ಮೂಡ್ಲಕಟ್ಟೆ : ವಿದ್ಯಾ ಅಕಾಡೆಮಿ ಮೂಡ್ಲಕಟ್ಟೆಯಲ್ಲಿ ಶಾಲಾ ವಾರ್ಷಿಕೋತ್ಸವ ಬಹಳ ವಿಜ್ರಂಭಣೆಯಿಂದ ಜರುಗಿತು. ಶ್ರೀಮತಿ ಪೂರ್ಣಿಮಾ ಭಟ್ ಕಮಲಶಿಲೆ ಇವರು ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿ ಒಂದು ಶಾಲೆಯು ಯಶಸ್ಸು ಕಾಣಬೇಕಾದರೆ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಪೋಷಕರಲ್ಲಿ ಹೊಂದಾಣಿಕೆ ಇರಬೇಕು ಎಂದರು. ಮಕ್ಕಳನ್ನು ಸ್ವಾವಲಂಬಿಗಳಾಗಲು ಹುರಿದುಂಬಿಸಬೇಕು. ಶಿಕ್ಷಕರಾದವರು ಕ್ಲಿಷ್ಟಕರವಾದದನ್ನು ಮಕ್ಕಳಿಗೆ ಸರಳೀಕರಿಸಿ ಹೇಳುವ ಸಾಮರ್ಥ್ಯವನ್ನು ಪಡೆದಿರಬೇಕು ಹಾಗೂ ನಿಷ್ಪಕ್ಷಪಾತಿಗಳಾಗಿರಬೇಕು ಎಂದರು. ಮಕ್ಕಳನ್ನು ಬೆಳೆಸುವುದರ ಬಗ್ಗೆ ಪೋಷಕರಿಗೆ ಕಿವಿ ಮಾತುಗಳನ್ನು ಹೇಳಿದರು. ನಂತರ ಮುಂದಿನ ಶೈಕ್ಷಣಿಕ ವರ್ಷಕ್ಕೆ ಮಕ್ಕಳ ಪದೋನ್ನತಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು
ಶಾಲೆಯ ಶಿಕ್ಷಕಿಯಾದ ಶ್ರೀಮತಿ ಸಂಗೀತರವರು ಕಾರ್ಯಕ್ರಮದ ನಿರೂಪಿಸಿ ಶಿಕ್ಷಕಿ ಶ್ರೀಮತಿ ಸೋಫಿಯಾ ಅವರು ಸ್ವಾಗತಿಸಿದರು. ಶಾಲೆಯ ಆಡಳಿತ ನಿರ್ವಾಹಕಿಯಾದ ಶ್ರೀಮತಿ ಪಾವನ ಮಹೇಶ್ ಅವರು ವಾರ್ಷಿಕ ವರದಿಯನ್ನು ವಾಚಿಸಿದರು. ಶಿಕ್ಷಕಿ ಶ್ರೀಮತಿ ರಷ್ಮಾ ಶೆಟ್ಟಿಯವರು ಧನ್ಯವಾದ ಸಮರ್ಪಿಸಿದರು. ನಂತರ ಮಕ್ಕಳ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮದಲ್ಲಿ ಐಎಂಜೆಐಎಸ್ಸಿ ಯ ಪ್ರಾಂಶುಪಾಲೆಯಾದ ಡಾಕ್ಟರ್ ಪ್ರತಿಭಾ ಎಂ ಪಟೇಲ್, ಶಾಲೆಯ ಶಿಕ್ಷಕರೂ ವಿದ್ಯಾರ್ಥಿಗಳು ಪೋಷಕರು ಹಾಗೂ ಎಲ್ಲಾ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು