Home » ತ್ರಿಶಾ ವಿದ್ಯಾ ಕಾಲೇಜಿಗೆ ನಾಲ್ಕನೇ ಬಾರಿ ಸಮಗ್ರ ಚಾಂಪಿಯನ್ ಕಿರೀಟ
 

ತ್ರಿಶಾ ವಿದ್ಯಾ ಕಾಲೇಜಿಗೆ ನಾಲ್ಕನೇ ಬಾರಿ ಸಮಗ್ರ ಚಾಂಪಿಯನ್ ಕಿರೀಟ

by Kundapur Xpress
Spread the love

ಕಟಪಾಡಿ: ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜಿನ ವಿದ್ಯಾರ್ಥಿಗಳು ಮೂಡಬಿದ್ರೆಯ ಆಳ್ವಾಸ್ ಕಾಲೇಜಿನಲ್ಲಿ ನಡೆದ ‘ಕ್ಷಿತಿವಂಶ’ ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಸತತ ನಾಲ್ಕನೇ ವರ್ಷವೂ ಸಮಗ್ರ ಚಾಂಪಿಯನ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಡಾಕ್ಯುಮೆಂಟರಿ ವಿಭಾಗದಲ್ಲಿ ತರುಣ್ ಪ್ರಥಮ ,ಪೇಪರ್ ಪ್ರೆಸೆಂಟೇಶನ್‌ನಲ್ಲಿ ಓಂಕಾರ್ ವರ್ಣೇಕರ್ ಮತ್ತು ಶ್ರೇಷ್ಠ ದ್ವಿತೀಯ . ಬಾಟಲ್ ಪೈಂಟಿಂಗ್ ನಲ್ಲಿ ರಾಧಿಕಾ ಪ್ರಥಮ, ಸರ್ಪ್ರೈಸ್ ಈವೆಂಟ್‌ನಲ್ಲಿ ರಂಜನ್ ಪ್ರಥಮ, ಕನ್ನಡ ವಾದವಿವಾದ ಸ್ಪರ್ಧೆಯಲ್ಲಿ ನಾಗೇಂದ್ರ ಮತ್ತು ಮೀನಾಕ್ಷಿ ಪ್ರಥಮ, ಸ್ಟ್ಯಾಂಡ್ ಅಪ್ ಕಾಮಿಡಿಯಲ್ಲಿ ರಂಜನ್ ತೃತೀಯ ,
ಇಂಗ್ಲಿಷ್ ಚರ್ಚಾ ಸ್ಪರ್ಧೆ ದ್ವಿತಿ ಮತ್ತು ವೈದೇಹಿ ಪ್ರಥಮ ಟ್ರೆಶರ್ ಹಂಟ್‌ನಲ್ಲಿ ರಿತ್ವಿಕ್ ಮತ್ತು ವಿಟಲ್ ಮಲ್ಯ ಪ್ರಥಮ , ಸ್ಟ್ರೀಟ್ ಪ್ಲೇ ಹಾಗೂ ವರೈಟಿ ಸ್ಪರ್ಧೆಗಳಲ್ಲಿ ತ್ರಿಶಾ ವಿದ್ಯಾ ಕಾಲೇಜು ತಂಡ ಪ್ರಥಮ ಸ್ಥಾನ ಪಡೆದು ಮತ್ತೊಮ್ಮೆ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ.

ವಿದ್ಯಾರ್ಥಿಗಳ ಈ ಸಾಧನೆಯನ್ನು ತ್ರಿಶಾ ಸಮೂಹ ಸಂಸ್ಥೆಗಳ ಅಧ್ಯಕ್ಷರು, ಪ್ರಾಂಶುಪಾಲರು, ಸಿಬ್ಬಂದಿ ವರ್ಗ ಅಭಿನಂದಿಸಿದರು.

 

Related Articles

error: Content is protected !!