ತೆಕ್ಕಟ್ಟೆ: ವಿಶ್ವ ವಿನಾಯಕ ಸಿ.ಬಿ.ಎಸ್.ಇ ಸ್ಕೂಲ್ ತೆಕ್ಕಟ್ಟೆಯಲ್ಲಿ ಪೋಷಕರ ಸಭೆಯನ್ನು ಆಯೋಜಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಜೂನಿಯರ್ ಕಾಲೇಜು ಕುಂದಾಪುರದ ಕನ್ನಡ ಪ್ರಾಧ್ಯಾಪಕರಾದ ಕಾಳಾವರ ಉದಯ ಕುಮಾರ ಶೆಟ್ಟಿಯವರು ಮಾತನಾಡಿ ವಿದ್ಯಾರ್ಥಿಗಳ ಜೀವನದಲ್ಲಿ ಪೋಷಕರು, ಶಿಕ್ಷಕರು ಹಾಗೂ ಸಮಾಜದ ಪಾತ್ರದ ಕುರಿತು ತಿಳಿಸಿದರು. ಮಗುವಿನ ಮುಗ್ಧ ಮನಸ್ಸಿನ ಮೇಲೆ ಶಿಕ್ಷಕರ ಹಾಗೂ ಹೆತ್ತವರ ಮಾತುಗಳು ಯಾವ ರೀತಿಯಲ್ಲಿ ಪರಿಣಾಮವನ್ನು ಉಂಟುಮಾಡುತ್ತದೆ ಎಂದು ವಿವಿಧ ನೈಜ ಘಟನೆಗಳೊಂದಿಗೆ ವಿವರಿಸಿದರು. ಮಗುವಿನ ಸೂಕ್ಷ್ಮ ಮನಸ್ಸನ್ನು ಶಿಕ್ಷಕರು ಹಾಗೂ ಪೋಷಕರು ಅರ್ಥೈಸಿಕೊಳ್ಳುವಲ್ಲಿ ಸಮರ್ಥರಾಗಬೇಕೆಂದು ಹೇಳಿದರು. ಮಕ್ಕಳಿಗೆ ಬಾಲ್ಯಾವಸ್ಥೆಯಿಂದಲೇ ಸಂಸ್ಕಾರಯುತ ಶಿಕ್ಷಣವನ್ನು ನೀಡುವ ಜವಾಬ್ದಾರಿ ಪೋಷಕರು ಹಾಗೂ ಶಿಕ್ಷಕರದ್ದಾಗಿದೆ ಎಂದು ತಿಳಿಸಿದರು.
ಶಾಲಾ ಪ್ರಾಂಶುಪಾಲರಾದ ಶ್ರೀ ನಿತಿನ್ ಡಿ’ ಆಲ್ಮೇಡಾರವರು ಶಾಲಾ ಶೈಕ್ಷಣಿಕ ಕಾರ್ಯ ಯೋಜನೆಗಳ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಶಾಲಾ ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀ ಎಮ್. ಪ್ರಭಾಕರ ಶೆಟ್ಟಿ, ಪೋಷಕರು, ಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಿಕ್ಷಕ ಪೋಷಕರ ಸಂವಾದಕ್ಕೆ ಅವಕಾಶ ಮಾಡಿ ಕೊಡಲಾಯಿತು ಶಿಕ್ಷಕಿಯರಾದ ಪ್ರಜ್ಞಾ ಕಾಮತ್ ಕಾರ್ಯಕ್ರಮ ನಿರೂಪಿಸಿದರು ಜೆನಿಷಾ ಕ್ರಾಸ್ಟೊ ಪರಿಚಯಿಸಿ ಸ್ವಾಗತಿಸಿದರು ಹಾಗೂ ಕೋಮಲರವರು ವಂದಿಸಿದರು