ಕುಂದಾಪುರ: ಯೋಗ ಇಂದು ಅಂತರಾಷ್ಟ್ರೀಯ ಮನ್ನಣೆ ಪಡೆದಿದೆ. ದೈಹಿಕ ಕ್ಷಮತೆಯೊಂದಿಗೆ ಮಾನಸಿಕ ಕ್ಷಮತೆಗೆ ಯೋಗ ಅತ್ಯಂತ ಸಹಾಯಕಾರಿ. ಇಂದಿನ ಅಸಮರ್ಪಕ ಜೀವನಶೈಲಿಯಲ್ಲಿ ಯೋಗದಲ್ಲಿ ಪಾಲ್ಗೋಳ್ಳಬೇಕಾಗಿರುವುದು ಅಗತ್ಯ. ಯೋಗ ಇದೊಂದು ಬದುಕಿನ ಕಲೆ ಎಂದು ಪ್ರಾಕ್ತನ ವಿದ್ಯಾರ್ಥಿ ಸಂದೀಪ್ ಪೂಜಾರಿ ಹೇಳಿದರು. ಅವರು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಯೋಗ ಮತ್ತು ಫಿಟನೆಸ್ ಸರ್ಟಿಫಿಕೇಟ್ ಕೋರ್ಸ್ ಸಹಭಾಗಿತ್ವದಲ್ಲಿ ವಿಶ್ವಯೋಗ ದಿನಾಚರಣೆ ಹಮ್ಮಿಕೊಳ್ಳಲಾಯಿತು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಸೇವಾ ಯೋಜನಾ ಘಟಕದ ಕಾರ್ಯಕ್ರಮಾಧಿಕಾರಿ ಚೇತನ್ ಶೆಟ್ಟಿ ಕೋವಾಡಿ ಪ್ರಾಸ್ತಾವಿಸಿ, ಸ್ವಾಗತಿಸಿದರು. ಎನ್.ಎಸ್.ಎಸ್ ಸಹಕಾರ್ಯಕ್ರಮಾಧಿಕಾರಿ ದೀಪಾ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಯೋಗ ಮತ್ತು ಫಿಟನೆಸ್ ಸರ್ಟಿಫಿಕೇಟ್ ಕೋರ್ಸಿನ ಸಂಯೋಜಕರಾದ ರೇವತಿ ಡಿ. ವಂದಿಸಿ, ವಿದ್ಯಾರ್ಥಿಗಳಿಗೆ ಯೋಗ ತರಬೇತಿ ನೀಡಿದರು.