Home » ವಾರದ ಸೇತುಬಂಧ ಕಾರ್ಯಾಗಾರ
 

ವಾರದ ಸೇತುಬಂಧ ಕಾರ್ಯಾಗಾರ

by Kundapur Xpress
Spread the love

ಉಡುಪಿ :  ಕಟಪಾಡಿಯ ತ್ರಿಶಾ ವಿದ್ಯಾ ಪಿ.ಯು ಕಾಲೇಜಿನ ವಿದ್ಯಾರ್ಥಿಗಳ  ಸೇತುಬಂಧ ಕಾರ್ಯಾಗಾರವು ಒಂದು ವಾರಗಳ ಕಾಲ ನಡೆಯಿತು

ಮೊದಲನೆಯ ದಿನ ಕಾಲೇಜಿನ ಪ್ರಾಂಶುಪಾಲರಾದ  ಡಾ। ಅನಂತ್ ಪೈ ಇವರು ಮಕ್ಕಳಿಗೆ ಸಂಸ್ಕ್ರತಿ ಹಾಗೂ ಕಾಲೇಜು ನಿಯಮದ ಬಗ್ಗೆ ತಿಳಿಸಿದರು ನಂತರ ತ್ರಿಶಾ  ಸಂಸ್ಥೆಯ ಸಂಪನ್ಮೂಲ ವಿಭಾಗದ ಮುಖ್ಯಸ್ಥರಾಗಿರುವ  ಜಯದೀಪ್ ಇವರು ಸಂವಹನಗಳ ಬಗ್ಗೆ ಚಟಿವಟಿಕೆಗಳನ್ನು ನಡೆಸಿಕೊಟ್ಟರು

ಎರಡನೆಯ ದಿನ “ಇಂಪಾಸಿಬಲ್ ಟು ಪಾಸಿಬಲ್” – ಅಸಾದ್ಯದಿಂದ ಸಾಧ್ಯದೆಡೆಗೆ ಎನ್ನುವ ಕಾರ್ಯಾಗಾರವನ್ನ ಸಂಪನ್ಮೂಲ ವ್ಯಕ್ತಿಗಳಾದ ಜೈ ಕಿಶನ್ ಭಟ್ ನೆರವೇರಿಸಿದರು.

ಮೂರನೆಯ ದಿನ ಪಠ್ಯಕ್ರಮದ ವಿಷಯಗಳ ಬಗ್ಗೆ ಸೇತು-ಬಂಧ ಕಾರ್ಯಾಗಾ ನಡೆಯಿತು. ವಾಣಿಜ್ಯ ವಿಷಯದ ಕುರಿತು ಜಯದೀಪ್, ಮೂಲಗಣಿತವನ್ನು ತ್ರಿಶಾ ಸಂಸ್ಥೆಯ ಅಧ್ಯಕ್ಷರಾದ ಸಿ.ಎ ಗೋಪಾಲಕೃಷ್ಣ ಭಟ್, ಹಣ ಮತ್ತು ಹೂಡಿಕೆಯ ಕುರಿತಾಗಿ ತ್ರಿಶಾ ವಿದ್ಯಾ ಕಾಲೇಜಿನ ಪ್ರಾಂಶುಪಾಲರಾದ ಗುರುಪ್ರಸಾದ್ ರಾವ್ ತಿಳಿಸಿಕೊಟ್ಟರು. ನಂತರ ತ್ರಿಶಾ ಕಾಲೇಜಿನ  ಕನ್ನಡ ಪ್ರಾಧ್ಯಪಕ ಧೀರಜ್ ಬೆಳ್ಳಾರೆ ಜೀವನ ಮೌಲ್ಯಗಳನ್ನು ಚಟುವಟಿಕೆ ನೆರವೇರಿಸಿದರು 

ನಾಲ್ಕನೆಯ ದಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಗಣಿತ, ರಾಸಾಯನಶಾಸ್ತ್ರ , ಭೌತಶಾಸ್ತ್ರ ಮತ್ತು ಗಣಕಯಂತ್ರದ ತರಬೇತಿ ನೀಡಲಾಯಿತು. ನಂತರ ರಾಷ್ಟ್ರಮಟ್ಟದ ಜೆ.ಸಿ.ಐ ತರಬೇತುದಾರರಾದ ಡಾ|| ರಾಜೇಂದ್ರ ಭಟ್.ಕೆ ಇವರು ‘Diffrent levels of Success’ಎನ್ನುವ ವಿಷಯ ಮೇಲೆ ತಮ್ಮ ಜೀವನದ ಅನುಭವವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.

ಐದನೆಯ ದಿನ ಸಿ.ಎ ಗಿರಿಧರ್ ಕಾಮತ್ ಇವರು ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿ, ಹಲವಾರು ಚಟುವಟಿಕೆಗಳನ್ನು ಮಾಡಿಸುವುದರ ಮೂಲಕ ಸ್ಫೂರ್ತಿ ತುಂಬಿ ಸೇತು-ಬಂಧ ಕಾರ್ಯಾಗಾರವನ್ನು ಸಂಪನ್ನಗೊಳಿಸಿದರು

   

Related Articles

error: Content is protected !!