ಕೋಟೇಶ್ವರ : ಪದವಿ ಶಿಕ್ಷಣದಲ್ಲಿ ಅಂಕ ಗಳಿಕೆಯೊಂದಿಗೆ ಕೌಶಲ್ಯ, ಬುದ್ಧಿಶಕ್ತಿಯನ್ನು ಬೆಳೆಸಿಕೊಂಡು ಒಂದು ಸ್ಪಷ್ಟ ಗುರಿಯೊಂದಿಗೆ ಮುನ್ನಡೆದಾಗ ಯಶಸ್ಸು ಸಾಧ್ಯ. ಪ್ರತಿಭೆಯೊಂದಿಗೆ ನಾಯಕತ್ವವು ಮಾನದಂಡವಾಗಿರುವ ಇಂದಿನ ದಿನಗಳಲ್ಲಿ ಸವಾಲುಗಳನ್ನು ಎದುರಿಸಿ ಗೆಲ್ಲುವ ಛಾತಿಯನ್ನು ಬೆಳೆಸಿಕೊಂಡಾಗ ಮಾತ್ರ ಬದುಕಿನಲ್ಲಿ ಎತ್ತರಕ್ಕೇರುವ ಅವಕಾಶಗಳಿವೆ ಎಂದು ಕುಂದಾಪುರದ ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಜಿ. ಎಂ. ಗೊಂಡ ಹೇಳಿದರು. ಅವರು ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಕುಂದಾಪುರ ಇಲ್ಲಿನ 2024-25ನೇ ಸಾಲಿನ ವಿದ್ಯಾರ್ಥಿ ವೇದಿಕೆಯನ್ನು ಉದ್ಘಾಟಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಜೇಂದ್ರ ಎಸ್. ನಾಯಕರವರು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ, ಯಶಸ್ಸೆಂಬುದು ಹಣ ಕೊಟ್ಟು ಖರೀದಿಸುವಂಥದ್ದಲ್ಲ ಅಥವಾ ಯಾರೋ ನಮಗೆ ದಾನವಾಗಿ ನೀಡುವಂತಹದ್ದೂ ಅಲ್ಲ. ಯಶಸ್ಸಿನ ಸೂತ್ರವಿರುವುದು ಕೇವಲ ಪ್ರಯತ್ನದಲ್ಲಿ. ವಿದ್ಯಾರ್ಥಿವೇಧಿಕೆಯ ಪದಾಧಿಕಾರಿಗಳು ಸದ್ರಿ ಶೈಕ್ಷಣಿಕ ವರ್ಷದಲ್ಲಿ ಧೈರ್ಯ, ಆತ್ಮವಿಶ್ವಾಸ, ತಾಳ್ಮೆಯಿಂದ ನಾಯಕತ್ವ ಗುಣವನ್ನು ಮೈಗೂಡಿಸಿಕೊಂಡು ಕಾಲೇಜಿನ ಅಭಿವೃದ್ಧಿಯಲ್ಲಿ ಕೈಜೋಡಿಸಬೇಕೆಂದು ಕರೆ ನೀಡಿದರು.
ಐ.ಕ್ಯೂ.ಎ.ಸಿ. ಸಂಚಾಲಕರಾದ ನಾಗರಾಜ ಯು. ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾಲೇಜು ವಾರ್ಷಿಕ ಸಂಚಿಕೆ ‘ಮಕರಂದ’ ದ ಸಂಪಾದಕ ನಾಗರಾಜ ವೈದ್ಯ ಎಂ. ಸಂಚಿಕೆ ಅಚ್ಚುಕಟ್ಟಾಗಿ ಮೂಡಿಬರಲು ಸಹಕರಿಸಿದವರಿಗೆ ನಮನಗಳನ್ನು ಸಲ್ಲಿಸಿದರು. ನವ್ಯ, ಕಾವ್ಯ, ಅಂಜಲಿ, ಪರಿಣಿತ ಪ್ರಾರ್ಥಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರಾಮರಾಯ ಆಚಾರ್ಯ ಸ್ವಾಗತಿಸಿದ ಈ ಕಾರ್ಯಕ್ರಮದಲ್ಲಿ ಡಾ. ವೆಂಕಟರಾಮ್ ಭಟ್ ವಂದಿಸಿದರು. ತೃತೀಯ ಬಿ.ಎಸ್ಸಿಯ ಸ್ವರ್ಣಿತಾ ಕಾರ್ಯಕ್ರಮ ನಿರೂಪಿಸಿದರು. 2024-25ನೇ ಸಾಲಿನ ವಿದ್ಯಾರ್ಥಿ ವೇದಿಕೆಯ ಅಧ್ಯಕ್ಷ ನಿತಿನ್ ಕುಮಾರ್ ಕೆ.ಎಸ್, ಉಪಾಧ್ಯಕ್ಷರಾದ ತೃತೀಯ ಬಿ.ಎ.ಯ ಕು. ತಿಲಕ ಎಂ. ಎಂ., ಕಾರ್ಯದರ್ಶಿ ತೃತೀಯ ಬಿ.ಎಸ್ಸಿ. ಯ ಯಮನೂರಪ್ಪ, ಜೊತೆ ಕಾರ್ಯದರ್ಶಿ ತೃತೀಯ ಬಿ.ಬಿ.ಎ. ಯ ಕು. ಸುಶ್ಮಿತಾ ಮತ್ತು ಎಂ.ಕಾಂ. ಪ್ರತಿನಿಧಿಯಾಗಿ ಆಯ್ಕೆಗೊಂಡ ಕು. ವಿನುತ ವಿ. ಶೆಟ್ಟಿ ಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.