ಕುಂದಾಪುರ : ಮೂಡ್ಲಕಟ್ಟೆ ಎಂಐಟಿ ಕಾಲೇಜಿನ ಎಂ.ಬಿ.ಎ ವಿಭಾಗದ ರಾಜ್ಯಮಟ್ಟದ ಅಂತರಕಾಲೇಜು ಮ್ಯಾನೇಜ್‍ಮೆಂಟ್ ಮತ್ತು ಸಾಂಸ್ಕøತಿಕ ಹಬ್ಬ “ಯುವ-2023” ಕಾಲೇಜಿನ ಸಂಭಾಗಣದಲ್ಲಿಉದ್ಘಾಟನೆಗೊಂಡಿತು. ಮುಖ್ಯ ಅತಿಥಿಯಾಗಿ ಉಡುಪಿಯ ಅಜ್ಜರಕಾಡಿನ ಡಾ. ಜಿ ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಭಾಸ್ಕರ್ ಶೆಟ್ಟಿಯವರು ದೀಪ ಪ್ರಜ್ವಲನದೊಂದಿಗೆ ಈ ಕಾರ್ಯಕ್ರಮ ಉದ್ಘಾಟಿಸಿದರು.
ತಮ್ಮ ಉದ್ಘಾಟನಾ ಭಾಷಣದಲ್ಲಿ ಅವರು ಮಾತನಾಡುತ್ತಾ ಕಾರ್ಯಕ್ರಮದ ಹೆಸರಾದ ಯುವ-2023, ಬಹಳ ಅರ್ಥಪೂರ್ಣವಾಗಿದೆ. ದೇಶವನ್ನು ಸಧೃಡವಾಗಿ ಕಟ್ಟುವಲ್ಲಿ ಯುವಜನತೆಯ ಪಾತ್ರ ಮಹತ್ವದ್ದು ಅಮೂಲ್ಯವಾದ ಭಾರತೀಯ ಸಂಸ್ಕøತಿಯನ್ನು ಮುಂದುವರಿಸಲು ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳುವುದು ಅತ್ಯಅವಶ್ಯ ಎಂದು ಹೇಳಿದರು.
ಐ.ಎಂ,ಜೆ. ಸಂಸ್ಥೆಗಳ ನಿರ್ದೇಶಕರಾದ ಪ್ರೋ. ದೋಮ ಚಂದ್ರಶೇಖರ್‍ರವರು ಮಾತನಾಡಿ ವಿದ್ಯಾರ್ಥಿಗಳು ಆತ್ಮವಿಶ್ವಾಸ, ಸಹಾನುಭೂತಿ, ಸೃಜನಶೀಲತೆ ಹಾಗೂ ಚಿಕ್ಕ ಮಗುವಿನಂತೆ ಕೂತುಹಲವನ್ನು ಸದಾ ಬೆಳೆಸಿಕೊಳ್ಳುವುದು ಬಹಳ ಮುಖ್ಯ ಮತ್ತು ಕೆಲಸಗಳನ್ನು ವಿಭಿನ್ನವಾಗಿ ಮಾಡಿ ತೋರಿಸುವ ಸಾಮರ್ಥ್ಯವನ್ನು ಹೊಂದಬೇಕು ಎಂದರು.
ಐ.ಎಂ.ಜೆ. ಐ.ಎಸ್.ಸಿ ವಿದ್ಯಾ ಸಂಸ್ಥೆಗಳ ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕರಾದ ಡಾ. ರಾಮಕೃಷ್ಣ ಹೆಗ್ಡೆ, ಐ.ಎಂ.ಜೆ.ಐ.ಎಸ್.ಸಿ ಪ್ರಾಂಶುಪಾಲರಾದ ಡಾ. ಪ್ರತಿಭಾ ಎಂ. ಪಟೇಲ್, ಎಂಐಟಿಕೆ ಉಪಪಾಂಶುಪಾಲರಾದ ಪ್ರೋ. ಮೆಲ್ವಿನ್ ಡಿಸೋಜ್‍ರವರು, ಡೀನ್ ಟಿ.ಪಿ.ಐ.ಆರ್. ಪ್ರೊ. ಅಮೃತಮಾಲಾ, ಎಂಬಿಎ ವಿಭಾಗ ಮುಖ್ಯಸ್ಥರಾದ ಪ್ರೊ. ಹರೀಶ ಕಾಂಚನ್, ಆಹ್ವಾನಿತ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು, ಕಾಲೇಜಿನ ವಿಭಾಗಮುಖ್ಯಸ್ಥರು, ಉಪನ್ಯಾಸಕ ವರ್ಗ ಮತ್ತು ವಿದ್ಯಾರ್ಥಿವೃಂದದವರು ಉಪಸ್ಥಿತರಿದ್ದರು.
ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಭಾ ಕಾರ್ಯಕ್ರಮದಲ್ಲಿ ಸಿಂಚನಾ ಶೆಟ್ಟಿಯವರು ಸ್ವಾಗತಿಸಿದರು..ನಮೃತಾ ರವರು ಮುಖ್ಯ ಅತಿಥಿಯವರನ್ನು ಪರಿಚಯಿಸಿದರು.. ಸೃಷ್ಠಿ ಕುಂದರ್‌ರವರು ವಂದನಾರ್ಪಣೆಗೈದರು. ಕಾರ್ತಿಕ್‍ರವರು ಕಾರ್ಯಕ್ರಮವನ್ನು ನಿರೂಪಿಸಿದರು.