Home » ಸೇವಾ ಸಂಗಮದ ಮೂಲಕ ಸಂಸ್ಕಾರಭರಿತ ಶಿಕ್ಷಣ
 

ಸೇವಾ ಸಂಗಮದ ಮೂಲಕ ಸಂಸ್ಕಾರಭರಿತ ಶಿಕ್ಷಣ

–ಚಂದ್ರಿಕಾ ಧನ್ಯ

by Kundapur Xpress
Spread the love

ಕೋಟ:ಪ್ರಸ್ತುತ ಕಾಲಘಟ್ಟದಲ್ಲಿ ಸಂಸ್ಕಾರ ಭರಿತ ಶಿಕ್ಷಣ ಮಕ್ಕಳಿಗೆ ನೀಡಬೇಕಾದ ಅಗತ್ಯತೆ ಇದ್ದು ಇದಕ್ಕಾಗಿ ಸೇವಾಸಂಗಮದ ಶಿಶುಮಂದಿರಗಳನ್ನು ಆಯ್ಕೆಗೊಳಿಸಿ ಎಂದು ಕುಂದಾಪುರ ಸೇವಾಸಂಗಮ ಟ್ರಸ್ಟ್ನ ವಿಶ್ವಸ್ಥ ಮಂಡಳಿಯ ಕಾರ್ಯದರ್ಶಿ ಚಂದ್ರಿಕಾ ಧನ್ಯ ಹೇಳಿದರು.
ಶನಿವಾರ ಕೋಟದ ಸೇವಾಸಂಗಮ ಶಿಶುಮಂದಿರ ಇಲ್ಲಿ ಆಯೋಜಿಸಲಾದ ಮಾತೃ ವಿಲನ ಕಾರ್ಯಕ್ರಮದಲ್ಲಿ ಮಾತನಾಡಿ ಮಕ್ಕಳಿಗೆ ಆರಂಭಿಕ ಕಾಲಘಟ್ಟದಲ್ಲಿ ಸಂಸ್ಕಾರ ಆಚಾರ ವಿಚಾರಗಳ ಕುರಿತು ಶಿಕ್ಷಣ ನೀಡಬೇಕು ಈ ದಿಸೆಯಿಂದಲೇ ಮಕ್ಕಳ ಜೀವನ ಶೈಲಿ ಬದುಕಿದ ದಾರಿ ಭದ್ರಗೊಳ್ಳಲು ಕಾರಣವಾಗುತ್ತದೆ,ಪಠ್ಯವಲ್ಲದೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗಿಯಾಗುವಂತೆ ಮಾಡಬೇಕು ಅದಕ್ಕಾಗಿ ಪ್ರಾಥಮಿಕ ಹಂತದ ಶಿಕ್ಷಣ ಸೇವಾಸಂಗಮದ ಮೂಲಕ ನೀಡಬೇಕು ಎಂದರಲ್ಲದೆ ಪರಿಸರ ಜಾಗೃತಿ,ಈ ದೇಶದ ಸಂಸ್ಕöÈತಿ ಪ್ರತಿ ಆಯಾಮಗಳಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಪೋಷಕರಿಗೆ ಕಿವಿಮಾತು ಹೇಳಿದರು.
ಈ ವೇಳೆ ಕುಂದಾಪುರ ಸೇವಾ ಸಂಗಮ ವಿಶ್ವಸ್ಥ ಮಂಡಳಿಯ ಕಲ್ಪನಾ ಭಾಸ್ಕರ್,ಕೋಟದ ಸೇವಾಸಂಗಮ ಶಿಶುಮಂದಿರದ ಉಪಾಧ್ಯಕ್ಷೆ ಗೀತಾ ಎ ಕುಂದರ್,ವ್ಯವಸ್ಥಾಪಕಿ ಭಾಗ್ಯವಾದಿರಾಜ್,ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಸಮಿತಿಯ ಅಧ್ಯಕ್ಷೆ ನಾಗಲಕ್ಷಿ÷್ಮÃ ಹೆಗ್ಡೆ ಸ್ವಾಗತಿಸಿದರು.ಕಾರ್ಯಕ್ರಮವನ್ನು ಕಾರ್ಯದರ್ಶಿ ಸುಷ್ಮಾ ದಯಾನಂದ್ ನಿರ್ವಹಿಸಿದರು.

   

Related Articles

error: Content is protected !!