ಕೋಟ : ಕೋಟದ ವಿ-ಶೈನ್ ಕೋಚಿಂಗ್ ಸೆಂಟರ್, ರೋಟರಿ ಕ್ಲಬ್ ಸಾಯಿಬ್ರಕಟ್ಟೆ, ಇವರ ಜಂಟಿ ಆಶ್ರಯದಲ್ಲಿ ಕೋಟ ವಿವೇಕ ವಿದ್ಯಾ ಸಂಸ್ಥೆಯ ಮಹಾತ್ಮಗಾಂಧಿ ಮೆಮೋರಿಯ ಹಾಲ್ ನಲ್ಲಿ ಆಯೋಜಿಸಲಾಗಿದ್ದು ಮೊದಲಿಗೆ ನಾವು ಯಾವ ಪರೀಕ್ಷೆಗೆ ತಯಾರಿ ನಡೆಸುವ ಬೇಕೆಂಬ ಮನವರಿಕೆ ಇರಬೇಕು ಅರ್ಥವಾಗದ ಅಪರಿಚಿತ ಪ್ರಶ್ನೆಗಳನ್ನು ಬಗೆಹರಿಸಿಕೊಳ್ಳಲು, ಸ್ನೇಹಿತರು ಮಾರ್ಗದರ್ಶಕರು ಅಥವಾ ಶಿಕ್ಷಕರು ,ವಿಷಯ ತಜ್ಞರು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಓದುತ್ತಿರುವ ಹಿರಿಯರ ಸಹಾಯವನ್ನು ಪಡೆಯಬೇಕು, ಮೊದಲಾಗಿ ನಮ್ಮ ಜೀವನದಲ್ಲಿ ಒಂದು ನಿರ್ದಿಷ್ಟವಾದ ಯೋಜನೆಯನ್ನು ಅಳವಡಿಸಿಕೊಳ್ಳಬೇಕು
ಯೋಜನೆ ಮಾಡಿ ಪರಿಶ್ರಮ ಪಟ್ಟರೆ ಪ್ರತಿಯೊಂದು ವ್ಯಕ್ತಿಯು ಒಬ್ಬ ಅಧಿಕಾರಿಯಾಗಬಹುದೆಂದು ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ ಕಾರ್ಯಾಗಾರವನ್ನು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ. ಕಿರಣ್ ಕುಮಾರ್ ಕೊಡ್ಗಿ ಯವರು ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಗೌರವಾನ್ವಿತ ಅನೇಕ ಅತಿಥಿಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆ ತರಬೇತಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು