ಮನಸ್ಸಿನಾಳದೊಳಗೆ ಹುದುಗಿರುವ ‘ ಬೇಕಾದ್ದನ್ನು ಪಡೆಯುವ ಶಕ್ತಿ’ಯನ್ನು ಅರಿಯುವ ಬಗೆಯಾದರೂ ಹೇಗೆ? ಅದನ್ನು ಉಪಯೋಗಕ್ಕೆ ತರುವ ತಂತ್ರೋಪಾಯವಾದರೂ ಯಾವುದು? ನಿಜಕ್ಕಾದರೆ ಅದು ಅಷ್ಟೇನೂ ಕಷ್ಟದ ವಿಷಯವಲ್ಲ ಎನ್ನುವ ಅಮೃತವಾಣಿಯನ್ನು ನಾವು ಸ್ವಾಮಿ ವಿವೇಕಾನಂದರಿಂದಲೇ ಪಡೆಯಬಹುದು. ‘ಏಳು, ಎದ್ದೇಳು. ನಿನ್ನ ಭವಿಷ್ಯವನ್ನು ರೂಪಿಸುವ ಸಂಪೂರ್ಣ ಜವಾಬ್ದಾರಿಯನ್ನು ಹೊರು. ನಿನ್ನ ಉತ್ತರೋತ್ತರ ಶ್ರೇಯಸ್ಸಿಗೆ ಬೇಕಾದ ಎಲ್ಲ ಶಕ್ತಿ ಸಾಮಥ್ರ್ಯಗಳೂ ನಿನ್ನ ಒಳಗೇ ಇವೆ ನೋಡು. ಅದನ್ನು ಮನನಮಾಡಿಕೋ. ಭವ್ಯ ಭವಿಷತ್ತಿನ ನಿರ್ಮಾಣಕ್ಕೆ ಇಂದೇ ಅಡಿ ಇಡು’ ಎಂದು ಎಚ್ಚರಿಸುವ ವಿವೇಕಾನಂದರ ನುಡಿಯಲ್ಲಿ ಆಂತರ್ಯದ ಸತ್ಯದರ್ಶನವೇ ಇದೆ. ತನ್ನ ಪ್ರಗತಿ ಸಾಧನೆಗಾಗಿ ಮನುಷ್ಯನಿಗೆ ಇರುವ ಮಾರ್ಗೋಪಾಯ ಯಾವುದು ಎಂಬ ಪ್ರಶ್ನೆಗೆ ದಾರ್ಶನಿಕ ಕ್ಲೇರ್ ಬೂತ್ ಲೂಸ್ ಕೊಡುವ ಉತ್ತರ ಹೀಗೆ. ಆಯಾ ದಿನದ ಪ್ರಾಮಾಣಿಕ ಕೆಲಸ, ಆಯಾ ದಿನದ ಪ್ರಾಮಾಣಿಕ ಚಟುವಟಿಕೆ, ಆಯಾ ದಿನದ ಔದಾರ್ಯದ ಮಾತುಗಳು. ಆಯಾ ದಿನದ ಸತ್ಕರ್ಮಗಳು–ಇವುಗಳನ್ನು ಬಿಟ್ಟರೆ ಮನುಷ್ಯನ ಪ್ರಗತಿಗೆ ಬೇರೆ ಯಾವ ಉಪಾಯವೂ ಇಲ್ಲ. ಹಾಗೆ ನೋಡಿದರೆ ಪರೀಕ್ಷೆಯಲ್ಲಿ ಮೊದಲ ರ್ಯಾಂಕ್ ಪಡೆದ ವಿದ್ಯಾರ್ಥಿ ಕೂಡ ತನ್ನ ತಂತ್ರೋಪಾಯದ ಕುರಿತು ಹೇಳುವುದು ಇದೇ ಮಾತನಲ್ಲವೇ? ‘ಆಯಾ ದಿನದ ಪಾಠ–ಪ್ರವಚನಗಳನ್ನು ಆಯಾ ದಿನವೇ ಚೆನ್ನಾಗಿ ಓದಿ, ತಿಳಿದು, ಅರ್ಥಮಾಡಿಕೊಂಡು ಮನಸ್ಸಿನಲ್ಲಿ ಗಟ್ಟಿಮಾಡಿಕೊಂಡೆ. ಪರೀಕ್ಷೆಗಾಗಿ ನಾನು ಬೇರಾವುದೇ ವಿಶೇಷ ತಯಾರಿಯನ್ನು ನಡೆಸಲಿಲ್ಲ.’ ನಿಜ ವಿಷಯ ಹೀಗಿರುವಾಗ ನಮ್ಮ ಜೀವನದ ಪರೀಕ್ಷೆಯನ್ನು ಎದುರಿಸಿ ಗೆಲ್ಲುವುದು ಇದಕ್ಕಿಂತ ಭಿನ್ನವಾಗಿರಲು ಸಾಧ್ಯವೇ?
28.ಜೀವನ ಪರೀಕ್ಷೆ
97
previous post