ಕುರುಕ್ಷೇತ್ರದಲ್ಲಿ ಗುರುಹಿರಿಯರನ್ನು, ಬಂಧುಗಳನ್ನು ಕಂಡೊಡನೆಯೇ ತಾನು ಯುದ್ಧಮಾಡುಲೊಲ್ಲೆ ಎಂದು ವಿಷಾದದಿಂದ ನುಡಿವ ಅರ್ಜುನನ ವೈರಾಗ್ಯವನ್ನು ಕಂಡು ಕೃಷ್ಣನು ಗೇಲಿಯಿಂದ ನುಡಿಯುವ ಮಾತುಗಳನ್ನು ನಾವು ಗಮನಿಸಬೇಕು. ‘ಇಂತಹ ವಿಷಮ ಸಮಯದಲ್ಲಿ ಈ ಮೋಹವು ನಿನಗೆ ಯಾವ ಕಾರಣದಿಂದ ಬಂತು? ಏಕೆಂದರೆ ಇದು ಶ್ರೇಷ್ಠ ಪರುಷರ ಆಚರಣೆಯೂ ಅಲ್ಲ, ಸ್ವರ್ಗವನ್ನು ದೊರಕಿಸುವುದೂ ಅಲ್ಲ. ಹಾಗೆಯೇ ಕೀರ್ತಿಯನ್ನು ತರುವಂತಹುದೂ ಅಲ್ಲ’ ಸ್ವರ್ಗವನ್ನು ದೊರಕಿಸುವುದೂ ಅಲ್ಲ, ಹಾಗೆಯೇ ಕೀರ್ತಿಯನ್ನು ತರುವಂತಹುದೂ ಅಲ್ಲ’ ಎನ್ನುವ ಕೃಷ್ಣನ ಮಾತಿನಲ್ಲಿ ಅರ್ಜುನನ್ನು ವಿಭ್ರಮೆ ಗೀಡುಮಾಡಿದ ಮೋಹವು ಅದೆಷ್ಟು ತೀವ್ರವಾದುದು ಎಂಬ ಅಂಶವು ಸ್ಪಷ್ಟವಾಗುತ್ತದೆ. ಮೋಹದ ತೀವ್ರತೆಯಲ್ಲಿ ಉಂಟಾಗುವ ವೈರಾಗ್ಯವು ತಾತ್ಕಾಲಿಕವೂ ಅರ್ಥಹೀನವೂ ಆಗಿರುವುದರಲ್ಲಿ ಸಂದೇಹವಿಲ್ಲ. ವಿಷಯವನ್ನು ವಸ್ತುನಿಷ್ಠವಾಗಿ ಅರಿಯದೆ ಕೇವಲ ಭಾವ ತೀವ್ರತೆಯಲ್ಲಿ ಉಂಟಾಗುವ ವೈರಾಗ್ಯವು ಶ್ಮಶಾನವೈರಾಗ್ಯವೆಂದೇ ಕರೆಯಲ್ಪಡುತ್ತದೆ. ‘ಕೊಲ್ಲುವವನು ನೀನೆಂದು ತಿಳಿಯಬೇಡ; ನೀನು ಕೇವಲ ನೆಪ ಮಾತ್ರ; ನೀನು ನಿನ್ನ ಪಾಲಿನ ಕರ್ಮವನ್ನಷ್ಟೇ ಮಾಡಲಿಕ್ಕಿರುವವನು. ಈ ಬದುಕಿನಲ್ಲಿ ನೀನು ಕೇವಲ ಪಾತ್ರಧಾರಿ, ನಾನೇ ಸೂತ್ರಧಾರಿ’ ಎಂಬ ಕೃಷ್ಣ ಮಾತಿನಲ್ಲಿ ನಾವು ಬದುಕಿನಲ್ಲಿ ಎಷ್ಟರ ಮಟ್ಟಿಗೆ ‘ಡೌಟು-ಟು-ಅರ್ತ್’ ಆಗಿರುವ ಅಗತ್ಯವಿದೆ ಎಂಬ ಸಂದೇಶವು ಅಡಕವಾಗಿದೆ. ಬದುಕಿನ ಯಶಸ್ಸು ಅಡಗಿದೆ ಎಂಬುದೇ ಆ ಸಂದೇಶ. ಜೀವನದಲ್ಲಿ ಯಶಸ್ಸು ದಕ್ಕಿದಾಗಲೆಲ್ಲ ‘ಅದು ನನ್ನಿಂದಲೇ ಸಾಧ್ಯವಾಯಿತು’ ಎಂಬ ಭ್ರಮೆಯಲ್ಲಿ ನಾವು ಬೀಗುತ್ತೇವೆ. ಈ ಭ್ರಮೆಯ ತೀವ್ರತೆಯಲ್ಲಿ ನಾವು ಸಂತಸಪಟ್ಟಷ್ಟೂ ನಮ್ಮ ಶಕ್ತಿ-ಸಾಮರ್ಥ್ಯಗಳು ಕುಂದಲಾರAಭಿಸುತ್ತವೆ. ಬದುಕನ್ನು ವಸ್ತುನಿಷ್ಠವಾಗಿ ನೋಡುವ ಶಕ್ತಿಯನ್ನು ಕಳೆದುಕೊಳ್ಳುತ್ತೇವೆ.