Home » ಸಮಾನ ಪ್ರೀತಿ
 

ಸಮಾನ ಪ್ರೀತಿ

by Kundapur Xpress
Spread the love
  1. ಸಮಾನ ಪ್ರೀತಿ

ಸರಳವಾಗಿ ಹೇಳಬೇಕೆಂದರೆ ಆನಂದಮಯ ಬದುಕಿಗೆ ನಾವು ಸುಖವನ್ನೂ ಕೋರಬಾರದು; ದುಃಖವನ್ನೂ ಕೋರಬಾರದು. ಆದರೆ ಅವುಗಳ ಮೂಲಕ ಅವನ್ನು ಮೀರಿರುವುದನ್ನು ಪಡೆಯಲು ಯತ್ನಿಸಬೇಕು. ಅದುವೇ ಸಚ್ಚಿದಾನಂದ. ಎಂದರೆ ಸತ್, ಚಿತ್ ಆನಂದ. ಆನಂದದ ಪರಾಕಾಷ್ಠೆಯೇ ಶಾಂತಿ. ಆ ಸ್ಥಿತಿ ಸಂಪೂರ್ಣವಾಗಿ ವರ್ಣನಾತೀತ. ಈ ಸಚ್ಚಿದಾನಂದ ಪ್ರಾಪ್ತಿಗಾಗಿ ಸ್ವಾಮಿ ವಿವೇಕಾನಂದರ ಕಿವಿಮಾತು ಹೀಗಿದೆ: ‘ಯಾರು ಭಗವಂತನನ್ನು ಪ್ರೀತಿಸಬೇಕೆಂದು ಯತ್ನಿಸುತ್ತಾರೋ ಅವರು ಪ್ರಾಪಂಚಿಕ ಅತ್ಯಾಸೆಗಳಿಂದ ಪಾರಾಗಬೇಕು. ದೇವರನ್ನು ಅಲ್ಲದೆ ಮತ್ತೆ ಏನನ್ನೂ ಆಶಿಶಬಾರದು’. ಕೇಳಲು ಈ ಮಾತು ಬಹಳ ಸುಂದರ ಮತ್ತು ಸರಳ. ಆದರೆ ಅದನ್ನು ಆಚರಣೆಗೆ ತರುವುದು ಬಹಳ ಕಷ್ಟ. ನಾವು ಇಂದು ಉಸಿರಾಡುತ್ತಿರುವುದೇ ‘ಕಾಮನೆಗಳ ಯುಗ’ದಲ್ಲಿ. ಭೊಗಲಾಲಸೆಗಳ ಪ್ರಪಂಚದಲ್ಲಿ. ನಮ್ಮಲ್ಲಿ ತುಂಬಿರುವ ನೂರು ಕಾಮನೆಗಳನ್ನು ಕ್ಷಣಾರ್ಧದಲ್ಲಿ ಲಕ್ಷೋಪಲಕ್ಷ ಕಾಮನೆಗಳನ್ನಾಗಿ ಪರಿಪರ್ತಿಸುವ ‘ಮಾರ್ಕೆಟಿಂಗ್ ಯುಗ’ ಇದು. ಮನುಷ್ಯನಾಗಿ ಹುಟ್ಟಿ ಬಂದಿರುವುದೇ ಇಂದ್ರಿಯ ಸುಖವನ್ನು ಭೋಗಿಸಲಿಕ್ಕೆ ಎಂಬ ಪಾಶ್ಚಾತ್ಯ ಮಂತ್ರವನ್ನು ನಾವು ಅನುದಿನವೂ ಅನುಕ್ಷಣವೂ ಜಪಿಸುತ್ತಿರುತ್ತೇವೆ. ಹಾಗಿರುವಾಗ ದೇವರನ್ನು ಪ್ರೀತಿಸಬೇಕಿದ್ದರೆ ಬೇರೇನನ್ನೂ ಪ್ರೀತಿಸ ಕೂಡದು ಎಂದರೆ ಹೇಗೆ? ಆದರೆ ಸತ್ಯ ಹೀಗಿದೆ: ದೇವರ ಹೊರತು ಇನ್ನೇನನ್ನು ಪ್ರೀತಿಸಿದರೂ ನಿರಂತರ ದುಃಖಕರವಾದ ಬಂಧನಕ್ಕೆ ನಮ್ಮನ್ನು ನಾವು ಗುರಿಪಡಿಸಿಕೊಂಡಂತಾಗುತ್ತದೆ. ನಿಜಕ್ಕಾದರೆ ವೈಯುಕ್ತಿಕವಾಗಿ ಯಾರೊಬ್ಬರನ್ನೂ ಪ್ರೀತಿಸುವುದು ಕೇವಲ ಬಂಧನವೇ ಆಗಿದೆ. ಆದರೂ ಎಲ್ಲ ಭೇದಭಾವಗಳನ್ನು ಮರೆತು ಎಲ್ಲರನ್ನೂ ಸಮಾನವಾಗಿ ಪ್ರೀತಿಸಿದಾಗಲೇ ಆಸೆಗಳೆಲ್ಲ ಬಿದ್ದು ಹೋಗುತ್ತವೆ ಎನ್ನುತ್ತದೆ ವಿವೇಕವಾಣಿ.  ಎಲ್ಲರನ್ನೂ ಸಮಾನವಾಗಿ ಪ್ರೀತಿಸಲು ಸಾಧ್ಯವಾದರೆ ಮಾತ್ರವೇ ದೇವರನ್ನು ಪ್ರೀತಿಸಲೂ ಸಾಧ್ಯವಾಗುತ್ತದೆ!

   

Related Articles

error: Content is protected !!