ತೆಕ್ಕಟ್ಟೆ: ವಿಶ್ವ ವಿನಾಯಕ ಸಿ.ಬಿ.ಎಸ್.ಇ ಸ್ಕೂಲ್ ತೆಕ್ಕಟ್ಟೆಯಲ್ಲಿ ವಿದ್ಯಾರ್ಥಿ ಸಂಸತ್ತಿನ ರಚನೆಯನ್ನು ಮಾಡಿ ಪದಗ್ರಹಣ ಕಾರ್ಯಕ್ರಮವನ್ನು ಆಯೋಜಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಶಾರದಾ ಕಾಲೇಜು ಬಸ್ರೂರು ಇದರ ನಿವೃತ್ತ ಪ್ರಾದ್ಯಾಪಕ ರೊಟೇರಿಯನ್ ಹೆಚ್. ಜಗದೀಶ್‍ರವರು ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿ ಪದಗ್ರಹಣವನ್ನು ನೆರವೇರಿಸಿದರು
ವಿಧ್ಯಾರ್ಥಿ ನಾಯಕರನ್ನು ಅಭಿನಂದಿಸಿ ಉತ್ತಮ ನಾಯಕತ್ವವನ್ನು ನಡೆಸಲು ಶಿಸ್ತು ಪಾಲನೆ ಬಹುಮುಖ್ಯ ಅಂಶವೆಂದು ತಿಳಿಸಿದರು. ಉತ್ತಮ ನಾಯಕನಲ್ಲಿ ಜೀವನ ಮೌಲ್ಯಗಳು, ಮಾನವೀಯ ಮೌಲ್ಯಗಳು ಹೊಂದಿದ್ದು ಇತರರನ್ನು ಅರಿತುಕೊಂಡು ಮುನ್ನಡೆಯುವ ಮನೋಭಾವನೆ ಇರಬೇಕೆಂದು ತಿಳಿಸಿದರು. ಗುರು ಹಿರಿಯರಿಗೆ, ತಂದೆ ತಾಯಿಗಳಿಗೆ ವಿಧೇಯರಾಗಿದ್ದು ಅವರ ಮಾರ್ಗದರ್ಶನದಲ್ಲಿ ಮುನ್ನಡೆದರೆ ಜೀವನದಲ್ಲಿ ಯಶಸ್ಸು ಗಳಿಸಬಹುದೆಂದು ತಿಳಿಸಿದರು. ಪ್ರತಿಯೊಂದು ಸೋಲು ಗೆಲುವುಗಳಿಂದ ಪಾಠವನ್ನು ಕಲಿತು ಬದುಕನ್ನು ಮುನ್ನಡೆಸಿಕೊಂಡು ಹೋಗುವವನೇ ನಿಜವಾದ ನಾಯಕನಾಗಲು ಅರ್ಹ ಎಂದು ತಿಳಿಸಿದರು. ಇತರರನ್ನು ಮುನ್ನಡೆಸಿ ಮುನ್ನಡೆಯುವುದೇ ನಾಯಕತ್ವ ಎಂದು ತಿಳಿಸಿದರು. ಪ್ರತೀಯೊಬ್ಬರಿಗೂ ಈ ದೇಶದ ಸಂವಿಧಾನ ಹಾಗೂ ಕಾನೂನಾತ್ಮಕ ಅರಿವು ಮೂಡಿಸಬೇಕು ಎಂದು ತಿಳಿಸಿದರು
ಶಾಲಾ ಅಕಾಡಮಿಕ್ ಡೈರೆಕ್ಟರ್ ದಿವಾಕರ ಶೆಟ್ಟಿ ಹೆಚ್‍ರವರು ಮಾತನಾಡಿ ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವನೆ ಇರಬೇಕು, ಸ್ಪರ್ಧೆಯಲ್ಲಿ ಸೋಲು ಗೆಲುವು ಸಹಜ ಇದನ್ನು ಸಮಾನ ಮನಸ್ಸಿನಿಂದ ಸ್ವೀಕರಿಸಿ ಮುನ್ನಡೆಯಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲಾ ಮ್ಯಾನೇಜಿಂಗ್ ಡೈರೆಕ್ಟರ್ ಎಮ್. ಪ್ರಭಾಕರ ಶೆಟ್ಟಿಯವರು ಮಾತನಾಡಿ ನಾಯಕರಾದವರು ಇತರರಿಗೆ ಸ್ಪೂರ್ತಿದಾಯಕವಾಗಬೇಕು ಎಂದು ತಿಳಿಸಿದರು. ವಿದ್ಯಾರ್ಥಿಯ ಜೀವನದಲ್ಲಿ ಶಿಸ್ತನ್ನು ಕಲಿಯಲು ಮೊದಲು ಕುಟುಂಬ ನಂತರ ಶಾಲೆ ಹಾಗೂ ಸಮಾಜದ ಪಾತ್ರ ಬಹಳ ಮುಖ್ಯವಾಗಿದೆ ಎಂದು ತಿಳಿಸಿದರು
ಶಾಲಾ ವಿದ್ಯಾರ್ಥಿನಾಯಕಿಯಾಗಿ ಕೀರ್ತನಾ ಶೆಟ್ಟಿ ಹಾಗೂ ಉಪನಾಯಕಿಯಾಗಿ ಹರ್ಷಿಣಿ ಆಯ್ಕೆಯಾದರು. ವಿದ್ಯಾರ್ಥಿಗಳಾದ ಸ್ನೇಹ ಸ್ವಾಗತಿಸಿದರು, ಹಂಸವಿ ಕಾರ್ಯಕ್ರಮ ನಿರೂಪಿಸಿದರು, ದೀಪ್ತಿ ವಂದಿಸಿದರು, ಶಿಕ್ಷಕರಾದ ಪ್ರಜ್ಞಾ ಕಾಮತ್ ಹಾಗೂ ರವೀಂದ್ರ ಕೆ. ರವರು ಕಾರ್ಯಕ್ರಮ ಸಂಘಟಿಸಿದರು.