Home » ಜಿಲ್ಲೆಯಲ್ಲಿ ಸಮಾಂತರ ಶಿಕ್ಷಣಕ್ಕೆ ಒಂದು ಮಾದರಿ ಸಂಸ್ಥೆ
 

ಜಿಲ್ಲೆಯಲ್ಲಿ ಸಮಾಂತರ ಶಿಕ್ಷಣಕ್ಕೆ ಒಂದು ಮಾದರಿ ಸಂಸ್ಥೆ

by Kundapur Xpress
Spread the love

ಸ್ನೇಹ ಟ್ಯುಟೋರಿಯಲ್ ಕಾಲೇಜು

“ಜಿಲ್ಲೆಯಲ್ಲಿ ಸರಕಾರಿ, ಅನುದಾನಿತ, ಅನುದಾನ ರಹಿತ ಕಾಲೇಜುಗಳು ಇವೆ. ಇವೆಲ್ಲವೂ ಕಲಿಕೆಯಲ್ಲಿ ಮುಂದುವರಿದ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುತ್ತವೆ. ಆದರೆ ಇದಕ್ಕೆ ಸಮಾನಾಂತರವಾಗಿ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗೆ ಅವಕಾಶ ಮಾಡಿಕೊಟ್ಟಿರುವುದು ‘ಸ್ನೇಹ’ ಸಂಸ್ಥೆ”ಉಡುಪಿಯು ಶಿಕ್ಷಣಕ್ಕೆ ವಿಶೇಷವಾದ ಮಹತ್ವ ನೀಡಿಕೊಂಡು ಬಂದಿರುವ ಒಂದು ಜಿಲ್ಲೆ. ಇಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆ ಮತ್ತು ವಿದ್ಯಾರ್ಥಿಗಳ ಅಭಿರುಚಿಗೆ ತಕ್ಕ  ಶಿಕ್ಷಣದ ವ್ಯವಸ್ಥೆಯನ್ನು ನೋಡಬಹುದು. ಪ್ರತಿಯೊಬ್ಬ ಪೋಷಕರಿಗೆ ತಮ್ಮ ಮಕ್ಕಳು ಉತ್ತಮ ವಿದ್ಯಾಭ್ಯಾಸ ಪಡೆದು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕೆಲಸ ಮಾಡಬೇಕೆಂಬುದು ವಾಸ್ತವ. ಅದರಲ್ಲಿಯೂ ಮಕ್ಕಳು ವೈದ್ಯರಾಗಬೇಕು ಇಲ್ಲವೇ ಇಂಜಿನಿಯರ್ ಆಗಬೇಕು ಅದರೊಂದಿಗೆ ತಮ್ಮ ಮನೆತನದ ಪ್ರತಿಷ್ಠೆ ಹೆಚ್ಚಿಸಿಕೊಳ್ಳಬೇಕೆಂಬ ಬಯಕೆ. ಆದ್ದರಿಂದ ಎಸ್.ಎಸ್.ಲ್.ಸಿ ಯಲ್ಲಿ ಉತ್ತಮ ಅಂಕ ಪಡೆದು ತಾವು ಬಯಸಿದ ಇಲ್ಲವೇ ಹೆತ್ತವರ ಒತ್ತಾಸೆಗೆ ಜಿಲ್ಲೆಯ ಪ್ರತಿಷ್ಠಿತ ಕಾಲೇಜಿಗೆ ಪ್ರವೇಶ ಪಡೆದು ಶಿಕ್ಷಣ ಮುಂದುವರಿಸುತ್ತಿರುವುದು ಸಾಮಾನ್ಯವಾಗಿ ಕಾಣಸಿಗುತ್ತದೆ. ಜಿಲ್ಲೆಯಲ್ಲಿ ಸರಕಾರಿ, ಅನುದಾನಿತ, ಅನುದಾನ ರಹಿತ ಕಾಲೇಜುಗಳು ಇವೆ. ಇವೆಲ್ಲವೂ ಕಲಿಕೆಯಲ್ಲಿ ಮುಂದುವರಿದ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುತ್ತವೆ. ಆದರೆ ಇದಕ್ಕೆ ಸಮಾನಾಂತರವಾಗಿ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗೆ ಅವಕಾಶ ಮಾಡಿಕೊಟ್ಟಿರುವುದು ಉಡುಪಿಯ ಕಲ್ಸಂಕದಲ್ಲಿರುವ ‘ಸ್ನೇಹ ಟ್ಯುಟೋರಿಯಲ್ ಕಾಲೇಜು’.ವಿದ್ಯಾರ್ಥಿಗಳು ಪ್ರಥಮ ಪಿ.ಯು.ಸಿ.ಗೆ ಪ್ರವೇಶ ಪಡೆಯುವಾಗ ಗೊತ್ತಿದ್ದು,, ಇಲ್ಲವೇ ಗೊತ್ತಿಲ್ಲದೇ ಕೆಲವೊಮ್ಮ ತಪ್ಪಾದ ಸಂಯೋಜನೆಯನ್ನು ಆಯ್ದುಕೊಂಡು ಪ್ರಥಮ ಪಿ.ಯು.ಸಿ ಯಲ್ಲಿಯೇ ಎಡವುದು ಇದೆ. ಇಂತಹ ಸಂದರ್ಭದಲ್ಲಿ ತಾವು ಸಂಯೋಜನೆ ಬದಲಾವಣೆಯನ್ನು ಮಾಡಬೇಕಾದರೆ ಪುನಃ ಪ್ರಥಮ ಪಿ.ಯು.ಸಿಗೆ ಪ್ರವೇಶ ಪಡೆಯಬೇಕು. ಹೀಗಾದಲ್ಲಿ ಅವರ ಒಂದು ವರ್ಷ ನಷ್ಟವಾಗುತ್ತದೆ. ಅದಕ್ಕಾಗಿ ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆ ಸಂಯೋಜನೆ ಬದಲಾವಣೆಯೊಂದಿಗೆ ನೇರವಾಗಿ ದ್ವಿತೀಯ ಪಿಯುಸಿ ಪರೀಕ್ಷೆ ಯನ್ನು ವಾಣಿಜ್ಯ ಮತ್ತು ಕಲಾ ವಿಭಾಗದಲ್ಲಿ ಬರೆಯಲು ಅವಕಾಶವನ್ನು ನೀಡಿದೆ. ಆದರೆ ಕೆಲವರು ಸಂಯೋಜನೆ ಬದಲಾವಣೆ ಮಾಡಲು ಅಪೇಕ್ಷೆ ಪಡುವುದಿಲ್ಲವಾದ್ದರಿಂದ ಅಂತವರಿಗೆ ಪ್ರಥಮ ಪಿ.ಯು.ಸಿಯಲ್ಲಿ ಕಲಿತ ಸಂಯೋಜನೆಯಲ್ಲಿಯೇ ಶಿಕ್ಷಣ ಮುಂದುವರಿಸುವ ಅವಕಾಶವಿದೆ. ಕಳೆದ ೬ ವರ್ಷದಿಂದ ದ್ವಿತೀಯ ಪಿ.ಯು.ಸಿಯನ್ನು ವಿಜ್ಞಾನ ವಿಭಾಗದಲ್ಲಿ ಕಲಿಯ ಬಯಸುವವರಿಗೆ ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ ನ ಮೂಲಕ ಪರೀಕ್ಷೆಯನ್ನು ಬರೆಯಲಾಗುತ್ತದೆ. ವೈದ್ಯಕೀಯ ಮತ್ತು ಇಂಜಿನಿಯರಿAಗ್‌ಗೆ ಹೋಗ ಬಯಸುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.  ಇಂತಹ ಒಂದು ವ್ಯವಸ್ಥೆಯನ್ನು ಬಳಸಿ ಕೊಂಡಿರುವ ಈ ಸಂಸ್ಥೆ  ಕಳೆz ೨೫ ವರ್ಷಗಳಿಂದ ಅದೆಷ್ಟೋ ವಿದ್ಯಾರ್ಜನೆಯ ಹಾದಿಯಲ್ಲಿ ಎಡವಿದ ವಿದ್ಯಾರ್ಥಿಗಳಿಗೆ ಕಲಿಕೆಯ ಹೊಸ ದಾರಿಯನ್ನು ನಿರ್ಮಿಸಿಕೊಟ್ಟು, ಬಾಳಿನಲ್ಲಿ ಚೈತನ್ಯವನ್ನು ನೀಡುವಲ್ಲಿ ಸಫಲವಾಗಿದೆ. ಈ ಕಾಲೇಜಿನ ಶೈಕ್ಷಣಿಕ ವ್ಯವಸ್ಥೆ ಪ್ರತಿಷ್ಠಿತ ಶಾಲೆ/ ಕಾಲೇಜಿನ ಮಾದರಿಯಲ್ಲಿಯೇ ನಡೆಯುತ್ತದೆ. ಬೆಳಿಗ್ಗೆ ಪ್ರಾರ್ಥನೆಯಿಂದಲೇ ತರಗತಿಗಳು ಆರಂಭವಾಗುತ್ತಿದು ್ದ ಪ್ರತಿಯೊಂದು ತರಗತಿಯಲ್ಲಿ “೬೦” ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುತ್ತದೆ. ಒಟ್ಟು ನಾಲ್ಕು  ತರಗತಿಗಳು ಏಕಕಾಲದಲ್ಲಿ ನಡೆಯುತ್ತದೆ. ಪಿ.ಯು.ಸಿ ಗೆ ಮೂರು  ತರಗತಿಗಳು ಹಾಗೆಯೇ ಕಲಿಕೆಯಲ್ಲಿ ಹಿಂದುಳಿದ ಅಥವಾ ಕಾರಣಾಂತರದಿAದ ೮, ೯ ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮೊಟಕುಗೊಳಿಸಿದ ವಿದ್ಯಾರ್ಥಿಗಳಿಗೆ ನೇರವಾಗಿ ೧೦ ನೇ ತರಗತಿಯ ವಿದ್ಯಾರ್ಜನೆಗೆ ಅವಕಾಶ ಇದ್ದು ಕನ್ನಡ ಮತ್ತು ಇಂಗ್ಲೀಷ್ ಮಾಧ್ಯಮದ ಎರಡು ತರಗತಿಗಳು ನಡೆಯುತ್ತವೆ. ಅಲ್ಲದೆ ಮಧ್ಯಾಹ್ನದ ನಂತರ ೧೦ ನೇ ತರಗತಿಯಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ.ಒಂದೇ ಸೂರಿನಡಿ ಈ ಎಲ್ಲಾ ವ್ಯವಸ್ಥೆಗೆ ಸುಮಾರು ೩೦೦೦ ಚ. ಅಡಿಯ ಸ್ಥಳಾವಕಾಶವಿದ್ದು “೧೨” ಉಪನ್ಯಾಸಕರು ಈ ಕಾಲೇಜಿನಲ್ಲಿ ಅವಿರತವಾಗಿ ಶಿಕ್ಷಣದಲ್ಲಿ ಉತ್ತಮ ಫಲಿತಾಂಶ ಪಡೆಯುವಲ್ಲಿ ಸಹಕಾರಿಯಾಗಿದ್ದಾರೆ. ಇಲ್ಲಿ ೧೦ ನೇ ತರಗತಿ ಇಲ್ಲವೇ ಪಿ.ಯು.ಸಿ ಮುಗಿಸಿದ ಅದೆಷ್ಟೋ ವಿದ್ಯಾರ್ಥಿಗಳು ನಂತರದ ದಿನದಲ್ಲಿ ಪ್ರತಿಷ್ಠಿತ ಕಾಲೇಜಿನಲ್ಲಿ ಪದವಿಯನ್ನು ಪಡೆದು ಉತ್ತಮ ಉದ್ಯೋಗದಲ್ಲಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಉತ್ತಮ ಫಲಿತಾಂಶ ಪಡೆಯುತ್ತಾ ಬಂದಿರುವ ಈ ಸಂಸ್ಥೆಯು ವಿದ್ಯಾರ್ಥಿಗಳ ಜೀವನದಲ್ಲಿ ಒಂದು ಆಶಾಕಿರಣವನ್ನು ಮೂಡಿಸುವಲ್ಲಿ ಸಫಲತೆಯನ್ನು ಕಂಡಿದೆ ಅಂದರೆ ತಪ್ಪಾಗಲಾರದು. ಇಂತಹ ವೈಶಿಷ್ಟö್ಯ ಪೂರ್ಣ ಸಂಸ್ಥೆಯು ಇನ್ನಷ್ಟು ವಿದ್ಯಾರ್ಥಿಗಳಿಗೆ ದಾರಿದೀಪವಾಗಲಿ ಅಲ್ಲದೇ ವಿದ್ಯಾರ್ಜನೆಯ ಮಾರ್ಗದಲ್ಲಿ ಎಡವಿದವರಿಗೆ ಮಾರ್ಗದರ್ಶನ  ನೀಡುವಂತಾಗಲಿ ……

   

Related Articles

error: Content is protected !!