ಕುಂದಾಪುರ : ಕುಂದಾಪುರ ತಾಲೂಕಿನ ತೆಕ್ಕಟ್ಟೆ ಗ್ರಾಮದ ಜನಪ್ರಿಯ ವಿದ್ಯಾಸಂಸ್ಥೆಯಾದ ವಿಶ್ವವಿನಾಯಕ ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆ ತೆಕ್ಕಟ್ಟೆಯಲ್ಲಿ 2025-26 ನೇ ಸಾಲಿನ ದಾಖಲಾತಿ ಪ್ರಕ್ರಿಯೆ ಪ್ರಾರಂಭವಾಗಿದೆ. ಈ ವಿದ್ಯಾಸಂಸ್ಥೆಯು ಪ್ರಶಾಂತ ವಾತಾವರಣದ ಪ್ರಕೃತಿಯ ಮಡಿಲಿನಿಂದ ಮೈದಳೆದು ನಿಂತಿದೆ ವಿದ್ಯಾಸಂಸ್ಥೆಯು ನರ್ಸರಿ ಎಲ್.ಕೆ.ಜಿ., ಯು.ಕೆ.ಜಿ., ಪ್ರಾಥಮಿಕ ಮತ್ತು ಪ್ರೌಢಶಾಲಾವರೆಗಿನ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವಲ್ಲಿ ಯಶಸ್ವಿಯಾಗಿದೆ
ವಿಶಾಲವಾದ ಶಾಲಾ ಕೊಠಡಿಗಳು ಮಕ್ಕಳ ಮನಸ್ಸನ್ನರಳಿಸುವ ವಿಶಾಲವಾದ ಸುಸಜ್ಜಿತ ಆಟದ ಮೈದಾನ, ನೂತನ ತಂತ್ರಜ್ಞಾನಗಳಿಂದ ತರಬೇತಿ ಪಡೆದ ಶಿಕ್ಷಕರ ತಂಡ ಮತ್ತು ಶೈಕ್ಷಣಿಕ ಅಭಿವೃದ್ಧಿ ಸಾಧಿಸುವಲ್ಲಿ ಅಚ್ಚುಕಟ್ಟಾದ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳು, ವಿದ್ಯಾರ್ಥಿಗಳ ಸುರಕ್ಷತಾ ದೃಷ್ಟಿಯಿಂದ ಆಧುನಿಕ ತಂತ್ರಜ್ಞಾನದ ವ್ಯವಸ್ಥೆಯಾದ ಸಿ.ಸಿ ಕ್ಯಾಮೆರಾದ ವ್ಯವಸ್ಥೆಯನ್ನು ಹೊಂದಿದ್ದು ಪರಿಣಾಮಕಾರಿ ಬೋಧನೆಗಾಗಿ ಟಿವಿ ಹಾಗೂ ಪ್ರೊಜೆಕ್ಟರ್ ನಂತಹ ಉಪಕರಣಗಳನ್ನು ಅಳವಡಿಸಲಾಗಿದೆ
ಪಠ್ಯ ಚಟುವಟಿಕೆಯ ಜೊತೆ ಜೊತೆಯಲ್ಲಿ ಪಠ್ಯೇತರ ಚಟುವಟಿಕೆಗಾಗಿ ಆಟದ ಪರಿಕರಗಳು, ಮಕ್ಕಳ ಉದ್ಯಾನವನ, ವರ್ಣ ರಂಜಿತವಾಗಿ ಆಕರ್ಷಿಸಲ್ಪಡುವ ಕಿಂಡರ್ ಗಾರ್ಟನ್ ತರಗತಿ ಕೊಠಡಿಗಳು ಸುಸಜ್ಜಿತವಾದ ಆಸನ ವ್ಯವಸ್ಥೆ, ಫುಟ್ಬಾಲ್, ವಾಲಿಬಾಲ್, ಕ್ರಿಕೆಟ್, ತ್ರೋಬಾಲ್, ಬಾಸ್ಕೆಟ್ ಬಾಲ್, ಖೋ-ಖೋ, ಕಬಡ್ಡಿ ಅಂಕಣವನ್ನು ಹೊಂದಿದ್ದು ಬೌದ್ಧಿಕ ವಿಕಸನದ ಜೊತೆಗೆ ಶಾರೀರಿಕ ಮತ್ತು ಮಾನಸಿಕ ವಿಕಸನಕ್ಕೂ ಉತ್ತೇಜನ ನೀಡಲಾಗುತ್ತದೆ
ವಿದ್ಯಾರ್ಥಿಗಳ ಸೃಜನಶೀಲತೆ ಕ್ರಿಯಾಶೀಲತೆಯನ್ನು ಪ್ರೋತ್ಸಾಹಿಸಲು ಅಟಲ್ ಟಿಂಕರಿಂಗ್ ಲ್ಯಾಬ್, ನುರಿತ ತರಬೇತುದಾರರಿಂದ ಕೋಡಿಂಗ್ ತರಬೇತಿಯನ್ನು ನೀಡಲಾಗುತ್ತಿದೆ. ಇದರೊಂದಿಗೆ ಅಬಾಕಸ್ ಶಿಕ್ಷಣದ ವ್ಯವಸ್ಥೆಯನ್ನು ತರಬೇತಿಯನ್ನು ನೀಡಲಾಗುತ್ತದೆ.
ಸಾಂಸ್ಕೃತಿಕ ಕ್ಷೇತ್ರದಲ್ಲಿ ಉಚಿತ ಸಂಗೀತ ತರಬೇತಿ, ಯಕ್ಷಗಾನ, ಜಾನಪದ ಶೈಲಿಯ ನೃತ್ಯಗಳು, ಚಿತ್ರಕಲೆ, ಕರಕುಶಲ ತರಬೇತಿಗಳನ್ನು ನೀಡಲಾಗುತ್ತಿದೆ.
ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಕಲಿಕಾ ಪ್ರಗತಿಗಾಗಿ ಪರಿಹಾರ ಬೋಧನಾ ತರಗತಿಗಳು, ನೈದಾನಿಕ ಪರೀಕ್ಷೆ, ನಿರಂತರ ಮೌಲ್ಯಮಾಪನಗಳನ್ನು ಕೈಗೊಳ್ಳಲಾಗುತ್ತಿದೆ. ವಿಶಾಲವಾದ ತರಗತಿ ಕೊಠಡಿಗಳೊಂದಿಗೆ ಸುಸಜ್ಜಿತವಾದ ಕಂಪ್ಯೂಟರ್ ಲ್ಯಾಬ್, ಗ್ರಂಥಾಲಯ, ಸಭಾಂಗಣಗಳನ್ನು ಹೊಂದಿರುತ್ತದೆ. ವಿದ್ಯಾರ್ಥಿಗಳಿಗಾಗಿ ಶುದ್ಧ ಸಸ್ಯಹಾರಿ ಭೋಜನದ ವ್ಯವಸ್ಥೆ, ಶುಚಿತ್ವ ಹೊಂದಿದ ಶೌಚಾಲಯ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಶಾಲಾ ವಾಹನದ ವ್ಯವಸ್ಥೆ, ನುರಿತ ಚಾಲಕರು ಹಾಗೂ ಸಹಾಯಕ ಸಿಬ್ಬಂದಿಗಳ ವ್ಯವಸ್ಥೆಯನ್ನು ಹೊಂದಿದೆ
ಎನ್.ಇ.ಪಿ.ಗೆ ಅನುಗುಣವಾಗಿ ಸಿ.ಬಿ.ಎಸ್.ಇ ಸಿದ್ಧಪಡಿಸಿದ ಪಠ್ಯಕ್ರಮವನ್ನು ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ವಿಶೇಷವಾಗಿ ಹಾಗೂ ವಿಭಿನ್ನವಾಗಿ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಬೋಧನೆ ಮಾಡಲಾಗುತ್ತದೆ
ವಿದ್ಯಾರ್ಥಿಗಳ ಉತ್ತಮ ಆರೋಗ್ಯದ ಹಿತ ದೃಷ್ಟಿಯಿಂದ ಪ್ರಥಮ ಚಿಕಿತ್ಸೆ, ಉಚಿತ ವೈದ್ಯಕೀಯ ಚಿಕಿತ್ಸೆಗಳನ್ನು ತುರ್ತಾಗಿ ನೀಡಲಾಗುವುದು. ವಿದ್ಯಾರ್ಥಿಗಳಿಗೆ ವಿಶೇಷ ಕೌನ್ಸೆಲಿಂಗ್ ವ್ಯವಸ್ಥೆಯನ್ನು ಸಹ ಹೊಂದಿರುತ್ತದೆ. ನುರಿತ ಅನುಭವಿ ಶಿಕ್ಷಣ ತಜ್ಞರಿಂದ ಪ್ರತಿಯೊಬ್ಬ ಶಿಕ್ಷಕರಿಗೂ ವಿಶೇಷ ತರಬೇತಿಗಳನ್ನು ಸಿ.ಬಿ.ಎಸ್.ಇ ತರಬೇತಿ ಕಾರ್ಯಕ್ರಮಗಳನ್ನು ಹೊಸ ಬದಲಾವಣೆಗಳಿಗೆ ತಕ್ಕಂತೆ ಪಠ್ಯಕ್ರಮವನ್ನು ಬೋಧಿಸುವಲ್ಲಿ ತರಬೇತಿ ನೀಡಲಾಗುವುದು.
ವಿದ್ಯಾ ಸಂಸ್ಥೆಯ ಸರ್ವತೋಮುಖ ಬೆಳವಣಿಗೆಗಾಗಿ ಜವಾಬ್ದಾರಿಯುತವಾಗಿ ಶ್ರಮಿಸುವ ಆಡಳಿತ ಮಂಡಳಿ, ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಮುನ್ನಡೆಸುವ ದಕ್ಷ ನುರಿತ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರನ್ನು ಹೊಂದಿದೆ.
ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗಾಗಿ ಶಾಲಾ ಪೋಷಕರ ಸಭೆಯನ್ನು ಶೈಕ್ಷಣಿಕ ಅವಧಿಯಲ್ಲಿ ಆಯೋಜಿಸಲಾಗುವುದು
ದಾಖಲಾತಿ ಪ್ರಕ್ರಿಯೆ ಆರಂಭವಾಗಿದ್ದು ಪೋಷಕರು ಈ ಕೆಳಗಿನ ಇ-ಮೇಲ್ ಹಾಗೂ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು.
ಇ-ಮೇಲ್: vishwavinayakathekkatte@gmail.com
ದೂರವಾಣಿ ಸಂಖ್ಯೆ : 08762783791, 08254272991/272992

