ಕೋಟ: ಸರಕಾರಿ ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರಕುತ್ತಿದೆ ಎಂದು ಕೋಟದ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಹೇಳಿದರು.
ಕೋಟದ ಶಾಂಭವೀ ವಿದ್ಯಾದಾಯಿನೀ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಗಿಳಿಯಾರು ಇಲ್ಲಿ ಉಚಿತ ನೋಟ್ ಬುಕ್ ಸಮವಸ್ತ್ರ, ಸ್ಕೂಲ್ ಬ್ಯಾಗ್,ಬೆಲ್ಟ್,ಐಡಿ ಕಾರ್ಡ್ ಹಾಗೂ ಕಲಿಕೋಪಕರಣ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಪ್ರಸ್ತುತ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಗಳಿಂದ ಕನ್ನಡ ಮಾಧ್ಯಮ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳ ಕೊರತೆ ಎದುರಿಸುತ್ತಿದ್ದೇವೆ.ಪೋಷಕರಲ್ಲಿ ಆಂಗ್ಲ ಮಾಧ್ಯಮದ ವ್ಯಾಮೂಹ ಅತಿಯಾಗಿ ಕಾಡುತ್ತಿದೆ,ಪ್ರಸ್ತುತ ಕನ್ನಡ ಮಾಧ್ಯಮ ಶಾಲೆಗಳ ಮಕ್ಕಳಿಗೆ ಪ್ರತಿಯೊಂದು ಸವಲತ್ತು ಸಿಗುತ್ತಿದ್ದು ಪೆÇೀಷಕರು ಸಂಸ್ಕಾರಭರಿತ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಕರೆಕೊಟ್ಟರು.
ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಪಿ.ನರಸಿಂಹ ಐತಾಳ್ ಕಲಿಕೋಪಕರಣ ವಿತರಿಸಿ ಮಾತನಾಡಿ ಕನ್ನಡ ಮಾಧ್ಯಮ ಶಾಲೆಗಳ ಅವನತಿಗೆ ಸರಕಾರದ ನೀತಿಗಳೇ ಕಾರಣವಾಗಿದೆ.ಕನ್ನಡವನ್ನು ಕೊಲೆ ಮಾಡುವ ಸ್ಥಿತಿ ಅವರು ಸೃಷ್ಠಿಸಿದ್ದಾರೆ.ಖಾಸಗಿ ಶಿಕ್ಷಣ ಸಂಸ್ಥೆಗಳು ವ್ಯವಹಾರಿಕಾ ಕ್ಷೇತ್ರವಾಗಿ ಮಾರ್ಪಾಡುಗೊಂಡಿದೆ.ಸರಕಾರಿ ,ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ಶಿಕ್ಷಕರ ನೇಮಕಾತಿ ಇಲ್ಲದಾಗಿದೆ ಈ ದಿಸೆಯಲ್ಲಿ ಸರಕಾರದ ಕೆಟ್ಟ ನೀತಿಯನ್ನು ಖಂಡಿಸಿ ಮಕ್ಕಳ ಭವಿಷ್ಯದ ಭದ್ರ ಬುನಾದಿಗೆ ಕನ್ನಡ ಮಾಧ್ಯಮ ಶಿಕ್ಷಣವೇ ಅಂತಿಮವಾಗಿದೆ ಎಂದರು.
ಈ ಸಂದರ್ಭದಲ್ಲಿ ಶಾಂಭವೀ ಅನ್ನದಾಯಿನೀ ಟ್ರಸ್ಟ್ ಕೋಟ,ಗೀತಾನಂದ ಫೌಂಡೇಶನ್ ಮಣೂರು,ದಿ.ಸಾವಿತ್ರಮ್ಮ ಪರಮೇಶ್ವರ ಮಯ್ಯ ಸ್ಮಾರಕ ದತ್ತಿನಿಧಿ,ಯಜ್ಞನಾರಾಯಣ ಹೇರ್ಳೆ ಸ್ಮಾರಕ ದತ್ತಿನಿಧಿ ಇಂದಿರಾ ಕೃಷ್ಣ ಮಧ್ಯಸ್ಥ ,ಗಿಳಿಯಾರು ಪಾರ್ವತಮ್ಮ ವೆಂಕಪ್ಪ ಮಯ್ಯ ಸ್ಮರಣಾರ್ಥ, ಪ್ರಕಾಶ್ ಪ್ರಿಂಟಸ್9 ಕೋಟ ಇವರುಗಳು ಕೊಡಮಾಡಿದ ಸಮವಸ್ತ್ರ, ನೋಟ್ ಬುಕ್,ಇಂಗ್ಲಿಷ್ ಕಲಿಕಾ ಪುಸ್ತಕ,ಕಲಿಕೋಪಕರಣ,ಬೆಲ್ಟ್,ಸ್ಕೂಲ್ ಬ್ಯಾಗ್,ಉಚಿತ ಗುರುತಿನ ಚೀಟಿಯನ್ನು ವಿದ್ಯಾರ್ಥಿಗಳಿಗೆ ಗಣ್ಯರ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಕೆ.ರಾಜಾರಾಮ್ ಐತಾಳ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಶಾಲಾ ಆಡಳಿತ ಮಂಡಳಿ ಸಂಚಾಲಕ ಸಚಿನ್ ಕಾರಂತ್,ಶಾಲಾ ಹಳೆ ವಿದ್ಯಾರ್ಥಿ ಸಂಘದ ಕೋಶಾಧಿಕಾರಿ ಜಿ.ಸತೀಶ್ ಹೆಗ್ಡೆ ,ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ರವೀಂದ್ರ ಜೋಗಿ,ನಿವೃತ್ತ ಶಿಕ್ಷಕ ಎಂ.ಎನ್ ಮಧ್ಯಸ್ಥ,ಶಾಲಾ ಆಡಳಿತ ಮಂಡಳಿಯ ಸದಸ್ಯ ಜಿ.ವಿ ಅಶೋಕ್ ಹೇರ್ಳೆ ಮತ್ತಿತರರು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕ ದಿವಾಕರ್ ರಾವ್ ಸ್ವಾಗತಿಸಿದರು. ಕಾರ್ಯಕ್ರಮವನ್ನು ಶಿಕ್ಷಕಿ ವಿನೋದ ವಿ.ನಿರೂಪಿಸಿದರು.ದೈಹಿಕ ಶಿಕ್ಷಕ ರಮೇಶ್ ಕುಮಾರ್ ವಂದಿಸಿದರು.