Home » 1. ನಿರ್ಮೋಹದ ಭಾವ
 

1. ನಿರ್ಮೋಹದ ಭಾವ

ಪಿ.ಸತೀಶ್‌ ಮಲ್ಯ

by Kundapur Xpress
Spread the love
  1. ನಿರ್ಮೋಹದ ಭಾವ

ಸಂಪತ್ತು ಪ್ರಾಪ್ತಿಯಾಗುವುದರ ಜತಗೆಯೇ ಅದು ತರುವ ಭಾವಗಳಲ್ಲಿ ಮೋಹ, ಮದ, ಮತ್ಸರವೂ ಸೇರುತ್ತದೆ. ಮನುಷ್ಯನಿಗೆ ತಾನು ಗಳಿಸಿದ ಸಂಪತ್ತಿನ ಮೇಲೆ ಮೋಹ ಉಂಟಾಗುವುದು ಸಹಜವೇ. ಮೋಹವೆಂದರೆ ಅತಿಯಾದ ಪ್ರೀತಿ ಮತ್ತು ವಾಂಛೆ. ಅದು ಶಾಶ್ವತವಾಗಿ ತನ್ನದೆಂಬ ಭಾವನೆ. ಈ ಮೋಹದಿಂದಲೇ ಉಂಟಾಗುವುದು ಮದ ಮತ್ತು ಮತ್ಸರ. ಸಂಪತ್ತು ಸುಲಭವಾಗಿ ಹುಟ್ಟುಹಾಕುವ ಭಾವಗಳು ಇವೆರಡು. ನಿಜವಾಗಿ ಈ ಭಾವಗಳೇ ಮನುಷ್ಯನ ವಿನಾಶಕ್ಕೆ ಕಾರಣ. ಸಂಪತ್ತಿನ ಮೇಲೆ ಮೋಹ ಉಂಟಾಗದಿರಲು ನಾವೇನು ಮಾಡಬಹುದು? ಪ್ರಶ್ನೆ ಸರಳವೇ ಆದರೂ ಅದರೊಳಗೆ ಅಂತರ್ಗತವಾಗಿರುವ ಸವಾಲು ಗುರುತರವಾದದ್ದೆ. ಇದಕ್ಕೆ ಮಹಾತ್ಮಾ ಗಾಂಧೀಜಿಯವರು ಕೊಡುವ ಉತ್ತರ ಮಾತ್ರ ಅಷ್ಟೇ ಸರಳ. ನಾವು ಸಂಪತ್ತಿನ ಉಸ್ತುವಾರಿದಾರರೆಂದರೆ ಟ್ರಸ್ಟಿಗಳು ಎಂದರ್ಥ ವಿಶ್ವಸ್ತ ವ್ಯವಸ್ಥೆಯಲ್ಲಿ ಟ್ರಸ್ಟಿಯು ಸಂಪತ್ತಿನ ಒಡೆಯನಲ್ಲ. ಆತ ಕೇವಲ ಅದರ ಮೇಲುಸ್ತುವಾರಿಯಷ್ಟೇ ನೋಡಿಕೊಳ್ಳುವಾತ. ತಾನು ಈ ಸಂಪತ್ತಿನ ಒಡೆಯನಲ್ಲ ಎನ್ನುವ ಮೂಲ ಭಾವವೇ ಆತನಲ್ಲಿ ಆ ಸಂಪತ್ತಿನ ಕುರಿತಾದ ನಿರ್ಮೋಹಕ್ಕೆ ಕಾರಣವಾಗುತ್ತದೆ. ನಿಜಕ್ಕಾದರೆ ಈ ನಿರ್ಮೋಹವೇ ಸಂತೃಪ್ತ ಬದುಕಿನ ಮೂಲಾಧಾರ.

   

Related Articles

error: Content is protected !!