ಕುಂದಾಪುರ : ಸಾಮಾನ್ಯವಾಗಿ ಎಲ್ಲಾ ವಿದ್ಯಾರ್ಥಿಗಳಲ್ಲಿ ಅಡಗಿರುವ ಒಂದು ಬಹು ಮುಖ್ಯ ಅಂಶವೆಂದರೆ ಸಂದರ್ಭಗಳಿಗೆ ತಕ್ಷಣ ಸ್ಪಂದಿಸದೆ ಇರುವುದು. ಹಾಗಾಗಿ ನಿಮ್ಮ ಜೀವನದಲ್ಲಿ ಅದೆಷ್ಟೋ ಅವಕಾಶಗಳು ಕೈಜಾರಿ ಹೋಗಿರುತ್ತದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಪ್ರತಿ ಅವಕಾಶವನ್ನು ಬಳಸಿಕೊಂಡು ಉತ್ತಮ ನಾಯಕನಾಗುವ ದಿಸೆಯಲ್ಲಿ ಕಾರ್ಯಪ್ರವೃತ್ತರಾಬೇಕು” ಎಂದು ಡಾ. ರಾಬರ್ಟ ಕ್ಲೈವ್ ನುಡಿದರು ಇವರು ಕಾಳಾವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಕುಂದಾಪುರ ಇಲ್ಲಿ ವಿದ್ಯಾರ್ಥಿ ವೇದಿಕೆಯ ಸದಸ್ಯರುಗಳಿಗೆ ನಡೆದ ನಾಯಕತ್ವ ತರಬೇತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಜೇಂದ್ರ ಎಸ್. ನಾಯಕ್ ವಹಿಸಿದ್ದರು .ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಮಣಿ ಎಂ. ಎನ್ ಅಂತಿಮ ಬಿ. ಎಸ್ಸಿ ಇವರು ವಂದಿಸಿದರು. ಪವಿತ್ರ ಅಂತಿಮ ಬಿ ಕಾಂ. ಕಾರ್ಯಕ್ರಮ ನಿರ್ವಹಿಸಿದರು.ಪವಿತ್ರರವರು ನಿರೂಪಿಸಿದ ಕಾರ್ಯಕ್ರಮದಲ್ಲಿ ರಾಮರಾಯ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು ಚರಿತ ಮತ್ತು ಅನೂಷ ಪ್ರಾರ್ಥಿಸಿ ಮಣಿ ಎಂ. ಎನ್ ವಂದಿಸಿದರು