ಕೋಟ : ವಿದ್ಯಾರ್ಥಿಗಳಲ್ಲಿ ಎಳವೆಯಲ್ಲಿಯೇ ಸರಕಾರದ ನೀತಿ ನಿಯಮಗಳು, ಸಂಸದೀಯ ನಡವಳಿಕೆಗಳನ್ನು ರೂಢಿಸಿದರೆ ದೇಶದ ರಾಜಕೀಯ ವ್ಯವಸ್ಥೆಗೆ ಭದ್ರ ಬುನಾದಿಯನ್ನು ಹಾಕಬಹುದು ಎಂದು ಕೊಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್ ಬಾರಿಕೆರೆ ನುಡಿದರು.
ಅವರು ಇತ್ತೀಚಿಗೆ ಕೋಟದ ವಿವೇಕ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿ ಸರಕಾರದ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡುತ್ತಿದ್ದರು. ವೇದಿಕೆಯಲ್ಲಿ ವಿದ್ಯಾರ್ಥಿ ಸಭಾಪತಿಯಾದ ಕು.ಸಿಂಚನ ಶ್ರೇಯಾ ವಿದ್ಯಾರ್ಥಿ ನಾಯಕಿ ಪ್ರಜ್ಞಾ ಉಪನಾಯಕಿ ಸಾನ್ವಿ ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯ ಜಗದೀಶ್ ಹೊಳ್ಳ ಪ್ರಾಸ್ತಾವಿಕ ಮಾತುಗಳನ್ನಾಡಿದರು ಹಿರಿಯ ಶಿಕ್ಷಕರಾದ ನರೇಂದ್ರ ಕುಮಾರ್ ಕೋಟ ಸ್ವಾಗತಿಸಿ,ವಂದಿಸಿದರು ಶಿಕ್ಷಕರಾದ ಗಣೇಶ ಶೆಟ್ಟಿಗಾರ್, ಮಹಾಲಕ್ಷ್ಮಿ ಸೋಮಯಾಜಿ ಕಾರ್ಯಕ್ರಮ ಸಂಘಟಿಸಿದ್ದರು.
ಕೋಟದವಿವೇಕ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿ ಸರಕಾರದ ಪ್ರತಿಜ್ಞಾವಿಧಿಯನ್ನು ಕೊಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್ ಬಾರಿಕೆರೆ ಬೋಧಿಸಿದರು. ವೇದಿಕೆಯಲ್ಲಿ ವಿದ್ಯಾರ್ಥಿ ಸಭಾಪತಿಯಾದ ಕು.ಸಿಂಚನ ಶ್ರೇಯಾ ವಿದ್ಯಾರ್ಥಿ ನಾಯಕಿ ಪ್ರಜ್ಞಾ ಉಪನಾಯಕಿ ಸಾನ್ವಿ ಉಪಸ್ಥಿತರಿದ್ದರು.