ತೆಕ್ಕಟ್ಟೆ : ವಿಶ್ವ ವಿನಾಯಕ ಸಿ.ಬಿ.ಎಸ್.ಇ ಸ್ಕೂಲ್‍ನಲ್ಲಿ ಶಿಕ್ಷಕರಿಗೆ “ಫೈನಾನ್ಸಿಯಲ್ ಲಿಟರಸಿ” ಕುರಿತು ಒಂದು ದಿನದ ತರಭೇತಿ ಕಾರ್ಯಾಗಾರವನ್ನು ಆಯೋಜಿಸಲಾಯಿತು. ತ್ರಿಶಾ ಕಾಲೇಜು ಉಡುಪಿ ಇದರ ಪ್ರಾಂಶುಪಾಲರಾದ ಪ್ರೊಫೆಸರ್ ಗುರುಪ್ರಸಾದ್ ರಾವ್‍ರವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದರು. ಶೇರು ಹೂಡಿಕೆ, ಜೀವ ವಿಮೆ ಹಾಗೂ ಭವಿಷ್ಯದ ಸುರಕ್ಷತಾ ದೃಷ್ಠಿಯಿಂದ ಮಾಡುವ ವಿವಿಧ ಹೂಡಿಕೆಗಳ ಕುರಿತು ಮಾಹಿತಿ ನೀಡಿದರು. ಡಿಜಿಟಲ್ ಪೇಮೆಂಟ್ ಹಾಗೂ ಅದರ ಸಾಧಕ ಭಾದಕಗಳ ಕುರಿತು ವಿವರಿಸಿದರು.
ಆನ್ಲೈನ್ ವ್ಯವಹಾರ ಹಾಗೂ ಅದರಲ್ಲಿ ಆಗುವ ಮೋಸಕ್ಕೆ ಬಲಿಯಾಗದಿರಲು ಕೈಗೊಳ್ಳಬಹುದಾದ ಮುನ್ನಚ್ಚರಿಕೆಗಳ ಕುರಿತು ಮಾಹಿತಿ ನೀಡಿದರು. ಶಾಲಾ ಪಠ್ಯಕ್ರಮದಲ್ಲಿ ಈ ಅಂಶಗಳನ್ನು ಅಳವಡಿಸುವ ಅನಿವಾರ್ಯತೆ ಇದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರು, ಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿಯವರು ಉಪಸ್ಥಿತರಿದ್ದರು. ಪ್ರಾಂಶುಪಾಲ ನಿತಿನ್ ಡಿ ‘ ಆಲ್ಮೇಡಾರವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.