Home » ಬಂಧಮುಕ್ತಿ
 

ಬಂಧಮುಕ್ತಿ

by Kundapur Xpress
Spread the love

ಶ್ರೀ ನಾರಾಯಣ ಗುರುಗಳ ಪ್ರಕಾರ ‘ದೇಹ, ಮನಸ್ಸು, ಬುದ್ಧಿ ಹಾಗೂ ಆತ್ಮದ ಅರಿವೇ ನಿಜವಾದ ಬಂಧಮುಕ್ತಿ; ಇವುಗಳ ವಿಷಯದಲ್ಲಿನ ಅಜ್ಞಾನವೇ ಗುಲಾಮಗಿರಿ.’ ಈ ಮಾತನ್ನು ನಾವು ಸರಿಯಾಗಿ ಅರಿತರೆ ಬದುಕಿನಲ್ಲಿ ಸ್ವಾತಂತ್ರ್ಯ ಹಾಗೂ ಬಂಧನಗಳ ಅರ್ಥ ಸ್ಪಷ್ಟವಾಗುತ್ತದೆ. ದೇಹವು ಹೇಳಿದಂತೆ ಕೇಳಿಕೊಂಡು ಬದುಕುವುದನ್ನು ಮೃಗೀಯ ಪ್ರವೃತ್ತಿಗೆ ಹೋಲಿಸಬಹುದು. ಅಂತಹ ಬದುಕಿನಲ್ಲಿ ತರ್ಕ, ವಿಚಾರ, ವಿವೇಕ, ಸಹನೆ ಮುಂತಾದ ಗುಣಗಳಿಗೆ ಅವಕಾಶವೇ ಇಲ್ಲ. ಅಂತೆಯೇ ಬದುಕಿನ ಯಾವುದೇ ಕಾಯಕದಲ್ಲಿ ಹಿಂದುಮುಂದು ಯೋಚಿಸುವ ಪ್ರಶ್ನೆಯೇ ಇಲ್ಲ. ಸಿಟ್ಟು, ಸಿಡುಕು, ಅಸಹನೆ, ದ್ವೇಷ, ಅಸೂಯೆ ಕ್ಷಣ ಮಾತ್ರದಲ್ಲಿ ಪ್ರಕಟವಾಗುತ್ತವೆ. ಒಡನೆಯೇ ಅವುಗಳ ಪರಿಣಾಮವೂ ಅನುರಣಿಸುತ್ತದೆ. ಹಾಗಾಗಿ ಬದುಕು ಶೋಚನೀಯವಾಗುತ್ತದೆ. ದುರಂತಮಯ ವಾಗುತ್ತದೆ. ಅಂತಹವರು ತಮ್ಮ ಬದುಕನ್ನು ಮಾತ್ರವಲ್ಲ, ತಮ್ಮೊಂದಿಗೆ ಜೀವಿಸುವ ಬಂಧು ಬಳಗದವರ ಬದುಕನ್ನು ಕೂಡ ದುರಂತಮಯಗೊಳಿಸುತ್ತಾರೆ. ಹೀಗೆ ಬದುಕನ್ನು ಬದುಕುವ ಮಂದಿ ಜೀವನದ ಉದ್ದಕ್ಕೂ ಬಂಧಿಗಳೇ ಆಗಿರುತ್ತಾರೆ. ದೇಹದ ಭಾಷೆಯನ್ನು ಚೆನ್ನಾಗಿ ಅರಿತವರಿಗೆ ಅದನ್ನು ಹದ್ದುಬಸ್ತಿನಲ್ಲಿಡುವುದು ಕೂಡ ತಿಳಿದಿರುತ್ತದೆ. ಬದುಕಿನಲ್ಲಿ ಸುಖ, ಸಂತೋಷ, ಸಂತೃಪ್ತಿ ಸಿಗಬೇಕಿದ್ದರೆ ಮೊದಲು ದೇಹವನ್ನು ಮನಸ್ಸಿನ ಮೂಲಕ ಅರಿತು ಅದರ ಮೇಲೆ ನಿಯಂತ್ರಣವನ್ನು ಹೊಂದಬೇಕು. ಹಾಗೆ ಮಾಡಲು ಯಾರಿಗೆ ಸಾಧ್ಯವೋ ಆತನಿಗೆ ಮಾತ್ರವೇ ತನ್ನ ಮೇಲೆ ಮೊದಲು ಸುಧಾರಣೆಯನ್ನು ತರಲು ಸಾಧ್ಯ. ಖ್ಯಾತ ಚಿಂತಕ ಬೇಕನ್ ಕೂಡ ಇದನ್ನೇ ಹೇಳುತ್ತಾನೆ: ತನ್ನ ಮೇಲೆ ಸುಧಾರಣೆಯನ್ನು ಮೊದಲು ಪ್ರಯೋಗಿಸಿಕೊಳ್ಳುವವನೇ ಶ್ರೇಷ್ಠ ಸುಧಾರಕ! ಎಂದರೆ ದೇಹವನ್ನು ಮನಸ್ಸಿನಿಂದ ನಿಯಂತ್ರಿಸುವ ಸಾಮಥ್ರ್ಯವನ್ನು ನಾವು ಮೊತ್ತ ಮೊದಲಾಗಿ ಹೊಂದಬೇಕು ಎಂದರ್ಥ.

   

Related Articles

error: Content is protected !!