆ ಸರಕಾರಿ ಸಂಯುಕ್ತ ಪ್ರೌಢ ಶಾಲೆ ಇಲ್ಲಿನ ಪ್ರಾಥಮಿಕ ಶಾಲಾ ಪೋಷಕರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ ಸರಕಾರ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿದೆ.ಇಲ್ಲಿನ ಶಿಕ್ಷಕರು ಮಕ್ಕಳ ಸರ್ವೋತೋಮುಖ ಯಶಸ್ವಿಗೆ ಶ್ರಮಿಸುತ್ತಿದ್ದಾರೆ.
ಸರಕಾರಿ ಶಾಲೆಗಳ ವಿದ್ಯಾರ್ಥಿಗಳ ಶೈಕ್ಷಣಿಕವಾಗಿ ಪಠ್ಯೇತರ ಚಟುವಟಿಕೆಗಳಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಿದ್ದಾರೆ,ಇದಕ್ಕೆ ಪೂರಕವಾಗಿ ಶಿಕ್ಷಕರಲ್ಲದೆ ಪೋಷಕರು ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಅತ್ಯವಶ್ಯ,ಮಕ್ಕಳಿಗೆ ಸಾಂಸ್ಕöÈತಿಕವಾಗಿ,ಸAಸ್ಕಾರಭರಿತ ಶಿಕ್ಷಣ ಸಿಕ್ಕರೆ ಜೀವನಕ್ಕೆ ನೈಜ ಬುನಾದಿ ಹಾಕಿದಂತೆ ಅದಕ್ಕಾಗಿ ವಾಮೂಹದ ಶಿಕ್ಷಣಕ್ಕೆ ಒಳಗಾಗದೆ ನಮ್ಮಲ್ಲಿರುವ ಸಂಪನ್ಮೂಲಗಳನ್ನೆ ಬಳಸಿಕೊಂಡು ಯಶಸ್ಸಿನ ತೇರಾಗಿಸಿಕೊಳ್ಳಿ ಎಂದು ಕರೆ ನೀಡಿದರಲ್ಲದೆ ಪ್ರಾಥಮಿಕ ಶಿಕ್ಷಣವೇ ಶ್ರೇಷ್ಠವಾದ ಅಡಿಪಾಯ ಅದನ್ನು ವೈಭೋಗದ ಆಸೆಗೊಸ್ಕರ ಹಾಳೆಗೆಡವದಿರಿ ಎಂದು ಪೋಷಕರಿಗೆ ಕಿವಿಮಾತು ಹೇಳಿದರು.ಇದೇ ವೇಳೆಪ್ರತಿ ಸೌಲಭ್ಯ ಈ ಸರಕಾರಿ ಶಾಲೆಯಲ್ಲಿ ಸಿಗುತ್ತಿದೆ ಇದನ್ನು ಪಬ್ಲಿಕ್ ಸ್ಕೂಲ್ ಆಗಿಸಲು ಸರಕಾರದ ಮಟ್ಟದಲ್ಲಿ ಒತ್ತಡ ಹೇರಲು ಸ್ಥಳೀಯ ಸಂಸದರು,ಶಾಸಕರಲ್ಲಿ ಮನವಿ ಮಾಡಿದ್ದೇನೆ ಗೀತಾನಂದ ಫೌಂಡೇಶನ್ ಶಾಲೆಯ ಪ್ರತಿ ಏಳಿಗೆಗೆ ಶ್ರಮಿಸುತ್ತಿದೆ ಎಂದರು.
ಇದೇ ವೇಳೆ ೧೯೯೮-೯೯ರ ಬ್ಯಾಚ್ ಹಳೆ ವಿದ್ಯಾರ್ಥಿಗಳಾದ ಪುನರ್ ಮಿಲನ ತಂಡದಿAದ ಎರಡು ಕಂಪ್ಯೂಟರ್ ಹಾಗೂ ಗೀತಾನಂದ ಫೌಂಡೇಶನ್ ವತಿಯಿಂದ ಐದು ಕಂಪ್ಯೂಟರ್,ಕೋಟದ ಪಂಚವರ್ಣ ಸಂಸ್ಥೆ ವತಿಯಿಂದ ದತ್ತು ಸ್ವೀಕರಿಸಿದ ವಿದ್ಯಾರ್ಥಿಗಳ ವಾಹನ ಭತ್ತೆಯನ್ನು ಶಾಲಾ ಮುಖ್ಯ ಶಿಕ್ಷಕರಿಗೆ ಹಸ್ತಾಂತರಿಸಲಾಯಿತು.
ಈ ವೇಳೆ ಶಾಲಾ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದದಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ನೀಡಲಾಯಿತು.
ಉಡುಪಿಯ ಬಾಳಿಗ ವೈದ್ಯಕೀಯ ಸಂಸ್ಥೆಯ ಗಿರೀಶ್ ಅಚ್ಲಾಡಿ ಇವರಿಂದ ಪೋಷಕರಿಗೆ ಮಕ್ಕಳ ಕುರಿತಾಗಿ ತಾಯಂದಿರರ ಪಾತ್ರ ಎಂಬ ಕುರಿತು ಮಾಹಿತಿ ಕಾರ್ಯಾಗಾರ ಏರ್ಪಡಿಸಲಾಯಿತು.
ಪ್ರೌಢಶಾಲಾ ಪ್ರಭಾರ ಮುಖ್ಯ ಶಿಕ್ಷಕ ರಾಮದಾಸ್ ನಾಯಕ್,ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ನಾಗರಾಜ್ ಹಾಗೂ ಪದಾಧಿಕಾರಿಗಳು,ಗೀತಾನಂದ ಫೌಂಡೇಶನ್ ಸಮಾಜಕಾರ್ಯ ವಿಭಾಗದ ರವಿಕಿರಣ್ ಕೋಟ ಮತ್ತಿತರರು ಉಪಸ್ಥಿತರಿದ್ದರು.ಶಾಲಾಮುಖ್ಯ ಶಿಕ್ಷಕ ಮಂಜುನಾಥ್ ಹೊಳ್ಳ ಸ್ಚಾಗತಿಸಿ ಪ್ರಾಸ್ತಾವನೆ ಸಲ್ಲಿಸಿದರು.ಕಾರ್ಯಕ್ರಮವನ್ನು ಸಹಶಿಕ್ಷಕಿ ಜ್ಯೋತಿ ನಿರೂಪಿಸಿದರು.