Home » ತ್ರಿಶಾ ಕಾಲೇಜ್ ವಾರ್ಷಿಕೋತ್ಸವ ಸಮಾರಂಭ
 

ತ್ರಿಶಾ ಕಾಲೇಜ್ ವಾರ್ಷಿಕೋತ್ಸವ ಸಮಾರಂಭ

by Kundapur Xpress
Spread the love

ಯುವ ಜನತೆ ವರ್ತಮಾನವನ್ನು ಮರೆಯಬಾರದು : ವಾಲ್ಟರ್ ನಂದಳಿಕೆ

ಮಂಗಳೂರು : ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ತ್ರಿಶಾ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೇಜ್ ಮೆಂಟ್ ಹಾಗೂ ತ್ರಿಶಾ ಸಂಜೆ ಕಾಲೇಜಿನ 2023-24 ನೇ ಸಾಲಿನ ವಾರ್ಷಿಕೋತ್ಸವವು ನಗರದ ಡಾನ್ ಬಾಸ್ಕೋ ಹಾಲ್ ನಲ್ಲಿ ನಡೆಯಿತ್ತು

ಮುಖ್ಯ ಅತಿಥಿಯಾಗಿ ದೈಜಿ ವರ್ಲ್ಡ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಮಂಗಳೂರು ಇದರ ಸಂಸ್ಥಾಪಕರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ವಾಲ್ಟರ್ ಡಿ `ಸೋಜಾ ನಂದಳಿಕೆಯವರು ಭಾಗವಹಿಸಿದರು. ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ”ಯುವ ಜನತೆ ತಮ್ಮ ಭೂತಕಾಲ ಮತ್ತು ಭವಿಷ್ಯದ ಚಿಂತೆಯಲ್ಲಿ ಮುಳಗದೆ ವರ್ತಮಾನವನ್ನು ಮರೆಯಬಾರದು. ವರ್ತಮಾನದ ಕಲಿಕೆ ಮತ್ತು ಅನುಭವ ನಮ್ಮ ಭವಿಷ್ಯವನ್ನು ನಿರ್ಧರಿಸುವುದು, ಸೋಲೆ ಗೆಲುವಿನ ಮೆಟ್ಟಿಲು ಎಂಬುದನ್ನು ಮರೆಯಬಾರದೆಂದು ತಿಳಿಸಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತ್ರಿಶಾ ಶೈಕ್ಷಣಿಕ ಸಮೂಹ ಸಂಸ್ಥೆಗಳ ಸಂಸ್ಥಾಪಕರು ಮತ್ತು ಕಾರ್ಯ ನಿರ್ವಹಣಾಧಿಕಾರಿಯಾದ ಸಿ. ಎ ಗೋಪಾಲ ಕೃಷ್ಣ ಭಟ್ ವಹಿಸಿದರು. ಇದೇ ಸಂದರ್ಭದಲ್ಲಿ ಅವರು “ಕರಾವಳಿ ಕರ್ನಾಟಕದ ಜಿಲ್ಲೆಗಳು ವಾಣಿಜ್ಯೋದ್ಯಮಕ್ಕೆ ಪ್ರಾಶಸ್ತವಾದ ಸ್ಥಳ. ಹಾಗಾಗಿ ಯುವ ಜನತೆ ಉದ್ಯೋಗಕ್ಕಾಗಿ ಹಂಬಲಿಸದೆ ವಾಣಿಜ್ಯೋದಮಿಗಳಾಗಿ ಬೆಳೆಯಬೇಕೆಂದು”ಆಶಿಸಿದರು. ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಲು ಧನಾತ್ಮಕ ಅಲೋಚನೆಗಳು ಬಹಳ ಮುಖ್ಯವೆಂದು ತಿಳಿಸಿದರು. ಗೌರವಾನ್ವಿತ ಅತಿಥಿಗಳಾಗಿ ತ್ರಿಶಾ ಶೈಕ್ಷಣಿಕ ಸಮೂಹ ಸಂಸ್ಥೆಗಳ ಶೈಕ್ಷಣಿಕ ಸಲಹೆಗಾರರಾದ ಡಾ.ನಾರಾಯಣ್ ಕಾಯರ್ ಕಟ್ಟೆ ಅವರು ಶೈಕ್ಷಣಿಕವಾಗಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಅಭಿನಂದಿಸಿದರು

ವೇದಿಕೆಯಲ್ಲಿ ತ್ರಿಶಾ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೇಜ್ ಮೆಂಟ್ ಪ್ರಾಂಶುಪಾಲರಾದ ಪ್ರೊII ಮಂಜುನಾಥ್ ಕಾಮತ್. ಎಂ , ತ್ರಿಶಾ ಸಂಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊII  ಸುಪ್ರಭಾ. ಎಂ, ತ್ರಿಶಾ ಕ್ಲಾಸಸ್ ನ ಮಂಗಳೂರು ಕೇಂದ್ರದ ಮುಖ್ಯಸ್ಥರಾದ ಶ್ರೀಮತಿ ಯಶಸ್ವಿನಿ ಯಶ್ ಪಾಲ್, ಕಾರ್ಯಕ್ರಮದ ಸಂಯೋಜಕರಾದ ಪ್ರೊII ಅನುಷ. ಟಿ , ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ವಿದ್ಯಾರ್ಥಿ ಸುಹಾಸ್ ಉಪಸ್ಥಿತರಿದ್ದರು.

2023 – 24 ನೇ ಸಾಲಿನ ವಾರ್ಷಿಕ ವರದಿಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊII ಮಂಜುನಾಥ್ ಕಾಮತ್.ಎಂ ವಾಚಿಸಿದರು. ತ್ರಿಶಾ ಕ್ಲಾಸ್‌ಸನ ವಾರ್ಷಿಕ ವರದಿಯನ್ನು ಶ್ರೀಮತಿ. ಯಶಸ್ವಿನಿ ಯಶ್ ಪಾಲ್ ವಾಚಿಸಿದರು. ಕಾರ್ಯಕ್ರಮದ ಸಂಯೋಜಕರಾದ ಪ್ರೊII ಅನುಷ. ಟಿ ಸ್ವಾಗತಿಸಿದರು. ವಿದ್ಯಾರ್ಥಿ ಸುಹಾಸ್ ವಂದಿಸಿದರು. ಇದೇ ಸಂದರ್ಭದಲ್ಲಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗೆಯಲ್ಲಿ ವಿಶಿಷ್ಠ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಮತ್ತು ಪಾರಿತೋಷಕವನ್ನು ನೀಡಿ ಗೌರವಿಸಲಾಯಿತ್ತು. ಸಭಾ ಕಾರ್ಯಕ್ರಮದ ನಂತರ ಕಾಲೇಜಿನ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಂದ ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಬಿ.ಕಾಂ ವಿದ್ಯಾರ್ಥಿಗಳಾದ ಮೇಘನಾ ಮತ್ತು ಸೋಹನ್ ರಾವ್ ಸಭಾ ಕಾರ್ಯಕ್ರಮವನ್ನು ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಂಹಿತಾ, ಸಿಮೋನ್ ಮತ್ತು ಕಾರ್ತಿಕೇಯ  ನಿರೂಪಿಸಿದರು

   

Related Articles

error: Content is protected !!