ಮಂಗಳೂರು : ಸಿಎ, ಸಿ ಎಸ್ ಮುಂತಾದ ವೃತ್ತಿಪರ ಕೋರ್ಸ್ ಗಳಿಗೆ ಸತತ 27 ವರ್ಷಗಳಿಂದ ಉತ್ತಮ ತರಬೇತಿಯನ್ನು ನೀಡುತ್ತಾ ಬಂದಿರುವ ತ್ರಿಶಾ ಕ್ಲಾಸಸ್ ವತಿಯಿಂದ ಸಿಎಸ್ ಎಕ್ಸಿಕ್ಯೂಟಿವ್ ತರಗತಿಗಳು ಜನವರಿ 15ರಿಂದ ಮಂಗಳೂರಿನಲ್ಲಿ ಆರಂಭವಾಗಲಿದೆ. ವೃತ್ತಿಪರ ಕೋರ್ಸ್ ಗಳಿಗೆ ವಿಷಯವಾಗಿ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವ ರೀತಿಯಲ್ಲಿ ತರಬೇತಿ ಆಯೋಜಿಸಿದೆ.
ತ್ರಿಶಾ ಸಂಸ್ಥೆಯು ಅಖಿಲ ಭಾರತ ಮಟ್ಟದಲ್ಲಿ ಸಿಎ ಫೌಂಡೇಶನ್ , ಸಿಎ ಇಂಟರ್ಮಿಡಿಯೇಟ್ , ಸಿಎ ಫೈನಲ್, ಸಿಎಸ್ಇಇಟಿ, ಸಿಎಸ್ ಎಕ್ಸಿಕ್ಯೂಟಿವ್ ವಿಭಾಗದಲ್ಲಿ ಅತ್ಯುತ್ತಮ ಫಲಿತಾಂಶವನ್ನು ಗಳಿಸಿಕೊಂಡಿದೆ.
ತರಗತಿಯ ವಿಶೇಷತೆಗಳು :
ಅಭ್ಯಾಸದ ನೂತನ ವಿಧಾನಗಳು, ಉಡುಪಿ, ಮಂಗಳೂರು, ಬೆಂಗಳೂರು, ಮುಂಬೈಯ ಪ್ರಸಿದ್ಧ ವಿಷಯ ತಜ್ಞರಿಂದ ತರಬೇತಿ, ಅಭ್ಯಾಸಕ್ಕೆ ಪೂರಕವಾಗುವ ಸ್ಟಡಿ ಮೆಟಿರಿಯಲ್ ಗಳು ವಿದ್ಯಾರ್ಥಿಗಳಿಗೆ ಲಭ್ಯವಾಗಲಿದೆ. ಪರೀಕ್ಷೆಗೆ ಪೂರಕವಾಗುವಂತೆ ಪ್ರಶ್ನೆ ಪತ್ರಿಕೆಗಳನ್ನು ಉತ್ತರಿಸುವ ವಿಧಾನಗಳನ್ನು ತಿಳಿಸಿಕೊಡಲಾಗುವುದು .ತರಬೇತಿಯ ಅಂತ್ಯದಲ್ಲಿ ರಿವಿಷನ್ ಕ್ಲಾಸಸ್ ಮತ್ತು ಮಾದರಿ ಸಿದ್ದತಾ ಪರೀಕ್ಷೆಗಳನ್ನು ಆಯೋಜಿಸಲಾಗುತ್ತದೆ.
ಆಸಕ್ತರು ತ್ರಿಶಾ ಕ್ಲಾಸಸ್, ವಿದ್ಯಾರ್ಥಿ ಗ್ರಾಮ, ಗಣೇಶ್ ಬಾಗ್ ಲೇಔಟ್, ಕೊಟ್ಟಾರ, ಮಂಗಳೂರಿಗೆ ಭೇಟಿ ನೀಡಬಹುದು ಎಂದು ಸಂಸ್ಥೆ ಪ್ರಕಟಣೆ ತಿಳಿಸಿದೆ.