ತೆಕ್ಕಟ್ಟೆ : ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ಶಾಲೆಯಲ್ಲಿ ತಂಬಾಕು ವ್ಯಸನದಿಂದ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮಗಳು ಹಾಗೂ ಮಕ್ಕಳು ಈ ವ್ಯಸನಕ್ಕೆ ಬಲಿಯಾಗುವ ಬಗೆ ಹೇಗೆ? ತಂಬಾಕು ಸೇವನೆಯಿಂದ ವ್ಯಕ್ತಿಯ ಮಾನಸಿಕ ಆರೋಗ್ಯದ ಮೇಲೆ ಯಾವ ರೀತಿ ಪ್ರಭಾವ ಬೀರುತ್ತದೆ ಮತ್ತು ಅದರ ನಿಯಂತ್ರಣ ಹೇಗೆ ಹಾಗೂ ತಂಬಾಕು ಮುಕ್ತ ಶಾಲಾ ಆವರಣದ ಕುರಿತು ಮಕ್ಕಳಿಗೆ ಮತ್ತು ಸಹ ಶಿಕ್ಷಕ ಶಿಕ್ಷಕಿಯರಿಗೆ ಶಾಲಾ ಮುಖ್ಯೋಪಾಧ್ಯಾಯಿನಿಯವ ರಾದ ಶ್ರೀಮತಿ ಸಂಧ್ಯಾ ಭಟ್ ರವರು ಪಿಪಿಟಿ ಮೂಲಕ ವಿವರಿಸಿದರು.