ತಾಯಿಯ ಗರ್ಭದಿಂದ ಹೊರಗಡೆ ಬಂದು ಜೀವನ ಏನು ಎಂಬುದನ್ನು ಅರಿತಾಗ ಕಷ್ಟಗಳ ಮಹಾಪೂರಗಳು ನಮ್ಮನ್ನು ಆವರಿಸಿಕೊಂಡು ಬಿಡುತ್ತವೆ.ಗೆಲುವು ಆಕಾಶದಷ್ಟು ದೂರವಿದ್ದರೂ ಮನಸ್ಸನ್ನು ಸಂಕುಚಿತವನ್ನಾಗಿ ಮಾಡಿ ಬಿಡುತ್ತವೆ.ಅವಿರತ ಪ್ರಯತ್ನ ನಿರಂತರ ಛಲವಿದ್ದರೂ ಗೆಲುವು ಸಿಗದಿದ್ದಾಗ ಪ್ರಯತ್ನ ಇಷ್ಟೇ ಸಾಕು ಎಂದು ಮನದಲ್ಲಿ ಮೂಡುವುದು ಸಾಮಾನ್ಯ.ಜೀವನ ಸೋಲುಗಳು ಸುಖ ದುಃಖಗಳು ಪ್ರತಿಯೊಬ್ಬನ ಜೀವನದ ಪ್ರಧಾನ ಅಂಗಗಳು.
ಕುರುಕ್ಷೇತ್ರದಲ್ಲಿ ಅರ್ಜುನನು ಹತಾಶನಾದಂತೆ ಬೆನ್ನು ಬೆನ್ನಿಗೆ ಕಷ್ಟ ಸೋಲುಗಳು ಬಂದಾಗ ನಾವು ಹತಾಶರಾಗುವುದು ಸಾಮಾನ್ಯ.ಜೀವನದಲ್ಲಿ ಅರ್ಜುನನಿಗೆ ಶ್ರೀ ಕೃಷ್ಣನು ಭಗವದ್ಗೀತೆಯನ್ನು ಬೋಧಿಸಿದಂತೆ ನಮ್ಮ ಜೀವನವೆಂಬ ಕುರುಕ್ಷೇತ್ರದಲ್ಲಿ ಶ್ರೀ ಕೃಷ್ಣ ನಂತಹ ಮಾರ್ಗದರ್ಶನ ಕೊಡುವಂತಹ ಗುರು ಜೀವನದ ಸಂಪೂರ್ಣ ಸಾರವನ್ನು ಮತ್ತು ಮಾರ್ಗದರ್ಶನ ಕೊಡುವಂತಹ ಗುರು ಬೇಕು.ಗೆಲುವು ಬಾನಿನ ಎತ್ತರದಷ್ಟೇ ದೂರವಿದೆ.ಮರಳಿ ಪ್ರಯತ್ನ ಮಾಡು ಜೀವನವಿರುವ ತನಕ.ಗೆಲುವು ಸಿಗದಿದ್ದರೇನು, ಮಾಡಿದ ಪ್ರಯತ್ನಗಳ ಸೊಗಡು ಜೀವನದ ಅಂತ್ಯದವರೆಗೆ ನಮ್ಮ ಹೃದಯದಲ್ಲಿರುವುದು. ಯಶಸ್ಸು ಪಡೆಯಬೇಕಾದವನಿಗೆ ನಿನ್ನ ಸೋಲುಗಳೇ ಭಗವದ್ಗೀತೆಯಾಗಬಲ್ಲದು.ಸಾಲು ಸಾಲು ಸೋಲುಗಳು ಮಾಡಿದ ಪ್ರಯತ್ನ ಎಂದಿಗೂ ಹುಸಿಯಾಗುವುದಿಲ್ಲ.
ಸೋಲು ಬಂದರು ಮಾಡಿದ ಪ್ರಯತ್ನಗಳ ಆತ್ಮ ತೃಪ್ತಿ ನಮ್ಮ ಜೀವನದ ಸಾಧನೆಯಾಗಬಲ್ಲದು.ಕೆಲವರಿಗೆ
ಯಶಸ್ಸು ಎಂದರೆ ಹಣ.ಇನ್ನು ಕೆಲವರಿಗೆ ಯಶಸ್ಸು ಎಂದರೆ ಆತ್ಮತೃಪ್ತಿ.ಇನ್ನು ಕೆಲವರಿಗೆ ಯಶಸ್ಸು ಎಂದರೆ ತಾವು ಬಯಸಿದ ಜೀವನ.ಸಂಪೂರ್ಣ ಪುಸ್ತಕದ ವಿವರವನ್ನು ಎರಡೇ ಸಾಲುಗಳಲ್ಲಿ ಬರೆದು ಮುಗಿಸಿ ನಮಗೆ ಓದಲು ಸಮಯವಿಲ್ಲ ಎಂಬ ಈ ಕಾಲದಲ್ಲಿ ಪ್ರಯತ್ನ ಎಂಬುದು ಮರೀಚಿಕೆ ಮಾತ್ರ.ಸಾಧನೆಗೆ ಸಾಲು ಸಾಲು ಪ್ರಯತ್ನಗಳು ಬೇಕು.ಜೇಡ ಮತ್ತೆ ಮತ್ತೆ ಬಲೆಯನ್ನು ಹೆಣೆದಂತೆ.ಹಣ ಮಾಡಲು ಅಡ್ಡ ದಾರಿಗಳಿರಬಹುದು.ಏನೇ ಇರಲಿ ಸಾಧನೆ ಎಂದರೆ ಆತ್ಮ ತೃಪ್ತಿ.ಸೋಲೇ ಬರಲಿ ಗೆಲುವೇ ಬರಲಿ ಆತ್ಮ ತೃಪ್ತಿ ಎಂಬುದೇ ಯಶಸ್ಸಿಗೆ ಇರುವಂತಹ ಮೂಲ ಮಂತ್ರ.ಸಾಲು ಸಾಲು ಸೋಲುಗಳು ಸಾಧಕನ ಪಾಲಿನ ಭಗವದ್ಗೀತೆಯಾಗಬಲ್ಲದು.