Home » 31.ಆಚರಣೆ-ಬೋಧನೆ
 

31.ಆಚರಣೆ-ಬೋಧನೆ

by Kundapur Xpress
Spread the love
  1. ಆಚರಣೆಬೋಧನೆ

ಒಮ್ಮೆ ತಾಯಿಯೊಬ್ಬಳು ಶ್ರೀ ರಾಮಕೃಷ್ಣ ಪರಮಹಂಸರ ಬಳಿಗೆ ಹೋಗಿ ತನ್ನ ಮಗುವಿಗೆ ಸಿಹಿತಿಂಡಿಯ ಮೇಲಿರುವ ವ್ಯಾಮೋಹವನ್ನು ಬಿಡಿಸಿ ಅದರ ದುಷ್ಟಪರಿಣಾಮಗಳ ಬಗ್ಗೆ ಬೋಧನೆ ಮಾಡಬೇಕೆಂದು ಕೋರಿಕೊಂಡಳಂತೆ. ಪರಮಹಂಸರು ಆಕೆಗೆ ಕೆಲವು ದಿನಬಿಟ್ಟು ಬರಲು ಹೇಳಿದರು. ಸ್ವಲ್ಪ ದಿನಗಳ ಬಳಿಕ ಆಕೆ ಮರಳಿ ಬಂದಾಗ ಇವರು ತಿರುಗಿ ಆಕೆಯನ್ನು ಹಿಂದಕ್ಕೆ ಕಳುಹಿಸಿ ಮತ್ತೆ ಕೆಲವು ದಿನ ಬಿಟ್ಟು ಬರಲು ಹೇಳಿದರು. ಹೀಗೆ ಕೆಲವು ಬಾರಿ ನಡೆಯಿತು. ತಾಯಿಗೆ ಮನಸ್ಸಿನೊಳಗೆ ಅಸಹನೆ ಕುದಿಯಲುತೊಡಗಿತು. ಕೊನೆಗೊಮ್ಮೆ ಪರಮಹಂಸರು ಮಗುವಿನ ತಲೆಯನ್ನು ನೇವರಿಸಿಸಿಹಿತಿಂಡಿ ಆರೋಗ್ಯಕ್ಕೆ ಏನು ಒಳ್ಳೆಯದಲ್ಲ. ನೀನದನ್ನು ಬಿಟ್ಟು ಬಿಡು ಮಗೂ……’ ಎಂದು ಪ್ರೀತಿಯಿಂದ ಹೇಳಿದರು. ಮಗು ಅವರ ಭಾವಪರವಶತೆಗೆ ಪಕ್ಕಾಗಿ ಹಾಗೆಯೇ ಮಾಡವೆನೆಂದಿತು. ಆದರೆ ತಾಯಿಗೋ ಅಸಹನೆಅಸಮಾಧಾನಗಳೇ ಉಕ್ಕಿಬಂದವು. ‘ಇಷ್ಟು ಹೇಳಲು ನನ್ನನ್ನು ಅದೆಷ್ಟು ಬಾರಿ ನೀವು ಹಿಂದಕ್ಕೆ ಕಳುಹಿಸಿದಿರಲ್ಲ ಎಂದು ಕೋಪದಲ್ಲಿ ನುಡಿದಳು. ಪರಮಹಂಸರಿಗೆ ಆಕೆಯ ಮನಸ್ಸಿನೊಳಗಿನ ನೋವು ಅರ್ಥವಾಯಿತು. ಅವರೆಂದರುತಾಯೀ, ಸಿಹಿತಿಂಡಿ ಬಗ್ಗೆ ನನಗಿದ್ದ ವ್ಯಾಮೋಹವನ್ನು ಪ್ರಯತ್ನಪಟ್ಟು ತ್ಯಜಿಸಲು ನನಗೇ ಇಷ್ಟು ದಿನಗಳು ಬೇಕಾದವು. ಈಗ ನಾನು ಮಗುವಿಗೆ ಸಿಹಿತಿಂಡಿ. ತಿನ್ನುವುದು ಒಳ್ಳೆಯದಲ್ಲ ಎಂದು ಹೇಳಲು ಸಾಧ್ಯವಾಗಿದೆ ಎಂದರು. ಸಿಟ್ಟುಗೊಂಡಿದ್ದ ತಾಯಿಗೆ ಒಂದು ಕ್ಷಣ ಯೋಚಿಸುವಂತಾಯಿತು. ಪರಮಹಂಸರ ಮಾತಿನ ಹಿಂದಿದ್ದ ಗೂಢಾರ್ಥ ನಿಧಾನವಾಗಿ ಆಕೆಗೆ ಹೊಳೆಯತೊಡಗಿತು. ಇತರರಿಗೆ ಏನನ್ನಾದರೂ ಬೋಧಿಸುವ ಮೊದಲು ಅದನ್ನು ಸ್ವತಃ ಆಚರಣೆಗೆ ತರಬೇಕೆಂಬ ಪರಮಹಂಸರ ಸಂದೇಶವನ್ನು ಅನುಸರಿಸಿದರೆ ನಮ್ಮೆಲ್ಲರ ಬಾಳು ಸಾರ್ಥಕವಾದೀತು.

   

Related Articles

error: Content is protected !!