ಮಂಗಳೂರು : ಶ್ರೀ ರಾಮಾಶ್ರಮ ಪಿ.ಯು ಕಾಲೇಜು (ತ್ರಿಶಾ ಸಂಸ್ಥೆಯ ಸಂಯೋಗದೊಂದಿಗೆ) ವತಿಯಿಂದ ಪ್ರಥಮ ಪಿ.ಯು ವಿದ್ಯಾರ್ಥಿಗಳಿಗೆ ಸಿಎ ಮತ್ತು ಸಿಎಸ್ ಮಾಹಿತಿ ಕಾರ್ಯಗಾರ ನವೆಂಬರ್ 5 ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಪ್ರೊ. ರಾಜ್ ಗಣೇಶ್ ಕಾಮತ್ ಅವರು ವಿದ್ಯಾರ್ಥಿಗಳಿಗೆ ಸಿಎ ಮತ್ತು ಸಿಎಸ್ ಕೋರ್ಸಿನ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ಕಾಲೇಜಿನ ಉಪಪ್ರಾಂಶುಪಾಲೆ ಯಶಸ್ವಿನಿ ಯಶ್ ಪಾಲ್ ತರಗತಿ ನಿಯಮಗಳನ್ನು ವಿವರಿಸಿದರು.
ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದು, ಕಾರ್ಯಕ್ರಮವನ್ನು ಶಿವಾನಿ ನಿರೂಪಿಸಿ, ಶರಣ್ಯ ಸುರೇಶ್ ವಂದಿಸಿದರು.