Home » 15. ದೇಶ ಪ್ರಜ್ಞೆ-ದೇವಪ್ರಜ್ಞೆ
 

15. ದೇಶ ಪ್ರಜ್ಞೆ-ದೇವಪ್ರಜ್ಞೆ

by Kundapur Xpress
Spread the love
  1. ದೇಶ ಪ್ರಜ್ಞೆದೇವಪ್ರಜ್ಞೆ

ದೇಹಪ್ರಜ್ಞೆಯ ತೀವ್ರತೆಯಲ್ಲಿ ಪುಟಿಯುವ ಶಾಶ್ವತತೆಯ ಭಾವದಿಂದ ಮನುಷ್ಯ ಸ್ವಾರ್ಥಪರನಾಗಿ ಬಾಳುವುದು ಸಹಜ. ಸ್ವಾರ್ಥದ ಫಲವಾಗಿಯೇ ಆತನಲ್ಲಿ ದೇಹಶಕ್ತಿಯ ಬಗ್ಗೆ ಅತೀವವಾದ ದುರಹಂಕಾರ, ದುರ್ಬಲರನ್ನು ಶೋಷಿಸುವ ದುರ್ಗುಣಗಳೇ ವಿಜೃಂಭಿಸುತ್ತವೆ. ಕೊನೆಗೆ ದೇಹಪ್ರಜ್ಞೆಯೇ ಆತನ ಅವನತಿಗೆ ಮುಳುವಾಗುತ್ತದೆ. ತಾನೆಷ್ಟು ದುರ್ಬಲ, ತನ್ನ ನಂಬಿಕೆ ಎಷ್ಟು ಭ್ರಾಮಕ ಎನ್ನುವ ಸತ್ಯದ ಅರಿವಾಗುವಾಗ ಆತನ ದೇಹವು ಶಕ್ತಿಗುಂದಿ ಕುಸಿಯಲು ಸಿದ್ಧವಾದ ದುರ್ಬಲ ಕಟ್ಟಡದಂತಿರುತ್ತದೆಎಷ್ಟೋ ಸಂದರ್ಭಗಳಲ್ಲಿ ತಾನು ನಶ್ವರವೆಂಬ ಸೂಚನೆಯನ್ನು ದೇಹವೇ ಮನುಜನಿಗೆ ಪದೇಪದೇ ಕೊಡುತ್ತಿರುತ್ತದೆ. ಆದರೂ ದೇಹದ ಮೇಲಿನ ಮೋಹ ಅಷ್ಟು ಸುಲಭವಾಗಿ ಹೋಗದು. ಆದುದರಿಂದಲೇ ದೇಹಪ್ರಜ್ಞೆಯನ್ನು ದೇಶಪ್ರಜ್ಞೆಯಿಂದಲೂ, ದೇವ ಪ್ರಜ್ಞೆಯಿಂದಲೂ ಗೆಲ್ಲಬೇಕು ಎಂದು ಬಲ್ಲವರು ಹೇಳುವುದು. ದೇಶಪ್ರಜ್ಞೆ ಎಂದರೆ ಸಮಷ್ಟಿ ಹಿತ ಸಾಧನೆಯ ಪ್ರಜ್ಞೆಯನ್ನು ರೂಢಿಸಿಕೊಳ್ಳುವುದು. ಸೇವೆಯೇ ಪರಮ ಧರ್ಮ ಎನ್ನುವ ತತ್ತ್ವಕ್ಕೆ ಬದ್ಧರಾಗಿ ಬದುಕುವುದು. ಸೇವೆಯಲ್ಲೇ ದೇವರನ್ನು ಕಾಣುವ ಮೂಲಕ ದೇವ ಪ್ರಜ್ಞೆಯನ್ನು ಬೆಳೆಸಿಕೊಳ್ಳುವುದು. ಆದರೆ ವಾಸ್ತವವಾಗಿ ನಮಗೆ ದೇಹಪ್ರಜ್ಞೆಯಷ್ಟು ಪ್ರಿಯವಾದದ್ದು ಬೇರೊಂದಿಲ್ಲ. ಹಾಗಿರುವಾಗ ದೇಶಪ್ರಜ್ಞೆ ಮತ್ತು ದೇವಪ್ರಜ್ಞೆ ಮೂಡುವುದಾದರೂ ಹೇಗೆ? ಆದರೂ ಒಂದು ಮಾರ್ಗವಿದೆ. ದೇಹವನ್ನು ಮನಸ್ಸಿನಿಂದಲೂ ಮನಸ್ಸನ್ನು ಬುದ್ಧಿಯಿಂದಲೂ ಬುದ್ಧಿಯನ್ನು ಆತ್ಮಬಲದಿಂದಲೂ ಗೆಲ್ಲುವತ್ತ ಸಾಗುವುದರಲ್ಲೆ ಮೋಕ್ಷಸಾಧನೆಯ ಪ್ರಯತ್ನವಿದೆ ಎನ್ನುವುದನ್ನು ನಾವು ಮನಗಾಣಬೇಕು.

   

Related Articles

error: Content is protected !!