Home » ಸಿಎ ಫೌಂಡೇಷನ್ ಮಾಹಿತಿ ಕಾರ್ಯಾಗಾರ
 

ಸಿಎ ಫೌಂಡೇಷನ್ ಮಾಹಿತಿ ಕಾರ್ಯಾಗಾರ

ತ್ರಿಶಾ ಕ್ಲಾಸಸ್

by Kundapur Xpress
Spread the love

ಉಡುಪಿ : ಕರಾವಳಿ ಭಾಗದಲ್ಲಿ ಸಿ ಎ, ಸಿ ಎಸ್ ಮುಂತಾದ ವೃತ್ತಿಪರ ಕೋರ್ಸ್ ಗಳಿಗೆ ಗುಣಮಟ್ಟದ ತರಬೇತಿಯನ್ನು ನೀಡುತ್ತಾ ಬಂದಿರುವ ತ್ರಿಶಾ ಕ್ಲಾಸಸ್‌ ವತಿಯಿಂದ  ಪ್ರಸ್ತುತ ಸಾಲಿನಲ್ಲಿರುವ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸಿಎ ಫೌಂಡೇಶನ್ ಉಚಿತ ಮಾಹಿತಿ ಕಾರ್ಯಗಾರವು ಮಾರ್ಚ್ 9 ರಂದು ಆನ್ ಲೈನ್ ಮುಖಾಂತರ ನಡೆಸಲಾಯಿತು. ತ್ರಿಶಾ ಕ್ಲಾಸಸ್ ಬೋಧಕರಾದ  ಸಿ ಎ ನಾಗೇಂದ್ರ ಭಕ್ತ ಅವರು, ವಿದ್ಯಾರ್ಥಿಗಳಿಗೆ ಸಿಎ ಕೋರ್ಸ್ ಮತ್ತು ಪರೀಕ್ಷಾ ಪೂರ್ವ ತಯಾರಿಯ ಬಗ್ಗೆ ಮಾಹಿತಿ ನೀಡಿದರು. ಸಂಸ್ಥೆಯ ಸಿಬ್ಬಂದಿ ವರ್ಗದವರು, 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸಿಎ ಫೌಂಡೇಶನ್ ಆನ್ಲೈನ್ ತರಬೇತಿಗೆ ಸೇರಲು ಆಸಕ್ತಿ ಇರುವ ವಿದ್ಯಾರ್ಥಿಗಳು ಮಾಹಿತಿಗೆ ಉಡುಪಿಯ ಕೋರ್ಟ್ ಮುಂಭಾಗದಲ್ಲಿರುವ ತ್ರಿಶಾ ಕ್ಲಾಸಸ್ ಕಛೇರಿ , ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜಿಗೆ ಅಥವಾ ಮಂಗಳೂರಿನ ಕೊಟ್ಟಾರದ ವಿದ್ಯಾರ್ಥಿ ಗ್ರಾಮದಲ್ಲಿರುವ ತ್ರಿಶಾ ಕ್ಲಾಸಸ್ ಗೆ ಭೇಟಿ ನೀಡಬಹುದು ಎಂದು ಸಂಸ್ಥೆ ಪ್ರಕಟಣೆ ತಿಳಿಸಿದೆ.

 

Related Articles

error: Content is protected !!