ಕುಂದಾಪುರ : ಬಸ್ರೂರು ಶ್ರೀ ಶಾರದಾ ಕಾಲೇಜಿನಲ್ಲಿ ಐಕ್ಯೂಎಸಿ ಮತ್ತು ವಾಣಿಜ್ಯ ವಿಭಾಗ ಹಾಗೂ ಮುಕ್ತ ಜಂಟಿ ಆಶ್ರಯದಲ್ಲಿ ಹೂಡಿಕೆದಾರ ಜಾಗೃತಿ ಕಾರ್ಯಕ್ರಮವು ಕಾಲೇಜಿನ ಶ್ರೀ ಬಿ. ವೀರರಾಜೇಂದ್ರ ಹೆಗ್ಡೆ ಸಭಾಂಗಣದಲ್ಲಿ ಜರುಗಿತು. ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ ಪ್ರೊಫೆಸರ್ ಎಚ್. ಜಗದೀಶರವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಹೂಡಿಕೆ ಪ್ರತಿಯೊಬ್ಬರಿಗೂ ಬಹಳ ಮುಖ್ಯ ಏಕೆಂದರೆ ಆರ್ಥಿಕವಾಗಿ ಸುರಕ್ಷಿತವಾಗಿರಲು ಮತ್ತು ತುರ್ತು ಸಂದರ್ಭದಲ್ಲಿ ವಿನಿಯೋಗಿಸುವ ಉದ್ದೇಶದಿಂದ ಗಳಿಸಿದ ಹಣವನ್ನು ಸಮರ್ಪಕವಾಗಿ ಹೂಡಿಕೆ ಮಾಡಬೇಕು. ಉಳಿತಾಯದಿಂದ ಶಾಂತಿಯುತ ಜೀವನ ಮತ್ತು ವಿಶ್ರಾಂತ ಜೀವನದಲ್ಲಿ ಗಳಿಸಿದ ಹಣವನ್ನು ನಿರ್ದಿಷ್ಟವಾದಕ್ಕೆ ಬಳಸಿದಾಗ ಉತ್ತಮ ಜೀವನ ನಡೆಸಲು ಸಹಾಯಕವಾಗುತ್ತದೆ. ಆದುದರಿಂದ ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಅತಿಹೆಚ್ಚು ಲಾಭ ಗಳಿಸಬಹುದು ಹಾಗೂ ಹೂಡಿಕೆಯಿಂದ ತೆರಿಗೆ ವಿನಾಯಿತಿಗೆ ಅವಕಾಶವಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಚಂದ್ರಾವತಿ ಶೆಟ್ಟಿ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ರೆಗೋ, ಸೆಬಿ ರಿಜಿಸ್ಟರ್ಡ್, ಸಿಎಫ್‍ಬಿ, ಶ್ರೀ ನವೀನ್ ಉಪಸ್ಥಿತರಿದ್ದರು. ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಶ್ರೀ ಪುರುಷೋತ್ತಮ ಬಲ್ಯಾಯ ಇವರು ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದರು. ಈ ಒಂದು ದಿನದ ಕಾರ್ಯಗಾರದಲ್ಲಿ ಶ್ರೀ ನವೀನ್ ರೆಗೋ ಇವರು ‘ಹಣಕಾಸಿನ ಸಾಕ್ಷರತೆ’ ಮತ್ತು ಶ್ರೀ ಲಿಯೋ ಅಮಲ್ ಇವರು ‘ಬ್ಕಾಕ್ ಟೂ ಬೇಸಿಕ್ಸ್’ ಹಾಗೂ ಯೋನಿಲ್ ಡಿ’ಸೋಜಾ ‘ವೈಯಕ್ತಿಕ ಹೂಡಿಕೆ ಯೋಜನೆ’ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು. ವಾಣಿಜ್ಯಶಾಸ್ತ್ರ ವಿಭಾಗದ ಉಪನ್ಯಾಸಕ ಶ್ರೀ ಸಂದೀಪ ಕೆ. ಕಾರ್ಯಕ್ರಮ ನಿರೂಪಿಸಿದರು. ರಾಜ್ಯಶಾಸ್ತ್ರ ಉಪನ್ಯಾಸಕ ಶ್ರೀ ವಿಶ್ವನಾಥ ಆಚಾರ್ಯ ವಂದಿಸಿದರು.