Home » ಪಿಯುಸಿ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಉಚಿತ ಸ್ಕಾಲರ್ ಶಿಪ್ ಪರೀಕ್ಷೆ
 

ಪಿಯುಸಿ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಉಚಿತ ಸ್ಕಾಲರ್ ಶಿಪ್ ಪರೀಕ್ಷೆ

 ಡಿ.11 ರಂದು ತ್ರಿಶಾ ಸ್ಕಾಲರ್ ಶಿಪ್ ಪರೀಕ್ಷೆ

by Kundapur Xpress
Spread the love

ಕಟಪಾಡಿ : ಶಿಕ್ಷಣದ ಜೊತೆಗೆ ನೈತಿಕ ಮೌಲ್ಯಗಳಿಗೂ ಒತ್ತು ನೀಡುತ್ತಾ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಬಂದಿರುವ ತ್ರಿಶಾ ಸಂಸ್ಥೆಯ ವತಿಯಿಂದ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ  ವಿದ್ಯಾರ್ಥಿಗಳಿಗೆ “ತ್ರಿಶಾ ಸ್ಕಾಲರ್ ಶಿಪ್ ಪರೀಕ್ಷೆ(TST) ಉಚಿತವಾಗಿ ಆನ್ಲೈನ್  ಮೂಲಕ  ಡಿಸೆಂಬರ್ 11 ರಂದು ಸಂಜೆ 7 ಗಂಟೆಗೆ  ನಡೆಯಲಿದೆ.

ಸ್ಪರ್ಧಾತ್ಮಕ ಪರೀಕ್ಷೆಯ ಅನುಭವ ಪಡೆಯಲು ಬಯಸುವ ವಾಣಿಜ್ಯ  ವಿಭಾಗದಲ್ಲಿ ಪ್ರಸ್ತುತ ಪ್ರಥಮ ಹಾಗೂ ದ್ವಿತೀಯ ಪಿಯುಸಿಯಲ್ಲಿರುವ ಆಸಕ್ತ ವಿದ್ಯಾರ್ಥಿಗಳು ಈ ಪರೀಕ್ಷೆಯನ್ನು ಬರೆಯಬಹುದು.

ಈ ಪರೀಕ್ಷೆಯು ಬಹು ಆಯ್ಕೆಯ ಮಾದರಿಯಲ್ಲಿದ್ದು ಅಕೌಂಟೆನ್ಸಿ, ಬಿಸಿನೆಸ್ ಸಂಬಂಧಿತ ಸಾಮಾನ್ಯ ಜ್ಞಾನ ಮತ್ತು ಮೂಲ ಗಣಿತ , ಲಾಜಿಕಲ್ ರೀಸನಿಂಗ್  ಹಾಗೂ ಇಂಗ್ಲೀಷ್ ಭಾಷಾ ಕೌಶಲದ ವಿಷಯಗಳ ಮೇಲೆ ನಡೆಯಲಿದೆ.

ಪ್ರತಿ ಒಂದು ಅಂಕಗಳಿಗೆ 500 ರೂಪಾಯಿ ವಿದ್ಯಾರ್ಥಿವೇತನ

ಈ ಬಾರಿ ತ್ರಿಶಾ ಸಂಸ್ಥೆಯು ವಿನೂತನ ಮಾದರಿಯಲ್ಲಿ ಪರೀಕ್ಷೆಯನ್ನು ಆಯೋಜಿಸಿದ್ದು  ವಿದ್ಯಾರ್ಥಿಗಳು ಗಳಿಸುವ ಪ್ರತಿಯೊಂದು ಅಂಕಗಳಿಗೆ 500 ರೂಪಾಯಿ ಶುಲ್ಕ ವಿನಾಯಿತಿಯನ್ನು ಪಡೆಯಬಹುದಾಗಿದೆ.  ಈ ಸದಾವಕಾಶ ಡಿಸೆಂಬರ್ 30ರ ಒಳಗೆ ದಾಖಲಾತಿಯನ್ನು ಪಡೆಯುವ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಸಂಸ್ಥೆ ಪ್ರಕಟಣೆ ತಿಳಿಸಿದೆ.

ಪರೀಕ್ಷೆಯಲ್ಲಿ ಭಾಗವಹಿಸಲು ಇಚ್ಛಿಸುವ ಆಸಕ್ತ ವಿದ್ಯಾರ್ಥಿಗಳು https://tinyurl.com/trishascholarshiptest ಈ ಲಿಂಕ್ ನ ಮೂಲಕ ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಉಡುಪಿಯ ಕೋರ್ಟ್ ಮುಂಭಾಗದಲ್ಲಿರುವ ತ್ರಿಶಾ ಕ್ಲಾಸಸ್ ಕಛೇರಿ ಅಥವಾ ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜು ಮತ್ತು ತ್ರಿಶಾ ಕ್ಲಾಸಸ್, ವಿದ್ಯಾರ್ಥಿ ಗ್ರಾಮ, ಗಣೇಶ್ ಬಾಗ್ ಲೇಔಟ್, ಕೊಟ್ಟಾರ, ಮಂಗಳೂರಿಗೆ ಭೇಟಿ ನೀಡಬಹುದು.

ಪ್ರಯೋಜನಗಳು :

  • ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಅರಿವು
  • ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ವಿಮರ್ಶಾತ್ಮಕ ಚಿಂತನೆ, ತಾರ್ಕಿಕತೆ ಹೆಚ್ಚಿಸಲು ಸಹಾಯ ಮಾಡುತ್ತದೆ
  • ಆಕರ್ಷಕ ವಿದ್ಯಾರ್ಥಿವೇತನ
 

Related Articles

error: Content is protected !!