ತೆಕ್ಕಟ್ಟೆ : ಸೇವಾ ಸಂಗಮ ವಿದ್ಯಾ ಕೇಂದ್ರ ತೆಕ್ಕಟ್ಟೆಯಲ್ಲಿ ರಕ್ಷಾಬಂಧನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು .ಮುಖ್ಯ ಅತಿಥಿಗಳಾಗಿ ಮಾನ್ಯ ಶ್ರೀಯುತ ಚಂದ್ರಶೇಖರ್ ಪಡಿಯಾರ್ ಇವರು ಆಗಮಿಸಿದ್ದರು .ದೀಪ ಬೆಳಗಿಸುವುದರ ಮೂಲಕ ಭಾರತ ಮಾತೆಗೆ ಪುಷ್ಪಾರ್ಚನೆ ಗೈದು ಕಾರ್ಯಕ್ರಮ ಉದ್ಘಾಟಿಸಿದರು .ಅತಿಥಿಗಳಾದ ಚಂದ್ರಶೇಖರ ಪಡಿಯಾರ್ ಇವರು ಮಾತನಾಡುತ್ತ ಈ ಹಬ್ಬ ಅಣ್ಣ- ತಂಗಿಯರ ಹಬ್ಬ ಸಹೋದರ ಸಹೋದರಿ ಎಂಬ ಭಾವನೆಯನ್ನು ಉಂಟುಮಾಡುವ ಮಹತ್ತ್ವದ ಹಬ್ಬವಾಗಿದೆ ಸಂಘಟನೆ ಮುಖ್ಯ ಶಕ್ತಿಗಿಂತ ಯುಕ್ತಿ ಮೇಲು ಎಂದು ಹೇಳುತ್ತ ಎಲ್ಲರಿಗೂ ಶುಭ ಕೋರಿದರು .ಶ್ರುತಿ ಮಾತಾಜಿಯವರು ರಕ್ಷಾ ಬಂಧನದ ಮಹತ್ವದ ಬಗ್ಗೆ ಮಾತನಾಡುತ್ತಾ ಭಾರತೀಯರು ಶ್ರಾವಣ ಮಾಸದಲ್ಲಿ ಆಚರಿಸುವ ಒಂದು ಹಬ್ಬ ರಕ್ಷಾಬಂಧನ ಈ ದಿನದ ವಿಶೇಷತೆ ಎಂದರೆ ಪ್ರತಿಯೊಬ್ಬರು ತಮ್ಮ ಬಾಲ್ಯದ ಸಿಹಿ ಕಹಿ ನೆನಪುಗಳನ್ನು ನೆನಪಿಸಿಕೊಳ್ಳುತ್ತಾರೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟಿ. ರಮೇಶ್ ನಾಯಕ್ ರವರು ವಹಿಸಿದ್ದರು. ಸಭೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಟಿ. ವಿಷ್ಣುಮೂರ್ತಿ ಭಟ್ ಇವರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಋತು ಸ್ವಾಗತ ಪರಿಚಯ ಮಾಡಿದರು. ವಿದ್ಯಾರ್ಥಿಗಳು ಶ್ಲೋಕ, ಅಮೃತಬಿಂದು, ಅಮೃತವಚನ, ಮಂಕುತಿಮ್ಮನ ಕಗ್ಗ ವಾಚಿಸಿದರು .ರಕ್ಷಾ ಬಂಧನದ ಬಗ್ಗೆ ಸಾಮೂಹಿಕ ಗೀತೆಯನ್ನು ಮಕ್ಕಳು ಹಾಡಿದರು . ವಿದ್ಯಾರ್ಥಿನಿ ಚಿನ್ಮಯಿ ರಕ್ಷಾಬಂಧನದ ಸಂದೇಶ ವಾಚಿಸಿದರು. ವಿದ್ಯಾರ್ಥಿನಿ ಶ್ರೀರಕ್ಷ ಕಾರ್ಯಕ್ರಮದ ನಿರ್ವಹಣೆಯನ್ನು ಮಾಡಿದರು. ವಿದ್ಯಾರ್ಥಿ ತರುಣ್ ಎಲ್ಲರಿಗೂ ವಂದಿಸಿದರು.