ಕುಂದಾಪು: ದಿನಾಂಕ: 16-05-2023ರಂದು ಪದವಿ ಮತ್ತು ಪದವಿ ಪೂರ್ವ ಕಾಲೇಜು ಬಸ್ರೂರು ಸುವರ್ಣ ಮಹೋತ್ಸವ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಸಂಚಾಲಕರಾದ ಶ್ರೀ ಬಿ. ಅಪ್ಪಣ್ಣ ಹೆಗ್ಡೆ ಗ್ರಾಮೀಣ ಜನತೆಗೆ ಶಿಕ್ಷಣ ದೊರಕಬೇಕೆನ್ನುವ ಉದ್ದೇಶದಿಂದ ಸ್ಥಾಪಿತವಾದ ಈ ಸಂಸ್ಥೆ ಸಾಕಷ್ಟು ಮೆಚ್ಚುಗೆ ಪಡೆದಿದೆ. ವಿದ್ಯಾರ್ಥಿಗಳಿಗೆ ಬದುಕನ್ನು ಕಟ್ಟಿಕೊಡುವಲ್ಲಿ ಹಾಗೂ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದೆ. ಇತ್ತೀಚಿನ ದಿನಗಳಲ್ಲಿ ಒಂದು ಶಿಕ್ಷಣ ಸಂಸ್ಥೆಯನ್ನು ಮುನ್ನಡೆಸುವುದು ದೊಡ್ಡ ಸವಾಲಾಗಿದ್ದು, ಕಾಲೇಜಿನ ಹಳೆ ವಿದ್ಯಾರ್ಥಿಗಳು ಕೈ ಜೋಡಿಸುವುದರ ಮೂಲಕ ಸಂಸ್ಥೆಯನ್ನು ಬೆಳೆಸಬೇಕೆಂದರು. ನವೀಕೃತ ವೀರರಾಜೇಂದ್ರ ಹೆಗ್ಡೆ ಸಭಾಂಗಣವನ್ನು ಲೈಫ್‍ಲೈನ್ ಫೀಡ್ಸ್ ಪ್ರೈಲಿ. ಚಿಕ್ಕಮಗಳೂರು ಇದರ ಅಧ್ಯಕ್ಷರು ಮತ್ತು ವ್ಯವಸ್ಥಾಪನಾ ನಿರ್ದೇಶಕರುಗಳಾದ ಶ್ರೀ ಕೈಲ್ಕೆರೆ ಕಿಶೋರ್ ಕುಮಾರ್ ಹೆಗ್ಡೆ ಉದ್ಘಾಟಿಸಿದರು. ಇವರು ಕಾರ್ಯಕ್ರಮ ಕುರಿತು ಪ್ರತಿಯೊಬ್ಬರು ತಮ್ಮ ದುಡಿತದ ಸ್ವಲ್ಪ ಭಾಗವನ್ನು ಸಮಾಜ ಸೇವೆಗೆ ಮೀಸಲಿಡಬೇಕು ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ.ಎಸ್ ಜಯರಾಮ ಶೆಟ್ಟಿ ಕಾಲೇಜಿನ ಬೆಳವಣಿಗೆ ಮತ್ತು ಅಭಿವೃದ್ದಿಗೆ ಸಲಹೆ ಸೂಚನೆ ನೀಡಿದರು. ಅಪರ ನಿರ್ದೇಶಕರು, ಕರ್ನಾಟಕ ರಾಜ್ಯ ವಸತಿ ಶಿಕ್ಷಣ ಸಂಸ್ಥೆ, ಬೆಂಗಳೂರು ಶ್ರೀ ನಾಗರಾಜ ಶೇರಿಗಾರ್ ಶಾರದಾ ಸುವರ್ಣ ಸಂಚಿಕೆ ಬಿಡುಗಡೆ ಮಾಡಿದರು ಹಳೆ ವಿದ್ಯಾರ್ಥಿ ಸಂಘ ಅಧ್ಯಕ್ಷರಾದ ಶ್ರೀ ರಾಮಕಿಶನ್ ಹೆಗ್ಡೆ ಸ್ವಾಗತಿಸಿದರು. ಸುವರ್ಣ ಮಹೋತ್ಸವದ ಪ್ರಾಸ್ತಾವಿಕ ನುಡಿಯನ್ನು ನಿವೃತ್ತ ಪ್ರಾಂಶುಪಾಲರಾದ ಪ್ರೊ. ಕೆ.ರಾಧಾಕೃಷ್ಣ ಶೆಟ್ಟಿ ನೆರವೇರಿಸಿದರು. ಸುವರ್ಣ ಸಂಚಿಕೆಯ ಸಂಪಾದಕರಾದ ಡಾ.ಕನರಾಡಿ ವಾದಿರಾಜ ಭಟ್ ಸುವರ್ಣ ಸಂಚಿಕೆಯ ಅಂತರ್ ದರ್ಶನ ಮಾಡಿದರು. ಕಾರ್ಯಕ್ರಮದಲ್ಲಿ ಸುವರ್ಣ ಮಹೋತ್ಸವ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಜಯಶೀಲ ಶೆಟ್ಟಿ, ಕೋಶಾಧಿಕಾರಿಗಳಾದ ವಿಜಯಾನಂದ ಶೆಟ್ಟಿ, ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಚಂದ್ರಾವತಿ ಶೆಟ್ಟಿ ಮತ್ತು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ನಾರಾಯಣ ಪೈ ಉಪಸ್ಥಿತರಿದ್ದರು. ನಿವೃತ್ತ ಪ್ರಾಂಶುಪಾಲರಾದ ಗಣಪಯ್ಯ ಶೆಟ್ಟಿ, ಚಂದ್ರಪ್ರಭಾ ಆರ್ ಹೆಗ್ಡೆ, ಚಂದ್ರಶೇಖರ ಶೆಟ್ಟಿ, ದಿನೇಶ್ ಹೆಗ್ಡೆ, ಕನರಾಡಿ ವಾದಿರಾಜ ಭಟ್, ಕೆ. ರಾಧಾಕೃಷ್ಣ ಶೆಟ್ಟಿ, ಡಾ.ಚಂದ್ರಾವತಿ ಶೆಟ್ಟಿ, ಪ್ರಾಧ್ಯಾಪಕರುಗಳಾದ ಪ್ರೋ.ಲೀಲಾಮಣಿ ಬಿ.ಎನ್, ಹೆಚ್. ಜಗದೀಶ, ಭಾಸ್ಕರ ಶೆಟ್ಟಿ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರಿಗೆ ಗುರುವಂದನೆ ನಡೆಸಲಾಯಿತು.