ತೆಕ್ಕಟ್ಟೆ : ಸೇವಾ ಸಂಗಮ ವಿದ್ಯಾ ಕೇಂದ್ರ ವಿದ್ಯಾ ಗಿರಿ ತೆಕ್ಕಟ್ಟೆಯಲ್ಲಿ ಗುರುಪೂರ್ಣಿಮೆ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಅಧ್ಯಕ್ಷರಾದ ಮಾನ್ಯ ಶ್ರೀಯುತ ಸುರೇಶ್ ಬೆಟ್ಟಿನ್ ರವರು ಅಧ್ಯಕ್ಷತೆ ವಹಿಸಿದ್ದರು, ಕಾರ್ಯದರ್ಶಿಗಳಾದ ಮಾನ್ಯ ಶ್ರೀ ಕಮಲಾಕ್ಷ ಪೈ ಹಾಗೂ ಶಾಲಾ ಮುಖ್ಯ ಶಿಕ್ಷಕಿಯವರಾದ ಶ್ರೀಮತಿ ಸಂಧ್ಯಾ ಭಟ್ ರವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಯವರಾದ ನಿವೃತ್ತ ಉಪನ್ಯಾಸಕರಾದ ಶ್ರೀಮತಿ ಜಯಂತಿ ಜಿ ಅವರಿಗೆ ಗುರುವಂದನೆ ಮಾಡಲಾಯಿತು.
ಮುಖ್ಯ ಅತಿಥಿಗಳು ಪೌರಾಣಿಕ ರಾಮಾಯಣ ಮತ್ತು ಮಹಾಭಾರತದ ದೃಷ್ಟಾಂತಗಳಲ್ಲಿ ಬರುವ ನಹುಷಾ, ವೇದವ್ಯಾಸ ಹಾಗೂ ಶ್ರೀರಾಮನ ಗುರುಗಳ ಬಗೆಗಿರುವ ವಿನಯತೆಯನ್ನು ತಿಳಿಸಿದರು. ಗುರುವನ್ನು ನಿರ್ಲಕ್ಷಿಸದೆ ಇದ್ದಲ್ಲಿ ವಿದ್ಯೆಯ ಮೂಲಕ ವಿನಯವು ದೊರೆಯುತ್ತದೆ ಎಂದು ತಮ್ಮ ಹಿತನುಡಿಗಳನ್ನು ಆಡಿದರು
ಶಾಲಾ ಶಿಕ್ಷಕಿ ಕುಮಾರಿ ನಾಗರತ್ನ ಎಂ ಇವರು ಗುರುರಾಜ್ ಕರ್ಜಗಿ ಯವರ ಜೀವನದ ದೃಷ್ಟಾಂತದ ಬಗ್ಗೆ ಮತ್ತು ಗುರು ಶಿಷ್ಯರ ಸಂಬಂಧದ ಬಗೆಗಿನ ಕಥೆಯನ್ನು ಹೇಳುವುದರ ಮೂಲಕ ಗುರುಪೂರ್ಣಿಮೆ ಮಾತುಗಳನ್ನು ತಿಳಿಸಿದರು.
ಕುಮಾರಿ ಅನಿಕ 7ನೇ ತರಗತಿ ನಿರೂಪಿಸಿದರು. ವಾಸುದೇವ 7ನೇ ತರಗತಿ ಸ್ವಾಗತಿಸಿದರು ಕು. ಚಿನ್ಮಯಿ ಸ್ಮೃತಿ, ಧನ್ಯ ಜಿ, ದೀಕ್ಷಿತಾ ಅಮೃತ ಬಿಂದು ಅಮೃತವಚನ, ಸುಭಾಷಿತ, ಮಂಕುತಿಮ್ಮನ ಕಗ್ಗ ವಾಚಿಸಿದರು. ಕುಮಾರಿ ಸಾನಿಧ್ಯ ವಂದಿಸಿದರು.