ಇಂದ್ರೀಯ ಸುಖವೇ ಪರಮಸುಖವೆಂಬ ಏಕರೂಪದ ಚಿಂತನೆಯಲ್ಲಿ ಮನುಷ್ಯನಿಗೆ ತನ್ನ ಆಸ್ತಿ, ಸಂಪತ್ತು, ಸ್ಥಾನಮಾನ, ಕೀರ್ತಿ ಮೊದಲಾದವುಗಳೇ ಶಾಶ್ವತವೆಂಬ ಭ್ರಮೆಯನ್ನು ಉಂಟುಮಾಡುತ್ತವೆ. ನಾವು ಹುಟ್ಟಿ ಬಂದಿರುವುದೇ ಇಂದ್ರಿಯ ಸುಖ ಅನುಭವಿಸಲು ಎಂಬ ಭಾವನೆ ಎಲ್ಲೆಡೆಯ ಜನರಲ್ಲಿ ಏಕರೂಪವಾಗಿ ಬೇರು ಬಿಟ್ಟಿದೆ. ಇಂದ್ರಿಯ ಸುಖಗಳ ಬೆನ್ನುಹತ್ತಿರುವ ಮನುಷ್ಯನ ನಿಜಸ್ವರೂಪ ಅತ್ಯಂತ ಕರಾಳವಾಗಿರುವುದರ ಬಗ್ಗೆ ಯಾವ ಸಂದೇಹವೂ ಬೇಡ. ಇಂದ್ರಿಯ ಸುಖಗಳನ್ನು ಹೆಚ್ಚೆಚ್ಚು ಭೋಗಿಸಿದಂತೆ ಮನುಷ್ಯನಿಗೆ ಮೃಗೀಯ ಪ್ರವೃತ್ತಿ ಮತ್ತಷ್ಟು ತೀವ್ರಗೊಳ್ಳುವುದೇ ವಿನಾ ಅದು ಕಡಿಮೆಯಾಗುವ ಮಾತಿಲ್ಲ. ಪ್ರಾಣಿಗಳು ಹೊಟ್ಟೆತುಂಬ ತಿನ್ನುವಾಗ ಅಥವಾ ಲೈಂಗಿಕ ಆನಂದವನ್ನು ಅನುಭವಿಸುವಾಗ ಪ್ರಪಂಚದ ಪರಿವೆಯೇ ಇಲ್ಲದಂತೆ ವರ್ತಿಸುವುವೋ ಹಾಗೆಯೇ ಮನುಷ್ಯನ ಸ್ಥಿತಿ. ಪ್ರಾಣಿಗಳಿಗೆ ಹೋಲಿಸಿದರೆ ಮನುಷ್ಯರಲ್ಲಿ ಇರುವ ಹೆಚ್ಚುಗಾರಿಕೆ ಎಂದರೆ ಆಲೋಚನಾ ಶಕ್ತಿ, ವಿವೇಚನಾ ಶಕ್ತಿ, ದೈಹಿಕ ಕಾಮನೆಗಳನ್ನು ತನ್ನ ನಿಯಂತ್ರಣದಲ್ಲಿ ಇರಿಸಿಕೊಳ್ಳುವ ಶಕ್ತಿ. ಇಂದ್ರೀಯ ಸುಖವೇ ಪ್ರಧಾನ ವಾಗಿರುವ ಪ್ರಾಣಿಗಳು ತಮ್ಮ ಸುಖಕ್ಕೆ ಒಂದಿಷ್ಟು ಚ್ಯುತಿಯುಂಟಾದಾಗ ಬುದ್ಧಿಭ್ರಮಣೆಗೆ ಒಳಗಾದಂತೆ ವರ್ತಿಸುತ್ತವೆ. ಎಂತಹ ರಾಕ್ಷಸೀ ಪ್ರವೃತ್ತಿಯನ್ನೂ ಮೆರೆಯುತ್ತವೆ. ನಿಜಕ್ಕಾದರೆ ಇಂದ್ರಿಯ ಸುಖ ಭೋಗವನ್ನೇ ಬದುಕಿನ ಪ್ರಧಾನ ಉದ್ದೇಶವನ್ನಾಗಿ ಮಾಡಿಕೊಂಡು ಬದುಕುವ ಮನುಷ್ಯರ ಸ್ಥಿತಿ ಇದಕ್ಕಿಂತ ಭಿನ್ನವಾಗಿರಲಾರದು. ಇಂದ್ರಿಯ ಸುಖವನ್ನು ಅನುಭವಿಸಿದಷ್ಟೂ ಇಂದ್ರಿಯಗಳ ಸುಖಲೋಲುಪತೆಯ ಶಕ್ತಿ ಇನ್ನಷ್ಟು ತೀವ್ರಗೊಳ್ಳುವುದು. ಪರಿಣಾಮವಾಗಿ ಮೃಗೀಯ ಪ್ರವೃತ್ತಿಯೇ ಆಳತೊಡಗುವುದು.
ಮೃಗೀಯ ಸ್ವರೂಪ
120
previous post