ಬಸ್ರೂರು: ಶ್ರೀ ಶಾರದಾ ಕಾಲೇಜಿನ ಮಹಿಳಾ ವೇದಿಕೆಯ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ “ಹದಿಹರೆಯದ ಹೆಣ್ಣು ಮಕ್ಕಳ ಆರೋಗ್ಯ ಸಮಸ್ಯೆಗಳು ಮತ್ತು ಪರಿಹಾರಗಳು” ಎನ್ನುವ ವಿಷಯದ ಕುರಿತು ಆರೋಗ್ಯ ಮಾಹಿತಿ ಕಾರ್ಯಕ್ರಮವು ಕಾಲೇಜಿನ ಶ್ರೀ ವೀರರಾಜೇಂದ್ರ ಹೆಗ್ಡೆ ಸಭಾಂಗಣದಲ್ಲಿ ಜರುಗಿತು.
ಖ್ಯಾತ ಸ್ತ್ರೀರೋಗ ತಜ್ಞೆ ಡಾ. ಶ್ರೀದೇವಿ ಕಟ್ಟೆ ಚಿನ್ಮಯ ಆಸ್ಪತ್ರೆ ಕುಂದಾಪುರ, ಇವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ, ಇಂದಿನ ಜೀವನ ಶೈಲಿಯೇ ಆರೋಗ್ಯ ಸಮಸ್ಯೆಗೆ ಕಾರಣ ಅನುವಂಶೀಯತೆಯು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ದೈಹಿಕ ವ್ಯಾಯಾಮ ಮನೆ ಕೆಲಸ ಮತ್ತಿತರ ದೇಹ ದಂಡನೆಯ ಕೆಲಸಗಳಿಂದ ಆರೋಗ್ಯ ಸುಸ್ಥಿರವಾಗಿರುತ್ತದೆ. ಹಸಿರು ತರಕಾರಿಗಳೇ ಆರೋಗ್ಯದ ಗುಟ್ಟು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಚಂದ್ರಾವತಿ ಶೆಟ್ಟಿಯವರು ಇಂದು ಹೆಣ್ಣುಮಕ್ಕಳು ಎಲ್ಲಾ ರಂಗದಲ್ಲಿಯೂ ಮುನ್ನುಗುತ್ತಿದ್ದಾರೆ ಹಾಗಾಗಿ ಹೆಣ್ಣು ಮಕ್ಕಳ ಆರೋಗ್ಯ ಅತೀ ಮುಖ್ಯ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ವೈದ್ಯೆ ಡಾ. ಶ್ರೀದೇವಿ ಕಟ್ಟೆ ಅವರೊಂದಿಗೆ ಸಂವಾದ ನಡೆಸಿದರು.
ಮಹಿಳಾ ವೇದಿಕೆಯ ಸಂಯೋಜಕರಾದ ಉಪನ್ಯಾಸಕಿ ಪ್ರಮಿಳಾ ಪ್ರಾಸ್ತಾವಿಕ ಮಾತುಗಳನ್ನಾಡಿ, ಸ್ವಾಗಿತಿಸಿದರು. ಕುಮಾರಿ ಸ್ವಪ್ನಾ ನಿರೂಪಿಸಿ, ಕುಮಾರಿ ನಯನ ವಂದಿಸಿದರು.