ತೆಕ್ಕಟ್ಟೆ : ತೆಕ್ಕಟ್ಟೆ ವಿಶ್ವ ವಿನಾಯಕ ಸಿಬಿಎಸ್‌ಇ ಸ್ಕೂಲ್‌ನ ಪ್ರೌಢಶಾಲಾ ವಿದ್ಯಾರ್ಥಿಗಳು ಶಾಲಾ ಪ್ರವಾಸ ಕೈಗೊಂಡರು ಉಡುಪಿ, ಮಣಿಪಾಲ ಸುತ್ತಲಿನ ಐತಿಹಾಸಿಕ ಸ್ಥಳಗಳಾದ ಬಾರ್ಕೂರು ಕತ್ತಲೆ ಬಸದಿ, ಸೂರಾಲು ಅರಮನೆ, ಹೆರಿಟೇಜ್ ವಿಲೇಜ್ ಮಣಿಪಾಲ ಯೂನಿಯನ್ ಬ್ಯಾಂಕ್‌ನ ನಾಣ್ಯ ಹಾಗೂ ನೋಟುಗಳ ವಸ್ತು ಸಂಗ್ರಹಾಲಯ ಹಾಗೂ ಮಣಿಪಾಲದ ಮುದ್ರಣಾಲಯಕ್ಕೆ ಭೇಟಿ ನೀಡಿದರು. ಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿಯವರು ವಿದ್ಯಾರ್ಥಿಗಳಿಗೆ ಈ ಸ್ಥಳಗಳ ಶೈಕ್ಷಣಿಕ ಮಹತ್ವವನ್ನು ವಿವರಿಸಿದರು