ತೆಕ್ಕಟ್ಟೆ: ವಿಶ್ವ ವಿನಾಯಕ ಸಿ.ಬಿ.ಎಸ್.ಇ ಸ್ಕೂಲ್ ತೆಕ್ಕಟ್ಟೆಯಲ್ಲಿ ಪೂರ್ವ ಪ್ರಾಥಮಿಕ ಪೋಷಕರ ಸಭೆಯನ್ನು ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಅಕಾಡೆಮಿಕ್ ಡೈರೆಕ್ಟರ್ ದಿವಾಕರ ಶೆಟ್ಟಿ ಹೆಚ್. ಮಾತನಾಡಿ ಬಾಲ್ಯಾವಸ್ಥೆಯ ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಹಾಗೂ ಶಿಕ್ಷಕಕರ ಪಾತ್ರ ಮಹತ್ತರವಾಗಿರುತ್ತದೆ ಎಂದು ತಿಳಿಸಿದರು
ಮೊಬೈಲ್ ಹಾಗೂ ಟಿವಿ ಮಾದ್ಯಮಗಳ ಗೀಳು ಚಿಕ್ಕ ಮಕ್ಕಳ ಮಾನಸಿಕ ಬೆಳವಣಿಗೆಯ ಮೇಲೆ ಕೆಟ್ಟ ಪರಿಣಾಮ ಬೀರುವುದನ್ನು ತಪ್ಪಿಸಲು ಪೋಷಕರು ಜಾಗೃತರಾಗಿರಬೇಕೆಂದು ತಿಳಿ ಹೇಳಿದ ಅವರು ಮಗುವಿನ ಸೂಕ್ಷ್ಮ ಮನಸ್ಸನ್ನು ಶಿಕ್ಷಕರು ಹಾಗೂ ಪೋಷಕರು ಅರ್ಥೈಸಿಕೊಳ್ಳುವಲ್ಲಿ ಸಮರ್ಥರಾಗಬೇಕೆಂದು ನುಡಿದರು ಮಕ್ಕಳಿಗೆ ಬಾಲ್ಯಾವಸ್ಥೆಯಿಂದಲೇ ಸಂಸ್ಕಾರಯುತ ಶಿಕ್ಷಣವನ್ನು ನೀಡುವ ಜವಾಬ್ದಾರಿ ಪೋಷಕರು ಹಾಗೂ ಶಿಕ್ಷಕರದ್ದಾಗಿದೆ ಎಂದರು
ಶಾಲಾ ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀ ಎಮ್. ಪ್ರಭಾಕರ ಶೆಟ್ಟಿಯವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಶಾಲಾ ಪ್ರಾಂಶುಪಾಲರಾದ ಶ್ರೀ ನಿತಿನ್ ಡಿ’ ಆಲ್ಮೇಡಾರವರು ಶಾಲಾ ಶೈಕ್ಷಣಿಕ ಕಾರ್ಯ ಯೋಜನೆಗಳ ಮಾಹಿತಿಯನ್ನು ನೀಡಿದರು., ಪೋಷಕರು, ಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಶಿಕ್ಷಕ ಪೋಷಕರ ಸಂವಾದಕ್ಕೆ ಅವಕಾಶ ಮಾಡಿ ಕೊಡಲಾಯಿತು. ಶಿಕ್ಷಕಿಯರಾದ ನಾಗರತ್ನ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು, ರವೀಂದ್ರ ಕೆ. ಪರಿಚಯಿಸಿ ಸ್ವಾಗತಿಸಿದರು, ಹಾಗೂ ಸುಷ್ಮಾ ಆರ್.ರವರು ವಂದಿಸಿದರು

oplus_2

