Home » ಸಿಎ ವಿದ್ಯಾರ್ಥಿಗಳಿಗೆ ನೂತನ ಬ್ಯಾಚ್ ಆರಂಭ
 

ಸಿಎ ವಿದ್ಯಾರ್ಥಿಗಳಿಗೆ ನೂತನ ಬ್ಯಾಚ್ ಆರಂಭ

ಶಿಕ್ಷ ಪ್ರಭ ಅಕಾಡೆಮಿ ಕುಂದಾಪುರ

by Kundapur Xpress
Spread the love

ಕುಂದಾಪುರ: ಸಿಎ/ಸಿಎಸ್ ಪರೀಕ್ಷೆಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ರಾಷ್ಟ್ರಮಟ್ಟದಲ್ಲಿ ರ‍್ಯಾಂಕ್ ಗಳನ್ನು ಪಡೆದ ಉಡುಪಿ ಜಿಲ್ಲೆಯ ಪ್ರತಿಷ್ಠಿತ ಸಿಎ/ಸಿಎಸ್ ತರಬೇತಿ ಸಂಸ್ಥೆ ಶಿಕ್ಷ‌ ಪ್ರಭ ಅಕಾಡಮಿ ಆಫ್ ಕಾಮರ್ಸ್ ಎಜುಕೇಶನ್ (ಸ್ಪೇಸ್) ಸಂಸ್ಥೆಯು ಪದವಿ ಪೂರ್ಣಗೊಳಿಸಿದ ಮತ್ತು ಅಂತಿಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿರುವ ಹಾಗೂ ಸಿಎ ಫೌಂಡೇಶನ್ ವಿದ್ಯಾರ್ಥಿಗಳಿಗಾಗಿ ನೂತನ ಸಿಎ ಇಂಟರ್ಮೀಡಿಯೇಟ್ ಬ್ಯಾಚ್ ಆರಂಭಿಸುತ್ತಿದ್ದು ಫೆಬ್ರವರಿ 1ರಂದು ಮಾಹಿತಿ ಕಾರ್ಯಾಗಾರವನ್ನು ಕುಂದೇಶ್ವರ ದೇವಸ್ಥಾನ ರಸ್ತೆಯ ಸಿರಿ ಬಿಲ್ಡಿಂಗ್‌ನಲ್ಲಿ ಕಾರ್ಯನಿರ್ವಹಿಸುತ್ತಿರವ ಶಿಕ್ಷಪ್ರಭ ಅಕಾಡೆಮಿಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

 ಸಿಎ ವಿದ್ಯಾರ್ಥಿಗಳ ಹೊಸ ಮಾದರಿ ಪಠ್ಯಕ್ರಮ:

ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಸಿಎ ಇಂಟರ್ಮೀಡಿಯೇಟ್ ಪರೀಕ್ಷೆಗೆ ಎಂಟು ವಿಷಯಗಳಲ್ಲಿ ಪರೀಕ್ಷೆ ನಡೆಸುತ್ತಿತ್ತು ಆದರೆ ಮುಂದಿನ ಮೇ 2024ರಿಂದ ನಡೆಯುವ ಸಿಎ ಇಂಟರ್ಮೀಡಿಯೇಟ್ ಪರೀಕ್ಷೆಯನ್ನು ಆರು ವಿಷಯಗಳಲ್ಲಿ ನಡೆಸುವ ನೂತನ ಪಠ್ಯಕ್ರಮವನ್ನು ಜಾರಿಗೆ ತಂದಿದ್ದು ಇದು ವಿದ್ಯಾರ್ಥಿಗಳಿಗೆ ಒಂದೇ ಪ್ರಯತ್ನದಲ್ಲಿ ಆರು ವಿಷಯ(ಸಬ್ಜೆಕ್ಟ್)ಗಳನ್ನು ತೇರ್ಗಡೆ ಹೊಂದಲು ಸಹಕಾರಿಯಾಗಲಿದೆ. ಸಿಎ ಅಂತಿಮ ಹಂತದ ಪರೀಕ್ಷೆಗೂ ಕೂಡ ಹೊಸ ಮಾದರಿ ಪಠ್ಯಕ್ರಮದ ಪ್ರಕಾರ ಆರು ವಿಷಯ(ಸಬ್ಜೆಕ್ಟ್)ಗಳ ಪರೀಕ್ಷೆಯಾಗಿರುತ್ತದೆ. ಹಿಂದಿನ ಮಾದರಿಯಲ್ಲಿ ವಿದ್ಯಾರ್ಥಿಗಳು ಎಂಟು ವಿಷಯ(ಸಬ್ಜೆಕ್ಟ್)ಗಳ ಪರೀಕ್ಷೆಯನ್ನು ಎದುರಿಸಬೇಕಾಗಿತ್ತು.

ಅನುಭವಿ ಶಿಕ್ಷಕರ ವೃಂದ:

ನೂತನವಾಗಿ ಆರಂಭವಾಗುವ ಸಿಎ ಇಂಟರ್ಮೀಡಿಯೇಟ್ ಬ್ಯಾಚ್‌ಗೆ ಶಿಕ್ಷ ಪ್ರಭ ಅಕಾಡೆಮಿಯಲ್ಲಿ ಅನುಭವಿ ಲೆಕ್ಕಪರಿಶೋಧಕರನ್ನು ಒಳಗೊಂಡಿರುವ ಶಿಕ್ಷಕರ ತಂಡ ತರಬೇತಿಯನ್ನು ನೀಡಲಿದ್ದು ಅಡ್ವಾನ್ಸ್ಡ್ ಅಕೌಂಟಿಂಗ್ ವಿಷಯಕ್ಕೆ ಸಿಎ ಸಂತೋಷ್ ಪ್ರಭು ಮತ್ತು ಪ್ರತಾಪಚಂದ್ರ ಶೆಟ್ಟಿ, ಕಾರ್ಪೊರೇಟ್  ಅಂಡ್‌ ಅದರ್‌ ಲಾ –  ಸಿ ಎ ಅರುಣ್ ನಾಯಕ್ ಮತ್ತು ಸಿಎ ವಿಲಾಸ್‌ ಶೆಟ್ಟಿ, ಇನ್‌ಕಮ್ ಟ್ಯಾಕ್ಸ್ ಲಾ- ಸಿ ಎ ಅರುಣ್ ನಾಯಕ್,  ಜಿಎಸ್‌ಟಿ- ಶ್ರೀಮತಿ ನೇಹಾ ಪ್ರಭು,  ಕಾಸ್ಟ್ ಅಂಡ್ ಮ್ಯಾನೇಜ್‌ಮೆಂಟ್ ಅಕೌಂಟಿಂಗ್- ಸಿಎ ವಿಲಾಸ್‌ ಶೆಟ್ಟಿ,  ಆಡಿಟಿಂಗ್ ಅಂಡ್ ಎಥಿಕ್ಸ್- ಸಿಎ ಸಂತೋಷ್ ಪ್ರಭು,  ಫೈನಾನ್ಸಿಯಲ್ ಮ್ಯಾನೇಜ್‌ಮೆಂಟ್ ಅಂಡ್ ಸ್ಟ್ರ್ಯಾಟಜಿಕ್ ಮ್ಯಾನೇಜ್‌ಮೆಂಟ್- ಸಿಎ ನಾಗೇಂದ್ರ ಭಕ್ತ ಮತ್ತು ಸಿಎ ರಾಷ್ಟ್ರಿತ್‌ ಅವರುಗಳು ತರಬೇತುದಾರರಾಗಿ ಆಗಮಿಸಿ ಆಗಸ್ಟ್ 2024ರ ಒಳಗೆ ಸಿಎ ಇಂಟರ್ಮೀಡಿಯೇಟ್ ಎರಡು ಗ್ರೂಪ್ ನ ಆರು ವಿಷಯ(ಸಬ್ಜೆಕ್ಟ್)ಗಳ ತರಬೇತಿಯನ್ನು ನೀಡಿ ನವೆಂಬರ್ 2024ರ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಲಿದ್ದಾರೆ.

ಈಗಾಗಲೇ ದಾಖಲಾತಿ ಪ್ರಕ್ರಿಯೆ ಆರಂಭವಾಗಿದ್ದು ಒಂದು ಬ್ಯಾಚ್ ನಲ್ಲಿ ನಿಯಮಿತ ವಿದ್ಯಾರ್ಥಿಗಳು ಇರಲಿದ್ದು, ಪದವಿ ಪೂರ್ಣಗೊಳಿಸಿದ, ಅಂತಿಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿರುವ ಮತ್ತು ಸಿಎ ಫೌಂಡೇಶನ್ ಪರೀಕ್ಷೆಯನ್ನು ಬರೆದಿರುವ ವಿದ್ಯಾರ್ಥಿಗಳು ಶಿಕ್ಷ ಪ್ರಭ ಅಕಾಡೆಮಿಯಲ್ಲಿ ಫೆಬ್ರವರಿ 1ರಂದು ನಡೆಯಲಿರುವ ಮಾಹಿತಿ ಕಾರ್ಯಾಗಾರದಲ್ಲಿ ಭಾಗವಹಿಸಬಹುದಾಗಿದೆ ಹಾಗೂ ಆಸಕ್ತ ವಿದ್ಯಾರ್ಥಿಗಳು ನೂತನ ಬ್ಯಾಚ್‌ಗೆ ತಮ್ಮ ಹೆಸರನ್ನು  ಸಂಸ್ಥೆಯ ಕಚೇರಿಯಲ್ಲಿ ನೋಂದಾಯಿಸಿಕೊಳ್ಳ ಬಹುದು.

ಹೆಚ್ಚಿನ ಮಾಹಿತಿಗಾಗಿ ಕುಂದೇಶ್ವರ ದೇವಸ್ಥಾನ ರಸ್ತೆಯ ಸಿರಿ ಬಿಲ್ಡಿಂಗ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷ ಪ್ರಭ ಅಕಾಡೆಮಿಯ ಕಚೇರಿಗೆ ಭೇಟಿ ನೀಡಬಹುದಾಗಿದೆ ಅಥವಾ 996429175, 9845925983 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

   

Related Articles

error: Content is protected !!