Home » ಶಿಕ್ಷಪ್ರಭ ಅಕಾಡೆಮಿ ಕುಂದಾಪುರ
 

ಶಿಕ್ಷಪ್ರಭ ಅಕಾಡೆಮಿ ಕುಂದಾಪುರ

ಸಿಎ  ಫಲಿತಾಂಶದಲ್ಲಿ ಶ್ರೇಷ್ಠ ಸಾಧನೆ

by Kundapur Xpress
Spread the love

ಕುಂದಾಪುರ:- ಸಿಎ/ಸಿಎಸ್ ಪ್ರೊಫೆಷನಲ್ ಕೋರ್ಸುಗಳಿಗೆ ಗುಣಮಟ್ಟದ ತರಬೇತಿ ನೀಡುವುದರಲ್ಲಿ ಮುಂಚೂಣಿಯಲ್ಲಿರುವ ಕುಂದಾಪುರದ ಕುಂದೇಶ್ವರ ದೇವಸ್ಥಾನ ರಸ್ಥೆಯ ಸಿರಿ ಬಿಲ್ಡಿಂಗ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ  ಹೆಸರಾಂತ ಸಂಸ್ಥೆ ಶಿಕ್ಷ ಪ್ರಭ ಅಕಾಡೆಮಿ ಆಫ್ ಕಾಮರ್ಸ್ ಎಜ್ಯುಕೇಶನ್ (ಸ್ಪೇಸ್) ನ ವಿದ್ಯಾರ್ಥಿಗಳು ಇನ್ಸ್ಟಿಟೂಟ್ ಆಫ್ ಚಾರ್ಟಡ್ ಅಕೌಂಟೆಂಟ್ಸ್ ಆಫ್ ಇಂಡಿಯ ಜೂನ್ 2023 ರಲ್ಲಿ ನೆಡೆಸಿದ ಸಿಎ  ಫೌಂಡೇಶನ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದುವುದರ ಮೂಲಕ ಸಾಧನೆಗೈದಿದ್ದಾರೆ.

ಸಂಸ್ಥೆಯ ವಿದ್ಯಾರ್ಥಿಗಳಾದ ಅನ್ವಿತಾ ಎ(286), ಕೃತಿಕಾ (248), ಪೌರ್ಣಮಿ ಐತಾಳ್ (243), ಪ್ರೇಕ್ಷಿತಾ (243), ದೀಕ್ಷಿತಾ ಗೋಪಾಲ್ (238), ಚಿರಾಗ್ ಮೆಂಡನ್ (232), ಶ್ರಾವ್ಯ ಪೂಜಾರಿ (227), ಸುಜನಾ(223), ಆಶಿಷ್ ಶೆಟ್ಟಿ(222), ತರುಣ್ (218), ಅಶ್ವಿತಾ (216), ಸುಜೇತಾ ಶೆಟ್ಟಿ (214), ಅಖಿಲೇಶ್ (211), ಪೂಜಾ ಶೇಟ್(210), ಸೂರಜ್ ಆಚಾರ್ (208), ನಿಶಿತಾ (207), ತೇಜಸ್ವಿ ಪೋಜಾರಿ (207), ಛಾಯ ಕಿರಣ್ (205), ಸುಶ್ಮಿತಾ (200), ಶ್ರಾವ್ಯ ಭಟ್ (200) ಅಂಕಗಳೊಂದಿಗೆ ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ.

ಶಿಕ್ಷ ಪ್ರಭ  ಅಕಾಡೆಮಿಯು ಕಳೆದ ಕೆಲವು ವರ್ಷಗಳಿಂದ ಸಿಎ ಮತ್ತು  ಸಿಎಸ್  ಪ್ರೊಫೆಷನಲ್  ಕೋರ್ಸುಗಳಿಗೆ  ಗುಣಮಟ್ಟದ  ತರಬೇತಿ ನೀಡುತ್ತಾ ಬಂದಿದ್ದು  ಅನೇಕ ವಿದ್ಯಾರ್ಥಿಗಳು ಸಿಎ/ಸಿಎಸ್ ನ ಎಲ್ಲಾ ಹಂತದ ಪರೀಕ್ಷೆಯಲ್ಲೂ ಉತ್ತೀರ್ಣರಾಗಿ ದೇಶದ ನಾನಾ ಭಾಗಗಳಲ್ಲಿ  ಉದ್ಯೋಗದಲ್ಲಿದ್ದಾರೆ. ಸಂಸ್ಥೆಯಲ್ಲಿ ಬೋಧಕ  ಸಿಬ್ಭಂದಿಗಳಾಗಿ ಆಗಮಿಸುವ ಅನುಭವಿ ಲೆಕ್ಕ ಪರಿಶೋಧಕರು, ತರಬೇತುದಾರರು, ವಿದ್ಯಾರ್ಥಿಗಳಿಗೆ ಗುಣಮಟ್ಟದ  ತರಬೇತಿ ನೀಡುವುದರ ಪರಿಣಾಮ ಪ್ರತಿ ಬ್ಯಾಚ್‌ನಲ್ಲಿ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಯಿತು. ಬೋಧಕ ಸಿಬ್ಬಂಧಿ  ವರ್ಗದವರಿಗೂ ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೂ ಸಂಸ್ಥೆಯ ಮುಖ್ಯಸ್ಥರಾದ ಪ್ರತಾಪ್‌ಚಂದ್ರ ಶೆಟ್ಟಿ ಮತ್ತು ಭರತ್ ಶೆಟ್ಟಿಯವರು ಅಭಿನಂದನೆ ಸಲ್ಲಿಸಿದ್ದಾರೆ

   

Related Articles

error: Content is protected !!