Home » ತ್ರಿಶಾ ವಿದ್ಯಾ ಪಿ ಯು ಕಾಲೇಜು: ವಾರ್ಷಿಕ ಕ್ರೀಡಾಕೂಟ
 

ತ್ರಿಶಾ ವಿದ್ಯಾ ಪಿ ಯು ಕಾಲೇಜು: ವಾರ್ಷಿಕ ಕ್ರೀಡಾಕೂಟ

by Kundapur Xpress
Spread the love

 ಉಡುಪಿ :ಕಟಪಾಡಿಯ ತ್ರಿಶಾ ವಿದ್ಯಾ ಪಿ ಯು ಕಾಲೇಜಿನ ವಾರ್ಷಿಕ ಕ್ರೀಡಾಕೂಟವು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣ ಅಜ್ಜರಕಾಡು, ಉಡುಪಿ ಮೈದಾನದಲ್ಲಿ ಶನಿವಾರ ನಡೆಯಿತು.
ಶ್ರೀಯುತ ಅಶ್ವಿನ್ ಸನಿಲ್ ಕುರ್ಕಾಲು ಧ್ವಜಾರೋಹಣ ನೆರವೇರಿಸಿ,, ಸೋಲನ್ನು ಜಯಿಸಿ ಸಾಧನೆ ಮಾಡಿದ ನನ್ನ ಅನುಭವದಂತೆ, ಪ್ರತಿಯೊಬ್ಬ ವಿದ್ಯಾರ್ಥಿಯೂ ಶ್ರಮ ಮತ್ತು ದೃಢಸಂಕಲ್ಪದ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾಧ್ಯ’ ಎಂದು ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು.
ಸಿದ್ದಾಂತ್ ಫೌಂಡೇಶನ್ ಟ್ರಸ್ಟಿ ನಮಿತಾ ಜಿ. ಭಟ್, ಅಧ್ಯಕ್ಷತೆ ವಹಿಸಿದ್ದರು. ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು
ತ್ರಿಶಾ ವಿದ್ಯಾ ಪಿ ಯು ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು, ಕ್ರೀಡಾ ಕಾರ್ಯದರ್ಶಿಗಳು ಉಪಸ್ಥಿತರಿದ್ದರು. ಉಪನ್ಯಾಸಕಿಯರಾದ ವರ್ಷ ನಿರೂಪಿಸಿ, ಸರಿತಾ ವಂದಿಸಿದರು.

 

Related Articles

error: Content is protected !!