ಬಸ್ರೂರು : ಶ್ರೀ ಶಾರದಾ ಕಾಲೇಜಿನ ಸ್ವಿಪ್ ಕಮಿಟಿ ಮತ್ತು ಮತದಾರರ ಸಾಕ್ಷರತಾ ಕ್ಲಬ್ ಹಾಗೂ ನಮ್ಮ ಭೂಮಿ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಮತದಾರರ ಜಾಗೃತಿ ಅಭಿಯಾನ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ದಿ ಕನ್ಹಲ್ಡ್ ಫಾರ ವರ್ಕಿಂಗ್ ಚಿಲ್ಡ್ರನ್ ಸಂಸ್ಥೆಯ ಸಂಚಾಲಕರಾದ ಕೃಪಾ ಎಮ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ದೇಶದಲ್ಲಿ ಬದಲಾವಣೆ ರಚಿಸಲು ಬಯಸಿದರು. ಮತದಾನವು ಅತ್ಯುತ್ತಮ ಮಾರ್ಗವಾಗಿದೆ. ಮತದಾನ ರಾಜಕಾರಣಿಗಳಲ್ಲಿ ಅವರ ಕಾರ್ಯಗಳಿಗೆ ಜವಾಬ್ದಾರರಾಗಿರಲು ಸಹಾಯ ಮಾಡುವುದಲ್ಲದೇ ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ನೀಡುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ.ಚಂದ್ರಾವತಿ ಶೆಟ್ಟಿ ಮಾತನಾಡಿ ಮತದಾನ ನಮ್ಮ ಹಕ್ಕಾಗಿದ್ದು ನಮ್ಮ ಧ್ವನಿಯನ್ನು ಕೇಳಲು ಮತ್ತು ನಮಗೆ ಬೇಕಾದದ್ದುದನ್ನು ಜಾರಿಗೆ ತರುವ ಹಾಗೂ ಪ್ರಜಾಪ್ರಭುತ್ವ ಭವಿಷ್ಯವನ್ನು ನಿರ್ಧರಿಸಬೇಕಾದರೆ ಮತದಾನ ಮಾಡಲು ಹೋದಾಗ ಜಾಗೃತಾ ಮತದಾನ ಮಾಡಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ನಮ್ಮ ಭೂಮಿ ಸಂಸ್ಥೆಯ ಗಣೇಶ ಶೆಟ್ಟಿ, ಶ್ರೇಯಸ್ ಉಪಸ್ಥಿತರಿದ್ದರು. ಕಾಲೇಜಿನ ಮತದಾರರ ಸಾಕ್ಷರತಾ ಕ್ಲಬ್ ಸಂಯೋಜಕರಾದ ಡಾ.ವಿಶ್ವನಾಥ ಆಚಾರ್ಯ ಕಾರ್ಯಕ್ರಮವನ್ನು ಆಯೋಜಿಸಿದರು.